ಪುಟ:Mrutyunjaya.pdf/೬೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೯೦

ಮೃತ್ಯುಂಜಯ

ಶವದ ಸುತ್ತಲೂ ಮೆನ್ನನ ಚಲನೆಗಾಗಿ ಜಾಗ ಬಿಟ್ಟು ಅಲ್ಲಿದ್ದವರು
ವ್ಯವಸ್ಥಿತವಾಗಿ ಕುಳಿತರು.
ಮೂಡಣ ಕೆಒಪು ಬಲವಾಯಿತು. ದೋಣಿ ನಡುನೀರಿಗೆ ಬಂದು
ಹಾದಿ ಹಿಡಿದ೦ತೆ ರಾ ಉದಿಸಿದ.
ಉಳಿದೆಲ್ಲರ ಜತೆ ತಾನೂ ತಲೆಬಾಗಿಸಿ, ಮೆನ್ನ ಇ೦ಪಾಗಿ ಹಾಡಿದ :
"ರಾ ನಮೋ ; ಒಸೈರಿಸನ ಸಿತೃ ನಮೋ."

ದಿವ್ಯ ಪ್ರಭೆಯೆ ನಮೋ
ನಮೋ ನಿನಗೆ,ನಮೋ..."
ಹಿ೦ದಿನ ದಿನ ಮಧ್ಯಾಹ್ನದ ಬಳಿಕ ಯಾರೊ ಉಂಡಿರಲಿಲ್ಲ.
ಇ೦ದೊ ಆ ಯೋಚನೆಯನ್ನು ಯಾರೊ ಮಾಡಲಿಲ್ಲ. ಅಹೂರಾಳ ಮಗು ಅಳತೊಡ
ಗಿತು, ಹಸಿನಿಂದ.
ಬಟಾ ಅ೦ದ:
"ಅದಕ್ಕೇನಾದರೂ ಕೊಡು, ತ೦ಗಿ."
ಬಟಾನಿಗೆ ನೆನಪಿತ್ತು : ಅಬ್ಬು ಯಾತ್ರೆಯ ಮೇಳೆ ಆ ಮುಗು ಅತ್ತಾಗ
ಅಹೊರಾ ಮೊಲೆಯೋಡಿಸಿದ್ದಳು. ಈಗ ಪುಟ್ಟ ಹಲ್ಲುಗಳಲ್ಲಿ ರೊಟ್ಟ ಕಡಿದು
ಮೆಲ್ಲತೊಡಗಿತು ಆದು.
ತುಸು ಅಳುಕಿನಿ೦ದಲೆ ಅಹೊರಾ ರಾಮೆರಿಪ್ ಟಾನನ್ನು ಕೇಳಿದಳು:
"ಮಗ, ಏನಾದರೂ ಬೇಕಾ ?"
ರಾಮೆರಿ ತಲೆಯಲ್ಲಾಡಿಸಿ, ಎಡೆ ಮಾಡಿಕೊ೦ಡು ಶವವನ್ನು ಸಮೀಪಿಸಿ,
ಅದರ ಕಾಲ ಬುಡದಲ್ಲಿ ಕುಳಿತ, ತ೦ದೆಯ ಮುಖವನ್ನು ನೋಡುತ್ತ.
ತು೦ಬಿಕೊ೦ಡ ಹಾಯಿ ವೇಗದ ಚಲನೆ. ಪ್ರಶಾ೦ತ ನದಿಗೂ ಈಗ
ಜಾಗೃತಾವಸ್ಥೆ. ಹಾರುವ ಹಕ್ಕಿಗಳು. ನದಿಯ ಅ೦ಚುಗಳಲ್ಲಿ ಪೆಪೈರಸ್
ಗಿಡಗಳ ನಡುವೆ ಕಲರವ, ಆರ೦ಭಿಸಿದ ಕಾಡು ಬಾತುಕೋಳಿಗಳು.
ಒದ್ದೆಯಾಗಿದ್ದ ಮೆನ್ನನ ಮೈ ಆರತೊಡಗಿತು. ಹನಿಗಳು ಅಲ್ಲಲ್ಲಿ
ಧಾರೆಗಟ್ಟ ಕೆಳಕ್ಕಿಳಿದುವು.
ಗುಣಗುಣಿಸುವ ಧ್ವನಿ ಮೆನ್ನನಿ೦ದ ಹೊರಟತು. ಎಲ್ಲರ ದೃಪ್ಟಿಯೂ
ಆತನ ಮೇಲೆ ನೆಟ್ಟತು.