ಪುಟ:Mrutyunjaya.pdf/೬೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅನರಲ್ಲಿಂದ ಸೆರೋ ಹಾಗೂ ಅರ್ಚಕರ ಬಳಿಗೆ. ಮಹಾಮಂದಿರಕ್ಕೆ ಹೊರಡೂವ ಮುಂಚೆ ಆಪೊಫಿಸ್ ಅರಮನೆಯ ಮಹಾದ್ವಾರಕ್ಕೆ ಬಂದ. "ನಿನ್ನ ಕೊಂದ್ರಲ್ಲಾ. ಅವನನ್ನ ನದಿಗೆ ಎಸೆದುಬಿಟ್ರಾ?" ಎಂದು ಕಾವಲಿನವರನ್ನು ಕೇಳಿದ. "ರುಡವೂ ಇಲ್ಲ, ಮುಂಡವು ಇಲ್ಲ-ಮಾಯ!" ಎಂದ ಒಬ್ಬ ಕಾವಲುಗಾರ. ಇನಬ್ಬನ ಪ್ರಕಾರದ ಬಳಿ ಇದ್ದು ಊಟದ ಅವಶೇಶವನ್ನು ನೋಡಿ, ದಳಪತಿಯ ಮುಂದೆ ಕಾವಲುಗಾರರ ವಿಚಾರಣೆ ಆಗ್ತಿದೆ." ಎಂದ. ಅಪೊಫಿಸ್ ಸತಾ ದೆವರನ್ನು ಸ್ತುತಿಸುತ್ತ ಮಹಾಮಂದಿರಕ್ಕೆ ಓಡಿದ. ಮಹಾ ಅರ್ಚಕ ಹೇಸಾಟಗೆ ಅರಮನೆಯಿಂದ ಅದೇ ಆಗ ವಾರ್ತೆ ಬಂದಿತು. ಅಪೋಫಿಸ್ನ ನಿವೇದನೆ ಮುಗಿದೊಡನೆ ಹೇಸಾತಟ್ ಕಿರಿಚಿದ "ಕತ್ತೆ! ನಿನ್ನ ತಲೆ ಕಡಿಬೇಕು! ದುರಸೆ! ಸ್ವತಃ ಸೆತ್ ಬಂದರೂ ಕಖಣ್ಮುಚ್ಚಿ ವ್ಯಾಪಾರ ಮಾಡ್ತಿಯಲ್ಲ?" ಹೆದರಿದವನಂತೆ ಅಪೋಫಿಸ್ ನಟಿಸಿದ ತಿರಸ್ಕಾರದ ದೃಶ್ಟಿ ಬೀರಿ ಮಹಾ ಅರ್ಚಕನೆಂದ. "ಯೋಧರ ತಂಡ ಕರಕೊಂಡು ರಾಜಧಾನಿಯಲ್ಲೆಲ್ಲ ಶೊಧಿಸು. ಆ ಗಿರಾಕಿಗಳು ಸಿಗ್ತಾರೇನೋ ನೋಡು." ಇನೇನಿಯನ್ನು ಕರೆದು ಆಜ್ನೆ ಇತ್ತೆ "ಮಧ್ಯಾಹ್ನದ ಮೇಲಲ್ಲ. ಇನ್ನೂ ಬೇಗನೆ ದಂಡು ಹೊರಡ್ಬೇಕು. ಬಕಿಲನಿಗೆ ತಿಳಿಸು. ಪ್‌ಟಾ ದೇವರನ್ನು ಸಿದ್ಧಪಡಿಸು." "ಮೆರವಣಿಗೆ ಬೇಡವೇ?" "ವಯಸ್ಸಾಗ್ತಾ ಆಗ್ತಾ ಬುದ್ಧಿ ನಿನಗೆ ಮಓದವಾಗ್ತಿದೆಯೋ? ಮೆರವಣಿಗೆ ಬೇಕು. ಆದರೆನಿಧಾನವಾಗಬಾರದು. ಆ ಅಮಾತ್ಯನಿಗೆ ಹೇಳಿ ಕಳಿಸು."