ಪುಟ:Mrutyunjaya.pdf/೬೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ಈಗಲೂ, ಅಲ್ಲ, ಅದಕ್ಕಿಂತಲೂ ಸ್ವಲ್ಪ ಹೆಚ್ಚು. ದಂಡಯಾತ್ರೆಯ ದೋಣಿಗಳು ತಮಗಿಂತ ಒಂದು ದಿನದ ಮಟ್ಟಿಗಾದರೂ ಹಿಂದಿರುತ್ತವೆ ಎಂದು ಬಟಾನ ತರ್ಕ. ಆದರೆ ಲೆಕ್ಕ ತಪ್ಪಿತ್ತು. ಮಹಾ ಅರ್ಚಕನ ದೋಣಿಯ ಸೆಲೆತ ಸಾಮರ್ಥ್ಯದ ಪರಿಚಯ ಅವನಿಗಿರಲಿಲ್ಲ; ಮೆನ್ನ ನಿಗೂ ಇರಲಿಲ್ಲ. ಮೂರು ದೋಣಿಗಳಲ್ಲೂ ಅಂಬಿಗರನ್ನು ಆಗಾಗ್ಗೆ ಬದಲಾಯಿಸುತ್ತಿದ್ದುದರಿಂದ __ ಕೊನೆಯ ದೋಣಿಯಲ್ಲಿದ್ದ ಶೀಬಾಳ ಗಂಡ ಸಣ್ಣ ಪುಟ್ಟ ಪ್ರಯತ್ನ ಗಳನ್ನೆಷ್ಟೇ ಮಾಡಿದರೂ ___ ವೇಗ ಬಹಳವೇನೂ ಕುಂಠಿತವಾಗಲಿಲ್ಲ. ಆರಂಭದಲ್ಲಿ ಬಟಾನ ದೋಣಿಗೂ ದಂಡಿಗೂ ಮಧ್ಯೆ ಅರ್ಥ ಇರಳು ಅರ್ಧ ಹಗಲಿನ ಅಂತರವಿದ್ದುದು ಕ್ರಮೇಣ ಸ್ವಲ್ಪ ಸ್ವಲ್ಪವಾಗಿ ಕಡಿಮೆ ಯಾಗುತ್ತ ಬಂತು. ಆ ರಾತ್ರೆ ಮಹಾ ಅರ್ಚಕನಿಗೆ ಬಕಿಲ ಅರಿಕೆ ಮಾಡಿದ: “ನಾಳೆ ಕತ್ತಲಾಗೋ ಹೊತ್ತಿಗೆ ನಾವು ಸುಲಭವಾಗಿ ನೀರಾನೆ ಪ್ರಂತ ಮುಟ್ಟೀವು. ಆದರೆ ಸ್ವಲ್ಪ ಬೇಗನೆ-ಮಧ್ಯಾಹ್ನದ ಹೊತ್ತಿಗೇ - ಅಲ್ಲಿದ್ದರೆ, ಆಕ್ರಮಣ ಸುಲಭವಾಗ್ತದೆ.” "ಸರಿ. ಬೆಳಿಗ್ಗೆ ದಂಡು ಊಟಕ್ಕೆ ಕೂತಾಗ ನಾನು ಮಾತಾಡ್ತೇನೆ.” ಎಂದ ಮಹಾ ಅರ್ಚಕ. ....ಕೆಳಗೆ ಆ ಸಂವಾದ ನಡೆಯುತ್ತಿದ್ದ ವೇಳೆಗೆ ಬಟಾನ ದೋಣಿ ಮೊಸಳೆ ಪ್ರಾಂತದ ಹತ್ತಿರಕ್ಕೆ ಬಂದಿತ್ತು. ಅದನ್ನು ದಾಟಿದರೆ ಅವರ ನಾಡು ಆರಂಭ. ಆ ನಾಲ್ಕು ದಿನಗಳಲ್ಲಿ, ಮರುಹುಟ್ಟಿನೆಡೆಗೆ ಸಾಗಿದ್ದ ನಾಯಕನ ರಕ್ಷಿತಶವವನ್ನು ಎದುರು ಇರಿಸಿಕೊಂಡು ಬಾಳಲು ಅವರು ಕಲಿತಿದ್ದರು. ರೂಢಿಯಾಗಿದ್ದ ಆ ಬದುಕಿನಿಂದ ಭಿನ್ನವಾದದ್ದು ಇನ್ನು. " ರಾ ಉದಿಸೋದರೊಳಗೆ ಊರು ಸೇರ್ತೇವೆ.” ಪ್ರಯಾಸಪಟ್ಟು ಬಟಾ ಆ ಮಾತುಗಳನ್ನು ಆಡಿದ್ದ. ಬಿರಿದ ಗಂಟಲು, ಇನ್ನು ಯಾರಿಗೂ ನಿದ್ದೆ ಇಲ್ಲ. ಮಗು ಆದಷ್ಟು ಹೊತ್ತು ಮಲಗಲಿ ಎಂದು ಅಹೂರಾ 'ಶ್' ಎನ್ನುತ್ತ ಅದರ ಬೆನ್ನು ತಟ್ಟಿದಳು.