ಪುಟ:Mrutyunjaya.pdf/೬೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಪೆರೋನ್ನನ್ನು ಭೇಟಿಯಾದ ಬಳಿಕ ಆಮೆರಬ ನೇರವಾಗಿ ಮಹಾಮಂದಿರ ತಲಸಿದ. "ಪೆರೋನ ಆಯುರಾರೋಗ್ಯ ವರ್ಧಿಸಲಿ!" ಎಂದ. "ವರ್ಧಿಸಲಿ!" ಎಂದ ಚುಟುಕು ವಂದನೆ ಮಾಡಿ ಹೇಪಾಟ್ ಗೆಡುಗಿದ "ದೇಶದ ಆಡಳಿತದ ಬಿಗಿ ಶಿಥಿಲವಾಗಿದೆ ಅನ್ನೋದಕ್ಕೆ ಬೇರೆ ದೃಶ್ಟಾಂತ ಬೇಕಾ?' ತಾಳ್ಮೆ ಕಳೆದುಕೊಳ್ಳದೆ ಆಮೆರಬ್ ಅಂದ "ದೇವಸ್ವರೂಪನ ಪ್ರಥಿನಿದಿಯಾಗಿ ನೀವು ನೀರಾನೆ ಪ್ರಾಂತಕ್ಕೆ ಹೋಗ್ತಿದ್ದೀರ. ಮಹಾ ಅರ್ಚಕರು ದಂಡಯಾತ್ರೆಯ ಹಿರಿತನ ವಹಿಸ್ತಿರೋದು ಅಪೂರ್ವ ಸಂಭವ. ಇವತ್ತು ಕಹಿಮಾತು ಆಡಬಾರದು." "ಶವಲೇಪನ ಸಾಮಗ್ರಿ ಕೊಂಡಿದ್ದಾರೆ." "ಗೊತ್ತಾಯ್ತು. ಶವಕ್ಕೆ ಉಸಿರು ತುಂಬೋದಕ್ಕಾಗ್ತದಾ? ಹೇಗು ಅಲ್ಲಿಗೇ ಹೊರಟಿದ್ದೀರಿ. ಹೊರಡೋದಕ್ಕೆ ಮುಂಚೆ" "ಏನು?" "ಅರಮನೆಗೆ ಬರತೀರಿ ಅಲ್ಲವಾ?' "ವೃಥಾ ಕಾಲವ್ಯಯ. ಮೆರವಣಿಗೆ ನೇರವಾಗಿ ದೋಣಿಕಟ್ಟೆಗೆ ಹೋಗ್ತದೆ. ಪೆರೋಗೆ ತಿಳಿಸಿಬಿಡಿ." ದೊಡ್ಡದಲ್ಲಿ. ತಡವಾಗುವ ಹಾಗಿದ್ದರೆ ದಂಡಯಾತ್ರೆಯಿಂದ ವಾಪಸ್ಸಾದ್ಮೇಲೆ ಭೇಟಿಯಾಗೋಣ ಅಂತ ಮಹಾಪ್ರಭುವೇ ಹೇಳಿದ್ದಾರೆ." "ನಾನು ಪೂಜೆಗೆ ಹೊರಡ್ಬೇಕು." "ನಾನೂ ಹೊರಟೆ. ಶವದ ಶೋಧೆ ನಡೆದಿದೆ. ಅಮಾತ್ಯ ಭವನ ದಲ್ಲಿರ್ತೇನೆ ಆಮೇಲೆ ಕಟ್ಟೇಲಿ ಕಾಣ್ತೇನೆ." ಅರಮನೆಯ ಸೇವಕರು ಎಂದಿನಂತೆ ತಮ್ಮ ತಮ್ಮ ಕೆಲಸಗಳಲ್ಲಿ ಆ ದಿನ ನಿರತರಾಗಲಿಲ್ಲ. ಅಲ್ಲಲ್ಲಿ ಗುಂಪು ಕೊಡುತ್ತ ಹೊತ್ತು ಕಳೆದರು. ಹೊರಗೆ ತೋರಿಸೆದ ಸಂತಸ ಅವರದು. ಟ ಬೆಕ್ ಸೆರೆಯಲ್ಲಿ ಇಲ್ಲವೆಂಬುದನ್ನು ತಿಳಿದಾಗ ಕಾರಾಗೃಹದ ಅಧಿಕಾರಿ.