ಜನರು ತಾವೂ ಆ ನಾಮೋಚ್ಚಾರ ಮಾಡಿದರು.
ನಿಧಾನವಾಗಿ ಸಾಗುತ್ತಿದ್ದ ಒಂದು ದೋಣಿಯನ್ನು ಹಿಂದಿಕ್ಕುವುದು
ಅನಿವಾರ್‍ಯವಾಯಿತು. ಆ ದೋಣಿಯಿಂದ ಆದಷ್ಟು ಅಂತರದಲ್ಲೇ ಬಟಾನ
ದೋಣಿ ಮುಂದುವರಿಯಿತು. ಆಗ ಮೌನ. ಆ ವೇಳೆಯಲ್ಲಿ, ಮೆನ್ನ
ಕುಳಿತು ಮೊಣಕಾಲುಗಳೆಡೆಯಲ್ಲಿ ತೋಳಮುಖವನ್ನಿರಿಸಿದ.
ಮುಂದೆ ಎದುರು ದಿಕ್ಕಿನಿಂದ ಒಂದು ದೋಣಿ ಬಂದಾಗಲು ಅಷ್ಟೆ.
ಬಟಾನ ಅಂಬಿಗರು ಎಚ್ಚರ ವಹಿಸಿ ಅದರಿಂದ ದೂರವಿದ್ದರು.
ಜಾಡಿಯಲ್ಲಿದ್ದ ನಿಸರ್ಜನ ತೈಲದಲ್ಲಿ ಪಿಚಕಾರಿಯನ್ನು ಅದ್ದಿ ಮೆನ್ನ
ಹೇಳಿದ :
"ಶವವನ್ನು ಸ್ವಲ್ಪ ಮಗ್ಗುಲಿಗೆ ಮಗ್ಗುಲಿಗೆ ಹೊರಳಿಸಬೇಕು. ಈ ಎಣ್ಣೆ ಗುದದ್ವಾರ
ದಿಂದ ಒಳಹೋಗುತ್ತದೆ."
ಔಟ ಬೆಕ್ ನೆರವಾದರು. ತಣುಪೇರಿ ಮರವಾಗತೊಡಗಿದ್ದ ಅವಯವ
ಗಳು. ದಹಿಸುವ ಕ್ಷಾರಗುಣದ ಔಷಧೀಯ ತೈಲ ಕರುಳುಗಳ ಮಾರ್ಗವಾಗಿ
ಒಳಕ್ಕೆ ಸರಿಯಿತು. ಮೆನೆಪ್ಟಾನ ನಾಮೋಚ್ಚಾರದ ಹಿನ್ನೆಲೆಯಲ್ಲಿ ಮೆನ್ನ
ಬೆಣೆ ಇರಿಸಿ, ತಾಮ್ರದ ಸೂಜಿಯನ್ನೂ ಸೆಣಬಿನ ದಾರವನ್ನೂ ಬಳಸಿ, ಗುದ
ದ್ವಾರವನ್ನು ಹೊಲಿದ. ಬಾಯಿಗೂ ಹೊಲಿಗೆ ಹಾಕಿದ. ಸೆಣಬಿನ ಚಿಂದಗಳನ್ನಿರಿಸಿ ಮೂಗು ಕಿವಿಗಳನ್ನು ಮುಚ್ಚಿದ.
ತನಗೇ ಹೊಲಿಗೆ ಹಾಕಿದಷ್ಟು ವೇದನೆ ರಾಮೆರಿಪ್ಟಾಗೆ.
ಆತ ಕುಳಿತಲ್ಲೇ ಮುಲು ಮುಲು ನರಳಿದ ; ಮೌನವಾಗಿ ಗೋಳಾಡಿದ. ಧೂಪ ಪುಡಿಯನ್ನು ಮಾತ್ರ ಆಗಾಗ್ಗೆ ಧೊಪ ಪಾತ್ರೆಗೆ ಚೆಲ್ಲಿದ.
ಬಿಸಿಲೇರಿತು. ರಾ ನೆತ್ತಿಯ ನೇರಕ್ಕೆ ಬಂದ.
“ಬಿಸಿಲು ಬಾಡಿದ ಮೇಲೆ ವಿಸರ್ಜನೆ ಕ್ರಮ. ಆ ಬಳಿಕ ಬಾಹ್ಯಲೇಪನ. ಮುಚ್ಚಂಜೆಯ ಹೊತ್ತಿಗೆ ದಂಡೆ ಮುಟ್ಟ ಬುತ್ತಿಯೂಟ,” ಎಂದ ಮೆನ್ನ.
[ಮೆನ್ನ: 'ನನಗೂ ಹಸಿವಾಗ್ತದೆ. ನಿನ್ನೆ ಮಧ್ಯಾಹ್ನ ಈ ಬಂಧುಗಳು ನೀಡಿದ ಒಂದು ತುಣುಕು ರೊಟ್ಟಿಯನ್ನು ನಾನು ಬಾಯಿಗಿಟ್ಟಿದ್ದೆ ಅಲ್ಲವೆ ?'
ಸ್ವಲ್ಪ ತಡೆದು ಒಂದು ಯೋಚನೆ.
'ತೋಳ ಮುಖವಾಡ ! ಸದಾಕಾಲವೂ ಇಂಥದೊಂದು ಮುಖವಾಡ