ಪುಟ:Mrutyunjaya.pdf/೬೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦೬

ಮೃತ್ಯುಂಜಯ

ಹಾಯಿಯ ಹಗ್ಗ ಬಿಚ್ಚಿಕೊಂಡಿತು. ಒಂದು ಹುಟ್ಟು ಕಳಚಿಕೊಂಡಿತು.
ದೋಣಿಯ ಅಂಚಿನಲ್ಲಿ ಕುಳಿತಿದ್ದ ಒಬ್ಬ ದಾಸ ನೀರಿಗೆ ಬಿದ್ದ. ಅವನನ್ನು
ಮತ್ತೆ ದೋಣಿಗೆ ಎಳೆದುಕೊಳ್ಳಲು ಸಮಯ ಹಿಡಿಯಿತು.
ದೇವತಾಮೂರ್ತಿಯ ಜತೆಗೆ ಸ್ವಲ್ಪ ಹೊತ್ತು ತಾನೂ ಪ್ರತಿಮೆಯಾಗಿ
ನಿಂತ, ಮಹಾ ಅರ್ಚಕ. ಹಿಂದಿನ ಧರ್ಮಯಾತ್ರೆಗಳಲ್ಲಿ ಬೆಳಿಗ್ಗೆ ಮಧ್ಯಾಹ್ನ
ಸಂಜೆ ಅವರ ದೋಣಿ ದಡ ಸೇರುತ್ತಿತ್ತು-ಧರ್ಮಗುರುವಿನ ಸ್ನಾನಕ್ಕಾಗಿ;
ಆದರೆ ಈ ಸಲದ್ದು ಅವಸರದ ಯಾನ ; ಏನು ಮಾಡುವರೋ ? ತುಸು ಅಳು
ಕುತ್ತಲೇ ಇನೇನಿ ಕೇಳಿದ :
“ ಸ್ನಾನ ? ”
ಮಹಾ ಅರ್ಚಕರ ಉತ್ತರ ಬಂತು :
"ಬೆಳಿಗ್ಗೆ ಒಮ್ಮೆ ದಡ ಮುಟ್ಟಿದರೆ ಸಾಕು. ಮಧ್ಯಾಹ್ನ__ಸಂಜೆ
ಇಲ್ಲಿಯೇ ಮೈ ತೋಯಿಸಿಕೊಳೇನೆ. "ದಂಡು ಆಗಾಗ್ಗೆ ಕೆಳಗೆ ಇಳಿದರೆ ತಡ
ವಾಗ್ತದೆ.”
ಸಂಜೆಯಾಗುತ್ತಿದ್ದಂತೆ ಕಿರಿಯ ದೇವಸೇವಕರು ಒಲೆ ಹಚ್ಚಿದರು.
ಮುಳುಗುತ್ತಿದ್ದ ಸೂರ್ಯನಿಗೆ ಮಹಾ ಅರ್ಚಕ ಪ್ರಾರ್ಥನೆ ಸಲ್ಲಿಸಿದ. ಆತನಿ
ಗಾಗಿ ಬಿಸಿರೊಟ್ಟಿಯ ಊಟ ಅಣಿಯಾದಂತೆ, ಯೋಧರು ಬುತ್ತಿಗಳನ್ನು
ಬಿಚ್ಚಿದರು.
ಸರದಿಯಲ್ಲಿ ನಿದ್ದೆ, ಹುಟ್ಟು ಹಾಕುವ ಕೆಲಸ. ಬೆಳಿಗ್ಗೆ ನೆಲಸ್ಪರ್ಶ,
ದಿನದ ಅಡುಗೆ, ಮಹಾ ಅರ್ಚಕನಿಂದ ಪ್ಟಾ ಪೂಜೆ.
“ ಬೇಗ ! ಬೇಗ ! ” ಎಂದು ಹೇಪಾಟ್ನ ಗುಡುಗು.
ಶೀಬಾಳ ಗಂಡ ಮನಸ್ಸಿನಲ್ಲಿ ಅಂದುಕೊಂಡ : ವೇಗವಾಗಿಯೇ
ಹೋಗಿದ್ದೇವೆ. ನಮ್ಮಷ್ಟು ವೇಗವಾಗಿ ಅವರೂ ಹೋದರೆ ಸಾಕು ನನಗಿಂತ
ಮುಂಚೆ ತಲಪ್ಪಾರೆ.”
****

ನ್ಯಾಯಸ್ಥಾನದಲ್ಲಿ ನಡೆದಿದ್ದ ವಿಚಾರಣೆಯನ್ನು ನನ್ನ ಆ ಹಗಲ