ಪುಟ:Mrutyunjaya.pdf/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

    ಟೆಹುಟ ಮುಂದುವರಿದ. ತುಂಬಿದ ನದಿಯ ಭೋರ್ಗತೆದಂತೆ ಧ್ವನಿ . ಮಾತಿನ ಅಲೆ ಸಭಾಂಗಣದಲ್ಲೆಲ್ಲ       ಠೀವಿಯಿಂದ ಸಂಚರಿಸಿತು.

" ಜಗತ್ತಿನಲ್ಲೇ ಶ್ರೇಷ್ಠತಮವೆನಿಸಿದ ಐಗುಪ್ತದ ಪ್ರಜೆಗಳು ನಾವು. ಸೃಷ್ಟಿಕರ್ತ ರಾನ ಮಕ್ಕಳು; ಮಹಾ ಕುರುಬ ಪೆರೋನ ಪ್ರೀತಿಪಾತ್ರ ಕುರಿಗಳು. ದೇವಸಂತಾನ. ಹುಟ್ಟಿಸಿದ ದೇವರೇ ಈ ಲೋಕದಲ್ಲಿ ನಿಂತು, ಪ್ರಭುವಾಗಿ ನಮನ್ನು ಆಳಿದ—ಸಹಸಾರು ಸಂವತ್ಸರ. ಹಾಗೆಯೇ ದೇವಪುತ್ರ ಒಸೈರಿಸ್, ಆತನ ಕುಮಾರ ಹೋರಸ್ ಇವರೂ ಸಹಸ್ರಾರು ವರ್ಷ ಆಳಿದರು. ಕಾಲವಾದ ಮೇಲೆ ಅಮರರಾದರು; ದೇವತೆಗಳ ಶ್ರೇಣಿಯಲ್ಲಿ ಸ್ಥಾನ ಪಡೆದರು. ಅದೇ ರೀತಿ ವಿದ್ಯಾಧಿದೇವತೆ ಥೂಥ್. , ಈತ ಮಹಾ ಪ್ರಭುವಾಗಿ ಮೂರು ಸಾವಿರ ವರ್ಷ ರಾಜ್ಯಭಾರ ಮಾಡಿದ: ಕಾನೂನು ಕಟ್ಟಳೆಗಳ ಇಪ್ಪತ್ತು ಸಾವಿರ ಗ್ರಂಥಗಳನ್ನು ರಚಿಸಿದ. ಮಿಕಗಳನ್ನು ಬೇಟೆ ಯಾಡ್ತಾ ಅಲೆಮಾರಿಗಳಾಗಿದ್ದ ನಮ್ಮ ಫುರ್ವಜರು ನೀಲ ನದಿಯ ದಂಡೆಗಳಲ್ಲಿ ನೆಲೆ ನಿಂತರು, ಕೃಷಿವಲರಾದರು. ಲಿಪಿಯ ಸೃಷ್ಠಿಯಿಂದ ಹೊಸ ಮನ್ವಂತರ ಆರಂಭವಾಯಿತು. ఆ ಮನ್ವಂತರದ ಮೊದಲ ಮಹಾಪ್ರಭು ಮೆನೆಸ್. ಕೇವಲ ಒಂದು ಸಾವಿರ ವರ್ಷ ಹಿಂದೆಯಷ್ಟೇ ನಮನ್ನು ಆಳಿದ ಮನು ಈತ. ಇವನ ಕಾಲದಿಂದ ಪ್ರಭುಗಳ ಆಯುಸ್ಸು ಪ್ರಜೆಗಳ ಆಯುಸ್ಸನ್ನು ಮೀರಲಿಲ್ಲ; ಆದರೆ, ಈ ಲೋಕದಲ್ಲಿ ಧರ್ಮನಿಷ್ಠರಾಗಿ ಜೀವಿಸಿ ಗೋರಿ ಕಂಡ ಮೇಲೆ ಮೂರು ಸಾವಿರ ವರ್ಷ ಬದುಕುವ ಅರ್ಹತೆಯನ್ನು ಅವರು ಪಡೆದರು. “ ಆ ವರೆಗೆ ಮೇಲಣ ಐಗುಪ್ತ ಮತ್ತು ಕೆಳಗಣ ಐಗುಪ್ತ ಅಂತ ಎರಡು ಹೋಳಾಗಿತ್ತು ದೇಶ, ಮೆನೆಸ್ ದೇಶವನ್ನು ಒಗ್ಗೂಡಿಸಿದ. ಜೋಡಿ ಕಿರೀಟ ಧರಿಸಿದ. ಥೋಥ್ ರೂಪಿಸಿದ್ದ ಕಟ್ಟಳೆಗಳನ್ನು ಆಚರಣೆಗೆ ತಂದ. ಮಂಚದ ಮೇಲೆ ಮಲಗೋದಕ್ಕೆ, ಕುರ್ಚಿ ಮೇಲೆ ಕೂತುಕೊಳ್ಳೋದಕ್ಕೆ ಹೇಳಿಕೊಟ್ಟ. ಕಟ್ಟೆಗಳನ್ನು ಕಟ್ಟ ನೀಲ ನದಿಯ ನೀರು ಹೊಲಗಳಿಗೆ ಬರೋ ಹಾಗೆ ಮಾಡಿದ ಪೆರೋ ಜೋಸರನ ಕಾಲದಲ್ಲಿ ಎಂಬತ್ತಾರು ಆಳೆತ್ತರದ ಗೋರಿ ಸಿದ್ದವಾಯಿತು. ಅದನ್ನು ಕಟ್ಟಿದವನು; ಮಹಾಶಿಲ್ಪಿ ಇಷ್ಟೊಟೆಪ್. ನಮ್ಮವರು ಮಣಿನಿಂದ ಇಟ್ಟಿಗೆ ಮಾಡೋದಕ್ಕೆ ಕಲಿತರು. ಇಟ್ಟಿಗೆಯಿಂದ ಮಾತ್ರವಲ್ಲ,