ಪುಟ:Mrutyunjaya.pdf/೬೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೦೦ ಮೃತ್ಯುಂಜಯ ನನ್ನನ್ನೂ ಬಿಟ್ಟು ಉಳಿದವರೆಲ್ಲ ನಿದ್ದೆ ಮಾಡಿ....” ಅಯ್ಯ, ದೋಣಿಕಾರ ನಾನು.” “ ಅಲ್ಲ ಅಂದೆನೆ? ನಾನು ಕೇವಲ ಕಾವಲುಗಾರ, ನೀರಾನೆ ಪ್ರಾಂತದ ದೋಣಿ ಬರ್‍ತದೇನೋ ಅಂತ ಮೆಂಫಿಸಿನಲ್ಲಿ ರಾತ್ರೆ ಕಾದಿದ್ದೆ. ಹೌದಾ ?” " ಸೋತೆ ಮೆನ್ನಯ್ಯ. ನೀವಂದಂತೆಯೇ ಆಗಲಿ. ಈ ರಾತ್ರೆಯ ಮಟ್ಟಿಗೆ ಒಪ್ದೆ. ನಾಳೆಯಿಂದ ಕತ್ತಲಲ್ಲಿ ಕಾಯೋದು-ಹುಟ್ಟು ಹಾಕೋದು ನನ್ನ ಕೆಲಸ." ತಂಗಾಳಿಗೆ ಇತರರ ಎವೆಗಳು ಮುಚ್ಚಿಕೊಳ್ಳುತ್ತಿದ್ದಂತೆ, ಮೆನ್ನ ಆಕಾಶ ವನ್ನು ದಿಟ್ಟಿಸಿ ನಕ್ಷತ್ರಗಳನ್ನು ಗುರುತಿಸತೊಡಗಿದ. ನಕ್ಷತ್ರಗಳ ಬಗೆಗೆ ತನಗೆ ಗೊತ್ತಿರುವುದು ಬಹಳ ಸ್ವಲ್ಪ ಎನಿಸಿತು. ಅವುಗಳ ಎಣಿಕೆ ಆರಂಭಿಸಿದ ಅದೂ ಬೇಸರವಾಗಿ, ಹಿಂದಿನಿಂದಲೋ ಮುಂದಿನಿಂದಲೋ ದೋಣಿಗಳ ಸದ್ದಿಗೆ ಕಿವಿ ಗೊಟ್ಟ. ಮೆನೆಪ್ಟಾನ ಲೇಪಿತ ಶವ ನಕ್ಷತ್ರಗಳ ಬೆಳಕಿನಲ್ಲಿ ಬೆಳ್ಳಗೆ ಶುಭ್ರ ವಾಗಿ ಕಂಡಿತು. ನೀಲನದಿಯ ತಟದಲ್ಲಿ ನಾಯಕನನ್ನು ತಾನು ಮೊದಲ ಬಾರಿ ಕಂಡುದನ್ನು ನೆನೆದ. ಆ ರಾತ್ರೆ ಹಾಡುತ್ತ ಕುಳಿತಿದ್ದೆ. 'ಇಂದು ಯಾರೊಡನೆ ನಾ ಮಾತಾಡಲೀ...” ಮೆನೆಪ್ಟಾನನ್ನು ಕಂಡ ಮೇಲೆ, 'ಆ ಹಾಡು ಇನ್ನು ಬೇಡ' ಎನಿಸಿತು. ಮೆನೆಪ್ಟಾ ಹೋದ ಮೇಲೂ ಅದನ್ನು ಮತ್ತೆ ಹಾಡಬೇಕು ಎಂದು ತೋರುತ್ತಿಲ್ಲ, ರಾಜಧಾನಿಯಲ್ಲೇ ಉಳಿದಿದ್ದರೆ ಹಾಡುತ್ತಿದ್ದೆನೇನೋ, ಅಥವಾ ನೀಲನದಿಯ ಗರ್ಭಕ್ಕೆಇಳಿಯುತ್ತಿದ್ದೆನೇನೋ.... ಇನ್ನು....'ಯಾರೊಡನೆ ನಾ ಮಾತಾಡಲೀ...” ಎಂದು ಚಿಂತಿಸಬೇಕಾದುದಿಲ್ಲ. ಇವರೊಡನೆ ನಾನು ಮಾತನಾಡಬಹುದು. ನಾಯಕನ ಪ್ರಾಂತದ ಎಲ್ಲ ಜನರೊಡನೆ. ಅವರು ನನ್ನ, ಹೊಸ ನಾಡಿನ ಹೊಸ ಬೀಡಿನ ಬಂಧುಗಳು.... ರಾಮೆರಿಪ್ಟಾ ಸದ್ದಿಲ್ಲದೆ ಎದ್ದು, ಉದ್ದಕ್ಕೂ ನಡೆದು, ದೋಣಿಯ ತುದಿಯನ್ನು ಆಗಲೇ ತಲಪಿದ್ದ. ('ಎಳೆಯನಿಗೆ ನಿದ್ದೆ ಬರುತ್ತಿಲ್ಲ.') ಅಲ್ಲಿ ದೋಣಿಯ ಅಂಚಿಗೆ ಆತು ಅದೆಷ್ಟು ಹೊತ್ತು ನಿಂತನೊ..? ಇದ್ದಕ್ಕಿದ್ದಂತೆ, ತುದಿಭಾಗದಿಂದ ಬಿಕ್ಕಿಬಿಕ್ಕಿ ಗಟ್ಟಿಯಾಗಿ ಆಳುವ ಸದ್ದು ಕೇಳಿಸಿತು ; ಆಳು ಬೇಗನೆ ನಿಲ್ಲುವ ಸೂಚನೆ ಕಾಣಿಸಲಿಲ್ಲ. ಆವರೆಗೂ ಅದುಮಿ ಹಿಡಿದಿದ್ದ ಎಳೆಯನ ದುಃಖ ಭೋರ್ಗರೆಯುವ ರೋದನವಾಯಿತು.