ಪುಟ:Mrutyunjaya.pdf/೬೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦೮

ಮೃತ್ಯುಂಜಯ

ವನ್ನು ಕಂಡು ಆತ ” ಆ !” ಎಂದ.
ಮುಖ ವಿವರ್ಣವಾಯಿತು. ಅದು ನಾಯಕನ ಶವವಿರಬೇಕು ಎಂದು
ಊಹಿಸಿ ತಬ್ಬಿಬ್ಬಾದ. ಮುಂದೆ ಸಾಗುವಂತೆ ತನ್ನ ಅಂಬಿಗರಿಗೆ ಸೂಚಿಸಿದ.
ಮೆನ್ನನಿಗೆ ಕಳವಳ, ಬಟಾ ಇನ್ನೂ ಸುಮ್ಮನಿದ್ದುದನ್ನು ಗಮನಿಸಿ, ಆ
ದೋಣಿಕಾರನತ್ತ ನೋಡಿ, “ ಅಪ್ಪಾ, ನಮ್ಮನ್ನು ನೀವು ನೋಡೇ ಇಲ್ಲ.
ಯಾರಾದರೂ ಕೇಳಿದರೆ.... ನಮ್ಮನ್ನು ನೋಡೇ ಇಲ್ಲ ನೀವು....” ಎಂದ.
ಆ ದೋಣಿಕಾರ ಏನು ಹೇಳಲೂ ತೋಚದೆ, ತಲೆ ಬಾಗಿಸಿ, ತನ್ನ
ಹಾಯಿ ಕಂಬಕ್ಕೆ ಆತು ನಿಂತ....
****
ಆ ನಸುಕಿನಲ್ಲಿ ಮೆನ್ನ ಕಣ್ಣು ತೆರೆದಾಗ ನೀಲ ನದಿಯನ್ನು ಮುಸುಕಿತ್ತು,
ಮಂಜು, ಪ್ರತಿ ವರ್ಷವೂ ಕುಯಿಲಿಗೆ ಮುನ್ನ ಹೀಗಾಗುವುದಿತ್ತು.
ಊರಿನಲ್ಲಿ ಎಲ್ಲ ಸಿದ್ಧತೆಯೂ ಮುಗಿದಿರಬಹುದು. ನಾಯಕ ಬಂದೊಡ
ನೆಯೇ ಸಂಭ್ರಮದ ಕುಯಿಲು, ಎಲ್ಲಿಯ ಸಂಭ್ರಮ ಇನ್ನು ?
ಮಂಜು ಕರಗಲು ಸ್ವಲ್ಪ ಹೊತ್ತು ಬೇಕು, ಈಗ ವೇಗವಾಗಿ ಮುಂದು
ವರಿಯುವುದು ಅಪಾಯಕರ. ಅಂಬಿಗರು ಹಣತೆ ಹಚ್ಚಿದರು. ಮುಂದೆ ಸಾಗು
ವುದರ ಬದಲು ದಡ ಮುಟ್ಟಿ ಬೆಳಗಿನ ಕ್ರಿಯೆಗಳನ್ನು ಮುಗಿಸುವುದು ಮೇಲು.
ಹಾಗೆ ಮಾಡಲು ಬಟಾ ನಿರ್ದೆಶವಿತ್ತ.
ಪುನಃ ಪಯಣ ಮುಂದುವರಿಸಲು ಅವರೆಲ್ಲ ಸಿದ್ಧರಾಗುವ ಹೊತ್ತಿಗೆ
ಮಂಜಿನ ಪರದೆ ಸರಿಯಿತು, ಕೊಳದಲ್ಲಿ ಮಿಂದು ಎದ್ದವನಂತೆ ರಾ ಬೆಳಗಿದ.
ಇಬ್ಬನಿ ಸುರಿದು ಮೆನೆಸ್ಟಾ ಮೈ ತೋಯ್ದಿತ್ತು. ನನ್ನ ಬಟ್ಟೆಯಿಂದ
ರಕ್ಷಿತ ಶವದ ಮೈ ಒರೆಸಿದ.
“ಸ್ನಾನವಾದಂತಾಯ ನಾಯಕರಿಗೆ, ” ಎಂದ.
ಬಟಾನ ಕಡೆ ನೋಡಿ, ಆ "ಕೊಳಲಿನಲ್ಲಿ ಯಾವ ಭಾವ ಬೇಕಾದರೂ
ನುಡಿಸಬಹುದು, ಅಲ್ಲವಾ? ” ಎಂದು ಮೆನ್ನ ಕೇಳಿದ.
“ಮೆನ್ನಯ್ಯ ಮೆಂಫಿಸಿನಲ್ಲಿ ನೀವು 'ಇನ್ನು ಯಾರೊಡನೆ ನಾ ಮಾತಾ