ಚೀರಿದ್ದು, ಮೆನ್ನಯ್ಯ.'
ತಕ್ಷಣ ಎದ್ದು, ಯಾರನ್ನೂ ತುಳಿಯದಂತೆ ಎಚ್ಚರ ವಹಿಸಿ, ಬಟಾ ಅತ್ತ ನಡೆದು, ಮೆನ್ನನ ಪಕ್ಕದಲ್ಲಿ ಕುಳಿತ.
" ಅಯ್ಯ! ಅಯ್ಯ !"
ಮುಖವನ್ನು ಎರಡೂ ಅಂಗೈಗಳಿಂದ ಮುಚ್ಚಿಕೊಂಡಿದ್ದ ಮೆನ್ನ ಅದುರಿದ ಗಂಟಲಲ್ಲಿ " ಹ್ಞ ?" ಎಂದ ; ಅಂಗೈಗಳನ್ನು ಸರಿಸಿದ." ಕೂಗಿಕೊಂಡಿರಿ, ಅಯ್ಯ. "
" ಹ್ಞ. ನಮ್ಮ ಅಂಬಿಗ ಹೋಹೋಹೋ ಅನ್ತಿದ್ದಹಾಗೆ ಮಹಾ ಅಚ೯ಕನ ದೋಣಿ ನಮ್ಮದಕ್ಕೆ ಗುಮ್ಮಿತು. ಮೂರು ದೋಣಿಗಳಲ್ಲಿ ಇನ್ನೂರು ಯೋಧರು...."
" ದು:ಸ್ವಪ್ನ. "
" ಹ್ಞ. ಹೌದು. (ಮೂಡಣ ದಿಕ್ಕಿಗೆ ದೃಷ್ಟಿ ಹಾಯಿಸಿ) ಶವ ಕಾಣೆಯಾದದ್ದು ಇಷ್ಟು ಹೊತ್ತಿಗೆ ಕಾವಲುಗಾರ ಭಟರ ದಳಪತಿಗೆ ಗೊತ್ತಾಗಿರಬಹುದೂಂತ ಭಾವಿಸೋಣ. ಅದು ಅಮಾತ್ಯರಿಗೆ ವರದಿಯಾಗೋದು ನಸುಕಿನಲ್ಲಿ. ಪೆರೋಗೆ ಅಮಾತ್ಯ ವರದಿ ಮಾಡೋದು ಬೆಳಿಗ್ಗೆ. ಅಷ್ಟು ಹೊತ್ತಿಗೆ, ರಾತ್ರೆ ಯಾರೋ ಲೇಪನಸಾಮಗ್ರಿ ಕೊಂಡ್ಕೊಂಡ್ರು ಅಂತ ಅಪೋಫಿಸ್ ಮಹಾ ಅಚ೯ಕರಿಗೆ ಹೇಳ್ತಾನೆ. ಚೌಯ೯ದ ತನಿಖೆ ರಾಜಧಾನೀಲಿ ನಡೀತದೆ. ಮಧ್ಯಾಹ್ನದ ಊಟ ಆದ ಮೇಲೆ ದಂಡಯಾತ್ರೆ ಆರಂಭ. "" ನಾಯಕರನ್ನು ನೀರಾನೆ ಪ್ರಾಂತಕ್ಕೆ ಒಯ್ತಿರಬಹುದು ಅಂತ ಯಾರಿಗಾದರೂ ಸಂದೇಹ ಹುಟ್ಟೀತು. "
" ಖಂಡಿತ. ನೀರಾನೆ ಪ್ರಾಂತದವರ ದೋಣಿ ನೋಡಿದಿರಾ ಅಂತ ಎದುರು ಸಿಕ್ಕಿದವರನ್ನು ಕೇಳ್ಕೊಂಡು, ವೇಗವಾಗಿ ಬರ್ತಾರೆ. "
" ಹಗಲು ಒಮ್ಮೆ, ಕತ್ತಲಾದ ಮೇಲೆ ಒಮ್ಮೆ ದಂಡೆ ಮುಟ್ಟಿದರೆ ಸಾಕು. ಅವರ ದೋಣಿಗಳಿಗಿಂತ ಹೆಚ್ಚೆಂದರೆ ಒಂದು ದಿವಸ, ಕಮ್ಮಿ ಎ೦ದರೆ ಒ೦ದು ಹೊತ್ತು ಮುಂಚೆಯೇ ನಾವು ಊರು ಸೇರ್ತೇವೆ. "
ಸಂವಾದ ಹತ್ತಿರ ಇದ್ದವರಿಗೆಲ್ಲ ಕೇಳಿಸಿತು. ತುಸು ಆಚೆ ಈಚೆ ಇದ್ದವರಿಗೂ ಅರ್ಥವಾಯಿತು.
ಪುಟ:Mrutyunjaya.pdf/೬೦೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಮೃತ್ಯುಂಜಯ
೫೮೭