ಪುಟ:Mrutyunjaya.pdf/೬೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೯೨

ಮೃತುಂಜಯ



ಸಮರದಿಂದ ಮನೆಗೆ
ಮರಳಿ బంದವನ೦ತೆ........"
ನೀರು ಸೋಂಕಿ, ಬಿರುನೆಲ ತೋಯ್ದು, ಮೆದುಮಣ್ಣಿನల్లి ಬೀజ
ಮೊಳಕೆಯೊಡೆದ ಅನುಭವ ಆಗುವಂಥ ಹಾಡು. ಸಾವು ಭೀಕರವಲ್ಲ. ಅದರ
ಮುಂದೆ ಅಧೀರರಾಗುವುದು ಅನಗತ್ಯ ಎನಿಸಿತು ಮೆನ್ನನ ಹಾಡನ್ನು ಕೇಳು
ತ್ತಿದ್ದವರಿಗೆ.
ತಾನು ಸೃಷ್ಟಿಸಿದ ಅಲೆಗಳಲ್ಲಿ ತೇಲುತ್ತ ಅವನು ಮುಂದುವರಿದ:
“ ಸಾವು ನನ್ನ ಮುಂದಿದೆ ఇంದು
ಆಗಸದಿ ಮೋಡಗಳು ಚದರಿದ೦ತೆ
ತಾನು ಅರಿಯದ ಆದರೂ ಬಯಸುವ
ವಸ್ತುವನು ಪಡೆದವನಂತೆ......
"ಸಾವು ನನ್ನ ಮು೦ದಿದೆ ఇంದು
ಹಲವು ವರುಷಗಳ ಬ೦ದಿ
ಮನೆಗಾಗಿ ಹ೦ಬನಿ ಕ೦ಬನಿ ಸುರಿಸುವ೦ತೆ ."
ಬಟಾ ಯೋಚಿಸಿದ: ಅಣ್ಣನ ಸಾವು ಬಿಡುಗಡೆಯಲ್ಲ. ಘೋರ
ಪಾತಕ. ಆದರೂ ಸಾವಿನ ಎದುರು ಹತಾಶರಾಗಬಾರದು.
ಮುಕ್ತಾಯಗೊಳಿಸುತ್ತ, ಕ್ರಮಶಃ ಕುಗ್ಗುತ್ತ ಸಾಗಿದ ಧ್ವನಿಯಲ್ಲಿ,
ಮೆನ್ನ ಹಾಡಿದ :
" ಸಾವು ನನ್ನ ಮುಂದಿದೆ ಇಂದು....ಸಾವು ನನ್ನ ಮು೦ದಿದೆ ఇంದು......"
ತಲೆತಗ್ಗಿಸಿ ತಂದೆಯ ಪಾದಗಳನ್ನೆ ನೋಡುತ್ತ ಕುಳಿತಿದ್ದ ರಾಮೆರಿಷ್ ಟಾ
ನತ್ತ ಬಟಾ ದೃಷ್ಟಿ ಹರಿಸಿದ. ಹುಡುಗನ ಕಣ್ಣುಗಳು ಎಲ್ಲೋ ಸ್ವಲ್ಪ ತೇವ
ಗೊ೦ಡಿದ್ದಂತೆ ಕಂಡಿತು. ಮೆನ್ನನ ಹಾಡಿನ ಪ್ರಭಾವ. 'ఇದು ಸಾಲದು
ಗೊಳೋ ಎ೦ದು ರಾಮೆರಿ ಅಳಬೇಕು'__ಎ೦ದುಕೊ೦ಡ ಬಟಾ