ಪುಟ:Mrutyunjaya.pdf/೬೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೯೪

ಮೃತ್ಯುಂಜಯ

ಯನ್ನು ನೆರವೇರಿಸುವ ದೇವಸೇವಕನದು ಅನೂಬಿಸ್ ದೇವತೆಯ ಪಾತ್ರ.
ಒಸೈರಿಸ್ ದೇವನಿಗೆ ಶವಲೇಪನ ಮಾಡಿದು ತೋಳರೂಪಿ ಅನೂಬಿಸ್.....
ನಾನಿನ್ನು ತೋಳಮುಖವಾಡ ತೊಟ್ಕೊಳ್ತೇನೆ....”
ಮೆನ್ನ ಲೇಪನ ಸಾಮಗ್ರಿಗಳಿದ್ದ ಮೂಲೆಯಿಂದ ತೋಳನ ಮುಖವಾಡ
ವನ್ನೆತ್ತಿ, ತನ್ನ ಮುಖಕ್ಕೆ ಅದನ್ನಿರಿಸಿ, ಅದು ಜಾರಿ ಬೀಳದಂತೆ ತಲೆಯ
ಹಿಂಬದಿಯಿಂದ ಕುಣಿಕೆ ಹಾಕಿದ. ಜನ ಕೌತುಕದಿಂದ ಮೆನ್ನನನ್ನು ನೋಡಿ
ದರು. ಮುಖವಾಡದಲ್ಲಿ ಕೊರೆದಿದ್ದ ತೂತುಗಳೇ ತೋಳನ ಕಣ್ಣುಗಳು.
ಅವುಗಳ ಮೂಲಕ ಸಹಪ್ರಯಾಣಿಕರನ್ನು ಆತ ದಿಟ್ಟಿಸಿದ.
('ಗಂಭೀರವಾಗಿದ್ದಾರೆ. ಸೃಷ್ಟಿಯಾಗುತ್ತಿರುವ ಅದ್ಭುತ ವಾತಾವರಣದ
ಪ್ರೇಕ್ಷಕರು ಇವರು. ನಾನು-ಬೇಕಾದರೆ ಅಳಬಹುದು, ಮುಖವಾಡದ ಮರೆ
ಯಲ್ಲಿ ಮನದಣಿಯೆ ಕಣ್ಣೀರು ಸುರಿಸಬಹುದು.)
ಪ್ಟಾ ಸ್ತೋತ್ರ ಪಠಿಸಿ ಮೆನ್ನನೆಂದ:
“ಸತ್ತವನ ನಾಮೋಚ್ಚಾರ ಮಾಡಿದರೆ ಅವನು ಮತ್ತೆ ಜೀವಂತ
ವಾಗ್ತಾನೆ.”
ಭಕ್ತಿಭಾವದಿಂದ ಅರೆಮುಚ್ಚಿದ ಕಣ್ಣುಗಳನ್ನು ಆಹೂರ ಅಗಲವಾಗಿ
ತೆರೆದಳು. ಹಿಂದಿನ ರಾತ್ರಿ ಅಂಗಡಿಕಾರ ಅಯ್ಯ....ಅಪೋಫಿಸ್-ಇದೇ
ಮಾತನ್ನು ಹೇಳಿದ್ದನಲ್ಲ? ದೇವವಾಕ್ಯ, ದೇವವಾಕ್ಯ.
ಮೆನ್ನ ಮತ್ತೂ ಅಂದ :
“ಅನೂಬಿಸ್ ದೇವತೆ ಲೇಪನಕ್ರಿಯೆ ನಡೆಸುವಾಗ, ಆಗಾಗ ನೀವು
ಮೃತನ ನಾಮೋಚ್ಚಾರ ಮಾಡಿ, ಮೃತನ ನಾಮ ಎಂದರೆ, ಆ ಲೋಕದ
ಒಡೆಯ ಒಸೈರಿಸನನ್ನೂ ಸ್ಮರಿಸ್ತೇವೆ.”
ಶ್ರೋತೃಗಳು 'ನಾವು ಬಲ್ಲೆವು' ಎನ್ನುವಂತೆ ತಲೆಯಾಡಿಸಿದರು. ಅನೂಬಿಸ್ ರೂಪಿ ಮೆನ್ನನೆಂದ :
“ಓ ಒಸೈರಿಸ್ ! ಓ ಒಸೈರಿಸ್ !”
ಪುನರುಚ್ಚಾರ ಮುಗಿಯುತ್ತಲೇ ಬಟಾ ನುಡಿದ:
ಓ ಮೆನೆಪ್ಟಾ ! ಓ ಮೆನೆಪ್ಟಾ !"