ಪುಟ:Mrutyunjaya.pdf/೬೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೦೫

ಶವದ, ಶವವನ್ನು ಕದ್ದವರ ಶೋಧೆಗೆ ಹೋದ ತಂಡ ಬರಿಗೈಯಲ್ಲಿ
ಮರಳಿತು.
....ಮೆರವಣಿಗೆ, ಜನಜಂಗುಳಿ....ಭಕ್ತಿ ಪ್ರದರ್ಶನ, ದಂಡಿನಿಂದ ಆವೃತ
ನಾಗಿ ಪೀಠಪಲ್ಲಕಿಯಲ್ಲಿ ಕುಳಿತ ಮಹಾ ಅರ್ಚಕ, ಪ್ ಟಾದೇವರು,
ನಾಲ್ವರು ಹೊತ್ತುಕೊಂಡ ಪೀಠದ ಮೇಲೆ, ಪಕ್ಕದಲ್ಲಿ ಇನೇನಿ, ಬಲ
ಪ್ರದರ್ಶನ.
ರಾ ನೆತ್ತಿಯ ಮೇಲೆ ಬರಲು ಇನ್ನೂ ಸ್ವಲ್ಪ ಹೊತ್ತಿದ್ದಾಗಲೇ ದೋಣಿ
ಕಟ್ಟೆಯಲ್ಲಿ ಅಮಾತ್ಯ ಧರ್ಮಗುರುವಿಗೆ ಬಾಗಿ ನಮಿಸಿ ವಿದಾಯ ನುಡಿದ.
ಮೊದಲ ದೋಣಿಯಲ್ಲಿ ಎದೆ ಎತ್ತರದ ಪೀಠಸ್ಥ ಪೇಟಾ ಮೂರ್ತಿ.
ಅದರ ಪಕ್ಕದಲ್ಲಿ ಪೀಠದ ಮೇಲೆ ನಿಂತ ಮಹಾ ಅರ್ಚಕ ಕೆಳಗೆ ಇನೇನಿ,
ಬಕಿಲ, ಮಹಾ ಅರ್ಚಕನ ಸಹಾಯಕರಾದ ಕಿರಿಯ ದೇವಸೇವಕರು,
ನೀರಾನೆ ಪ್ರಾಂತದ ಭೂಮಾಲಿಕ ನುಟ್ ಮೋಸ್, ಕೆಲ ಸೈನಿಕರು. ಹೇಪಾಟ್
ವಿಶ್ರಾಂತಿ ಪಡೆಯಲು, ನಿದ್ರಿಸಲು ಮೇಲ್ಯಾವಣಿಯ ರಕ್ಷಣೆ, ಬಿಸಿ ರೊಟ್ಟಿ
ತಯಾರಿಸಲು ಒಲೆ ವ್ಯವಸ್ಥೆ, ಎರಡನೆಯ ದೋಣಿ ತುಂಬ ಸೈನಿಕರು
ಮೂರನೆಯದರಲ್ಲಿ ಮಹಾ ಅರ್ಚಕನ ಪೀಠ, ಪಲ್ಲಕಿ, ಅಸ್ತ್ರಗಳು, ಬಲೆಗಳು,
ಆಹಾರ ಸಾಮಗ್ರಿ, ಅಡುಗೆ ಪರಿಕರಗಳು, ದಾಸದಾಸಿಯರು ಮತ್ತು ಕೆಲ
ಸೈನಿಕರು. ಅವರಲ್ಲಿ ಒಬ್ಬನಾಗಿದ್ದ, ಶೀಬಾಳ ಗಂಡ.
ಯೋಧರೇ ಅಂಬಿಗರು. ದೋಣಿಗಳು ನಡುನೀರಿಗೆ ತಲಪುತ್ತಲೆ
ಹಾಯಿಗಳು ತುಂಬಿಕೊಂಡವು. ಮಹಾ ಅರ್ಚಕನ ಅನುಜ್ಞೆಯನ್ನು ಇನೇನಿ
ಬಕಿಲನಿಗೆ ತಿಳಿಸಿದ. ಅವನು ಕೂಗಿ ನುಡಿದ : (ಹಿಂಬಾಲಿಸುತ್ತಿದ್ದ ದೋಣಿ
ಗಳ ಮುಖ್ಯಸ್ಥರು ಆದೇಶವನ್ನು ಪುನರುಚ್ಚರಿಸಿದರು.)
“ಶವ ಕದ್ದವರ ದೋಣಿಯನ್ನು ನಾವು ಹಿಡೀಬೇಕು. ವೇಗ ಹೆಚ್ಚಿಸಿ!
ವೇಗ ಹೆಚ್ಚಿಸಿ !”
ಉದ್ದಕ್ಕೂ ಹಲವು ದೋಣಿಗಳನ್ನು ಅವರು ಹಿಂದಿಕ್ಕಿದರು. ನೀರಾನೆ
ಈ ಪ್ರಾಂತದವರು ಯಾರೂ ಬಕಿಲನ ಕಣ್ಣಿಗೆ ಬೀಳಲಿಲ್ಲ.
(ತಂಡದ ಮೂರನೆಯ ದೋಣಿ ಬರುವುದು ಸ್ವಲ್ಪ ನಿಧಾನವಾಯಿತು.