ಈ ಪುಟವನ್ನು ಪರಿಶೀಲಿಸಲಾಗಿದೆ
೬೧೨ ಮೃತ್ಯುಂಜಯ ಊರು ಹತ್ತಿರ ಬರುತ್ತಿದೆ ಎಂಬ ಅರಿವು ಎಲ್ಲರ ಎದೆಗಳನ್ನು ಒತ್ತಿತು. ರಾಮೆರಿಪ್ ಟಾ ಚಡಪಡಿಸಿದ. ತಾಯಿಗೆತಾನು ಏನನ್ನು ಹೇಳಬೇಕು? __ ಏನನ್ನು? ಬಟಾ ಹಾಯಿಕಂಬಕ್ಕೆ ಆತು ತನ್ನ ಹಣೆಯನ್ನು ಅದಕ್ಕೆ ಒತ್ತಿ ಹಿಡಿದ.
['ನಮ್ಮ ಜನರಿಗೆ ಹ್ಯಾಗೆ ಮುಖ ತೋರಿಸಲಿ ?'] ಔಟ, ಬೆಕ್ ಅಳಲು ಸಿದ್ದರಾದರು. ಅಹೂರಾ ಮೆನೆಟಾನ ಮುಖ ದಿಟ್ಟಿಸೆದಳು. ಉಳೆದೆಲ್ಲರಿಗೆ ಮೌನವೇದನೆ. ಮೆನ್ನನೂ ఆ ನೋವನ್ನು ಸಹಿಸಿದ. ಚುಮು ಚುಮು ನಸುಕಿನಲ್ಲಿ ದೋಣಿ ನೀರಾನೆ ಪ್ರಾಂತದ ಮುಖ್ಯ ಪಟ್ಟಣದ ದೋಣಿಕಟ್ಟಿಯನ್ನು ಸಮಿಪಿಸಿತು.
ಕಲ್ಲುಗಳಿಂದ ಕಟ್ಟಿದ್ದ ಆಳೆತ್ತರದ ಪೀಠ ಢಾಳಾಗಿ ಎಡಬಲಗಳಲ್ಲಿ ಉರಿ ಯುತ್ತಿದ್ದ ಪಂಜುಗಳು. ಆ ಪೀಠದ ಮೇಲೆ ಶಿಲ್ಪಿ ನೆಖೆನ್ ಪೂರ್ತಿಗೊಳಿಸಿದ್ದ ನೀರಾನೆಯ ಶಿಲಾಪ್ರತಿಮೆ. ಇದು ತಮ್ಮೂರು ಹೌದೋ ಅಲ್ಲವೋ ఎంబ ಸಂದೇಹ ಹಲವರಿಗೆ, ಒಂದು ಕ್ಷಣ. ಬಟಾ ಬಿಟ್ಟುಹೋಗಿದ್ದ ಕಾವಲಿನ ಹುಡುಗ బಟ್ಟಿ ಹೊದೆದುಕೊಂಡು ಮರದ ಕೆಳಗೆ ಮಲಗಿದ್ದ.
ಜನ ಆಗಲೇ ಎದ್ದಿದ್ದರು. ಹಲವು ಮನೆದೀಪಗಳು ಕಾಣಿಸುದ್ದುವು. ಬಟಾ ನಿಟ್ಟುಸಿರು ಬಿಟ್ಟ.
ದೋಣಿಮೆಲ್ಲನೆ ಕಟ್ಟಯನ್ನು ಮುಟ್ಟಿತು.
೧೫
ದೋಣಿ ಕಟ್ಟಯನ್ನೇನೋ ಮುಟ್ಟಿತು. ಆದರೆ ಯಾರೊ ಇಳಿಯುತ್ತಿಲ್ಲ. ಮೆನ್ನನಿಗೆ ಅನಿಸಿತು: 'ಸುರಕ್ಷಿತವಾಗಿ ಊರು ಸೇರಿದ್ದಾರೆ, ದುರ್ಘಟನೆಯ ಘೋರ'