ಪುಟ:Mrutyunjaya.pdf/೬೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೫೯೯

“ನೀನೂ ಬಾ ಅಣ್ಣ.”...
ಅವರಿಬ್ಬರೂ ದೋಣಿಯನ್ನೇರಿ ಮೆನೆಪ್ ಟಾನ ರಕ್ಷಿತ ಶವದ ಪಕ್ಕದಲ್ಲಿ
ಆ ಆಹಾರವನ್ನಿಟ್ಟರು.
ಉಳಿದವರಿಗೆ ಅವಸರದ ಬುತ್ತಿಯೂಟ. ಎರಡೆರಡು ಗುಟುಕು ಖಿವವ
ಪಾನೀಯ ಕೂಡಾ.
ಇತರರ ಜತೆ ರಾಮರಿಪ್ಟಾನೂ ಈರುಳ್ಳಿ ಕಚ್ಚಿಕೊಂಡು ಎರಡು
ಮೂರು ಚೂರು ರೊಟ್ಟಿ ತಿಂದ.
*** *
ಹಾಯಿ ಮತ್ತೆ ಹರಡಿಕೊಂಡು ದೋಣಿಯನ್ನು ನೀರಾನೆ ಪ್ರಾಂತದತ್ತ
ಸೆಳೆಯಿತು. ಅಂಬಿಗರಿಗೆ ಸ್ವಲ್ಪ ಹೊತ್ತು ವಿಶ್ರಾಂತಿ. ಆ ಪಯಣಿಗರಲ್ಲಿ
ಹೆಚ್ಚಿನವರು ಹುಟ್ಟು ಹಾಕುವ ಅನುಭವವಿದ್ದವರೇ. ಅವರಲ್ಲಿ ನಾಲ್ವರು ಬದಲಿ
ಅಂಬಿಗರಾದರು.
ಇರುಳು. ವೇಗಕ್ಕೆ ಇದು ಅಡ್ಡಿಯಲ್ಲ. ಆದರೆ ಎಷ್ಟು ಹೊತ್ತಿಗೋ
ಒಮ್ಮೆ ಎದುರುಗಡೆಯಿಂದ ಬರುವ ದೋಣಿಯ ಬಗೆಗೆ, ಕಾಣದ ಕತ್ತಲೆಯಲ್ಲಿ
ಹೆಚ್ಚು ಎಚ್ಚರ ವಹಿಸಬೇಕು.
ಈಗ ಸಂವೇದನೆ ವೈಯಕ್ತಿಕವಲ್ಲ, ಸಾಮುದಾಯಿಕ, ಎಲ್ಲರ ಯೋಚನೆ
ವಿಚಾರಗಳೂ ಆತಂಕ ಕಾತರಗಳೂ ಒಂದೇ. ಮರುಹುಟ್ಟು ಪಡೆಯಲಿರುವ
ಮೆನೆಪೇಟಾ ಅಣ್ಣನೊಡನೆ ಸುರಕ್ಷಿತವಾಗಿ, ಬೇಗನೆ, ತಾವು ಊರು ಸೇರ
ಬೇಕು. ಅಲ್ಲಿ....ಅಲ್ಲಿ....
ಬಟಾ ಅಂದ :
“ ಮಹಾ ಅರ್ಚಕರ ತಂಡ__ದಂಡು ಈಗ ಲಿಷ್ಟ್ ತಲುಪಿರಬಹುದು.”
"ಹ್ಜ."
“ ನಮ್ಮನ್ನು ಅವರು ಹಿಂದಿಕ್ಕೋದು ಸಾಧ್ಯವಿಲ್ಲ. ಆದರೂ ಹಿಂದು
ಗಡೆಗೂ ನಾವು ನೋಡ್ತಿರೇಕು, ಸರದಿಯಲ್ಲಿ ಕಾವಲು ಕೂತೊಬೇಕು.”
“ ಹೌದು, ಬಟಾ ಅಣ್ಣ. ನಾನು ನಿನ್ನೆ ರಾತ್ರಿ ನಿದ್ದೆ ಮಾಡಿದೆ.
ಇವತ್ತು ನಿಮ್ಮ ಸರದಿ. ನಾನು ಎಚ್ಚರವಿರ್ತೇನೆ. ಹುಟ್ಟು ಹಾಕುವವರನ್ನೂ