ಪುಟ:Mrutyunjaya.pdf/೬೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಮೃತ್ಯುಂಜಯ

೫೯೩

ಮತ್ತೆ ಸ್ವಲ್ಪ ಹೊತ್ತು ಮೆನ್ನ ಬರಿಯ ರಾಗಗಳನ್ನು ಕುರುಕಿದ.
ದಿಗಂತದಲ್ಲಿ ಒಂದು ಮೊಳ ಮೇಲಕ್ಕೆ ಬಂದಿದ್ದ ರಾನ ಭವ್ಯ ರೂಪ. ಆ
ಪ್ರಭೆಗೆ ಬೆನ್ನು ಮಾಡಿ ಕುಳಿತಿದ್ದ ಮೆನ್ನ. ಮೆಂಫಿಸನ್ನು ತಲಪಿದ ಕ್ಷಣದಿಂದ
ಈ ಬೆಳಗಿನವರೆಗಿನದೆಲ್ಲ ಆ ಜನರ ಪಾಲಿಗೆ ಅತಿ ಕ್ರೂರ ಅನುಭವ. ಎಂದೂ
ಮರೆಯುವಂಥದಲ್ಲ. ಆದರೆ ಮೆನ್ನ ಅವರ ಪಾಲಿಗೆ ಮರಳುಗಾಡಿನಲ್ಲಿ ದೊರೆತ
ನೀರಿನ ಸೆಲೆ.
ಅವನ ಧ್ವನಿ ಕೇಳಿಸಿತು:
“ಮಹಾನ್ ಜೀವಗಳಿಗೆ ಸಾವು ಅನ್ನೋದೇ ಇಲ್ಲ, ಇಲ್ಲಿ ಉಸಿರು
ನಿಂತ ಮೇಲೂ ಅವರು ಮೂರು ಸಾವಿರ ವರ್ಷ ಬಾಳ್ತಾರೆ. ಗೋರಿಯೊಳಗಿಂದ
ಚೇತನ ಹೊರಗೆ ಬಂದು ಹಾರಾಡ್ತಾ ತಿರುಗಾಡ್ತಾ ಇರದೆ. ತಾನು ಕೈ
ಕೊಂಡಿದ್ದ ಮಹತ್ಕಾರ್ಯವನ್ನು ಮುಂದುವರಿಸೋದಕ್ಕೋಸ್ಕರ ಅದು ಮತ್ತೂ
ದುಡೀತದೆ. ನೀರಾನೆ ಪ್ರಾಂತದ ನಾಯಕ ಮೆನೆಪ್ಟಾ ಅಂಥ ಮಹಾನ್
ಜೀವ..ಇವರು ಮರುಹುಟ್ಟ ಪಡೀತಾರೆ,”
ಬಟಾನ ಗುಂಡಿಗೆ ಡವಡವನೆಂದಿತು. ಹೊಸ ಉಸಿರನ್ನು ಬರಮಾಡಿ
ಕೊಳ್ಳುತ್ತ ಶ್ವಾಸಕೋಶಗಳು ಹಿಗ್ಗಿದುವು. ಇದಲ್ಲವೆ ಎಲ್ಲರ ಬಯಕೆ ?__ಎಲ್ಲರ
ನಿರೀಕ್ಷೆ ?
" ಧೂಪ ಪಾತ್ರೆಗಿಷ್ಟು ಪುಡಿ ಹಾಕು, ರಾಮೆರಿ,” ಎಂದಳು ಅಹೂರಾ,
ಹೊಗೆ ಇಲ್ಲದುದನ್ನು ಗಮನಿಸಿ.
ಅಷ್ಟು ಮಾಡಿ ರಾಮೆರಿ, ಔಟ ಕೊಟ್ಟ ಒಂದು ಕಡ್ಡಿಯಿಂದ ಕೆಂಡ
ವನ್ನು ಕೆದಕಿದ. ಧೂಮ ಮತ್ತೆ ಕಾದಸಿಕೊಂಡು ಪಸರತೊಡಗಿತು.
ಮೆನ್ನ ಮುಂದುವರಿದ :
“ ಶವಲೇಪನ ಮರುಹುಟ್ಟಿಗೆ ಸಿದ್ಧತೆ. ಪೆರೋನೋ ಮಹಾ ಅರ್ಚ
ಕರೋ ಅಮಾತ್ಯರೋ ಸತ್ತರೆ, ಮೂಗಿಗೆ ಕಬ್ಬಿಣದ ಕೊಂಡಿ ಹಾಕಿ ಮೆದುಳು
ಹೊರಗೆಳೀಬೇಕು: ಕರುಳನ್ನೂ ತೆಗೆದು ರಕ್ಷಿಸ್ಬೇಕು; ಶರೀರವನ್ನು ಎಪ್ಪತ್ತು ದಿನ
ರಸಾಯನ ದ್ರವದಲ್ಲಿ ಅದ್ದಬೇಕು , ಆಮೇಲೆ ಸೆಣಬಿನ ಪಟ್ಟಿಯಿಂದ ಸುತ್ತಿ
ಗೋರಿಕಾಣಿಸ್ಬೇಕು. ಆದರೆ, ಅಷ್ಟೆಲ್ಲ ಜನನಾಯಕನಿಗೆ ಮಾಡೋದು
ಸಾಧ್ಯವಾ ? ನಮ್ಮದು ಸುಲಭ ವಿಧಾನ, ಸರಳ ಕ್ರಮ.. ಶವಲೇಪನ ಕ್ರಿಯೆ

೩೮