ಪುಟ:Mrutyunjaya.pdf/೬೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೦೧

ಬಟಾ ಎಚ್ಚರಗೊಂಡ. ಆದರೆ ರಾಮೆರಿಪ್ಟಾನ ಧ್ವನಿಯನ್ನು ಗುರುತಿಸಿ,
ಸಮಾಧಾನಪಟ್ಟು, ಮತ್ತೆ ನಿದ್ದೆ ಹೋದ. ಎಚ್ಚೆತ್ತ ಅಹೂರಾ "ಶ್.....”
ಎಂದು ತನ್ನ ಮಗುವಿನ ಮೈ ತಟ್ಟುತ್ತ, ಕಣ್ಣೆವೆಗಳನ್ನು ಪುನಃ ಮುಚ್ಚಿದಳು.
ಆ ಅಳು ನಿಲ್ಲಿಸಲು ತಾವು ಮಾಡುವಂಥದೇನಾದರೂ ಇದೆಯೆ ಎಂದು ಕೇಳು
ವವರಂತೆ ಹುಟ್ಟು ಹಾಕುತ್ತಿದ್ದವರು ಮೆನ್ನನತ್ತ ನೋಡಿದರು.
ಮೆನ್ನ ರಾಮೆರಿಪ್ಟಾ ಇದ್ದೆಡೆಗೆ ನಡೆದ. ರಾಮೆರಿಯನ್ನು ಬಾಹು
ವಿನಿಂದ ಬಳಸಿ "ಅಳಬೇಡ” ಎಂದ. ಮಾನವಸ್ಪರ್ಶ ಹುಡುಗನಿಗೆ ಅನಿರೀಕ್ಷಿತ
ವಾಗಿತ್ತು. ಬೆಚ್ಚಿದ ಆತ, ಸಂತೈಸುತ್ತಿದ್ದ ವ್ಯಕ್ತಿ ಮೆನ್ನ ಎಂದು ಅರಿತೊಡನೆ,
ಪುನಃ ಧ್ವನಿ ತೆಗೆದು ಆತ್ತ.
ಅತ್ತು ಹೃದಯ ಹಗುರವಾಗಿದೆ; ಇನ್ನು ಇವನು ನಿದ್ರಿಸಲೂಬಹುದು
ಎನಿಸಿತು ಮೆನ್ನನಿಗೆ, “ ಬಾ, ” ಎಂದ. ತಾವು ಕುಳಿತಿದ್ದ ಸ್ಥಳಕ್ಕೆ
ರಾಮರಿಪ್ ಟಾನನ್ನು ನನ್ನ ಕರೆದೊಯ್ದು, ಅಲ್ಲಿ ತನ್ನ ತೊಡೆಯ ಮೇಲೆ ಹುಡು
ಗನ ತಲೆಯನ್ನು ಮನ್ನ ಇರಿಸಿಕೊಂಡ. ಶೋಕದ ಮುಸಲಧಾರೆ ನಿಂತಿತ್ತು.
ಕೊನೆಯ ಹನಿಗಳು. ಬಳಿಕ ಮೌನ. ನಿದ್ದೆ. ಕ್ರಮೇಣ ಗಾಢನಿದ್ರೆ.

****


ಮೆನೆಪ್ ಟಾಗೆ ಮರಣ ದಂಡನೆ ವಿಧಿಸಿದ ಮಾರನೆಯ ಬೆಳಿಗ್ಗೆ,
ವರದಿಯ ಕಾವಲಿಗೆಂದು ಮಹಾದ್ವಾರಕ್ಕೆ ಬಂದ ಭಟರು ದಿಗ್ಗಾಂತರಾದರು. ತೂಗಾಡು'
ತಿದ್ದ ಶವವೂ ಇಲ್ಲ, ಕಾವಲುಗಾರರೂ ಇಲ್ಲ. ಕಾವಲು ನಿಂತವರೇ ಶವವನ್ನೆತ್ತಿ
ಕೊಂಡು ಹೋದರು ಎನ್ನುವಂತಿಲ್ಲ. ಅವರಿಗೇನು ಹುಚ್ಚೆ ?
ದೋಣಿಕಟ್ಟೆಗೆಂದು ಹೊರಟಿದ್ದ ನಗರವಾಸಿಗಳಿಬ್ಬರು ಅರಮನೆಯ
ಪಕ್ಕದ ದಾರಿಯಲ್ಲಿ ನಡೆದು ಬಂದು ಗಾಬರಿಯ ಧ್ವನಿಯಲ್ಲಿ,
“ನಿಮ್ಮವರೂಂತ
ಕಾಣದೆ. ಕಟ್ಟೆ ನೆಲದ ಮೇಲೆ ಕೆಡವಿದ್ದಾರೆ. ಓ ಅಲ್ಲಿ....” ಎಂದರು.
" ಹಾ ! ಸತ್ತಿದ್ದಾರಾ ?”
“ ಗೊತ್ತಿಲ್ಲ. ಹೆದರಿಕೆಯಾಯ್ತು. ಬಂದ್ಬಟ್ಟಿ.”
ಈ ಕಾವಲುಗಾರರು ಅಲ್ಲಿಗೆ ಓಡಿದರು. ಕಟ್ಟುಗಳನ್ನು ಬಿಚ್ಚಿ ಸುದ್ದಿ
ತಿಳಿದರು. ಸುದ್ದಿ ಸಂಚರಿಸಿತು__ದಳಪತಿಯಲ್ಲಿದೆ. ಅಲ್ಲಿಂದ ಅಮಾತ್ಯರಲ್ಲಿಗೆ,