ಪುಟ:Mrutyunjaya.pdf/೬೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕೂಗಾಡಿದ. “ಅವರನ್ನು ಬಿಡೋದಕ್ಕೆ ನಾಯಸ್ಥಾನದ ಆಜ್ನೆಯಾಗಿದೆ అంತ ಯಾರೋ ಬಂದು ಹೇಳಿದ್ರು,” ಎಂದರು ಕಾರಾಗೃಹದ ಕಾವಲುಗಾರರು. ಅಮಾತ್ಯ ದಳಪತಿಯನ್ನು ಬಯ್ದಿದ್ದ. ದಳಪತಿ ಕಾವಲುಗಾರರಿಗೆ ಗುದ್ದಿದ. ಹಿಂದಿನ ರಾತ್ರಿ ಹಟ್ಟಿಗೆ ಮರಳಿದವಳು ಶೋಕಭರಿತೆ ಶೀಬಾ. ಮಡದಿಯ ಮನಸ್ಸನ್ನು ಬಲ್ಲವನು ಅವಳ ಗಂಡ. ಆತನಿಗೂ ದುಃಖ. ಆದರೆ ಬೆಳಿಗ್ಗೆ, ಶವ ಮಾಯವಾದ ಸುದ್ದಿ ಹಬ್ಬಿ, ಕರಿಯ ಮೋಡಗಳು ಚದರಿದುವು. ಮೆನ್ನಯ್ಯ ಕಾಣಿಸುವನೇನೋ ಎಂದು ಶೀಬಾ ಅಲ್ಲಿ ಇಲ್ಲಿ ನೋಡಿದಳು. ಯಾರ ಸುಳಿವೂ ಇಲ್ಲ, ರಾತ್ರಿಯೇ ದೋಣಿ ರಾಜಧಾನಿ ಬಿಟ್ಟಿರ ಬೇಕು ಎಂದು ತೀರ್ಮಾನಕ್ಕೆ ಬಂದಳು. ತನ್ನ ಸಂತಸವನ್ನು ಗಂಡನೊಡನೆ ಹಂಚಿಕೊಂಡಳು. ಮಹಾ ಅರ್ಚಕ ಪ್ರಸನ್ನನಾದ, ಸೆಡ್ ಉತ್ಸವ ನಡೆಯಿತು, ತನ್ನೆದುರು ಬಾಯಿ ತೆರೆದಿದ್ದ ಗಂಡಾಂತರ ದೂರವಾಯಿತು, ಬಂಡಾಯಗಾರ ನಾಯಕನ ಕಥೆಯೂ ಮುಗಿಯಿತು ಎಂದು ಸಮಾಧಾನ ತಳೆದಿದ್ದ ಅಮಾತ್ಯ ಆಮೆರಬ್ ಗೆ ಶವ ಕಳವಾಯಿತೆಂದು ಸ್ವಲ್ಪ ಕಸಿವಿಸಿ. ತುಸು ಎಚ್ಚರ ವಹಿಸಿ ದ್ದರೆ ಹೀಗಾಗುತ್ತಿರಲಿಲ್ಲ. ಏನೇ ಇರಲಿ, ಇಲ್ಲವಾದುದು ಶವ, ಜೀವಂತ ವ್ಯಕ್ತಿ ಅಲ್ಲವಲ್ಲ. ದಂಡಯಾತ್ರೆ ಹೊರಟಿದ್ದಾನೆ ಮಹಾನುಭಾವ! ಇಲ್ಲಿ ఇల్లವಾದರೆ ನೀರಾನೆ ಪ್ರಾಂತ ತಲಸಿರ್ತದೆ ; ಹುಡುಕಿ ಹಿಡಿದು ರಾಜಧಾನಿಗೆ ತರಲಿ ! ಪೆರೋನನೂ ಮಹಾರಾಣಿಯನೂ ಮೆನೆಪ್ ಟಾನ ಶವ ಅದೃಶ್ಯವಾದುದಕ್ಕೆ ಮಹತ್ವ ನೀಡಲಿಲ್ಲ (ಮೊಸಳೆಗಳಿಗೆ ಆಹಾರವಾಗುವ ಬದಲು ಮಣ್ಣಿನ ಪಾಲು. ಎರಡೂ ಒಂದೇ.') “ಈ ದಂಡಯಾತ್ರೆಯಿಂದ ಮಹಾ ಅರ್ಚಕನ ಬಲ ಹೆಚ್ಚಾಗ್ರದೆ.” ಅರಸನ ಅಭಿಪ್ರಾಯಕ್ಕೆ ಅರಸಿಯ ಪ್ರತಿಕ್ರಿಯೆ : “ಮಹಾ ಎಶ್ಟು ಹೆಚ್ಚಿತು ! ನೋಡೊಳ್ಳೋಣ.”