ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ ಸ್ವರೂಪ ಅವರನ್ನೀಗ ಅಣಕಿಸ್ತಿದೆ. ಮಂಕು ಕವಿದಂತೆ ಮೌನವಾಗಿದ್ದಾರೆ. ಆದರೆ ಬೆನ್ನ ಹಿಂದೆಯೇ ಇದೆಯಲ್ಲ ಅಪಾಯ? ನೀರನ್ನು ಸೀಳಿಕೊಂಡು ಅದು ಧಾವಿಸಿ ಬರುತ್ತಿದೆಯಲ್ಲ?ನಿಧಾನ ಸಲ್ಲ, ನಿಧಾನ ಸಲ್ಲ.....' ತನ್ನೆಡೆಗೆ ನೋಡುತ್ತಿದ್ದ ಬಟಾನಿಗೆ ಮೆನ್ನನೆಂದ:
"ಅಣ್ಣ, ತಡ ಮಾಡಬಾರದು, ತಡಮಾಡಬಾರದು.”
ಬಟಾನ ಮೆದುಳಿನಲ್ಲಿ ಧುಮುಧುಮಿಸುತ್ತಿದ್ದುದೂ ಅದೇ ವಿಚಾರ. 'ತಡ ಮಾಡಿದರೆ ತೊಂದರೆ __ ತೊಂದರೆ.'
ತನ್ನ ಜನರಿಗೆ ಅವನೆಂದ:
'ಇಳಿಯಿರಿ.... ಬೇಗ....'
ಮೆನೆಪ್ ಟಾನ ರಕ್ಷಿತ ಶವ, ರಾಮೆರಿಪ್ ಟಾ, ಮೆನ್ನ,ಬಟಾ__ಇವ ರನ್ನುಳಿದು ಇತರರೆಲ್ಲ ಇಳಿದರು.
ಇವರ ಪಾದಗಳೆಲ್ಲ ಕಟ್ಟೆಯ ಕಲ್ಲುಗಳಿಗೆ ಅಂಟಿಕೊಂಡುವಲ್ಲ? ಜೋಲು ಮೋರೆ ಹಾಕಿ ಮೆನೆಪ್ ಟಾ ಅಣ್ಣನನ್ನೆ ನೋಡುತ್ತಿರುವರಲ್ಲ? ಮೆನ್ನ ಅಂದು ಕೊಂಡ - 'ಇವರೀಗ ಅಳ್ತಾರೆ, ಧ್ವನಿ ತೆಗೆದು ಗಟ್ಟಿಯಾಗಿ ಅಳ್ತಾರೆ.'
ಪಯಣದುದ್ದಕ್ಕೂ ಘಾಸಿಗೊಂಡು ಮುದುಡಿ ಬಿದ್ದಿದ್ದ ದುಃಖದ ಹಕ್ಕಿ ಕಟ್ಟೆಯ ಮೇಲೆ ಚಡಪಡಿಸಿತು. ಅದರಿಂದ ಆಕ್ರಂದನ ಹೊರಟಿತು. ಅಹೂರಾ ಮೊದಲಬಾರಿಗೆ ತಲೆಗುದಲನ್ನು ಹಿಡಿದೆಳೆಯುತ್ತ,ಎದೆಗೆ ಹೊಡೆದುಕೊಳ್ಳುತ್ತ,ರೋದಿಸಿದಳು:
" ಅಣ್ಣಾ! ಅಣ್ಣಾ! ಅಯ್ಯೋ! ಅಯ್ಯೋ !” ಅನುಚರರಾಗಿದ್ದ ಯಾತ್ರಿಕರು.
ತಂಡದ ಯಾತನೆ ಶೋಕಧ್ವನಿಯಾಗಿ ಮಾರ್ಪಟ್ಟಿತು.
ಮೆನ್ನ ಎದ್ದು ನಿಂತು ಪುನಃ ಪುನಃ ಗಟ್ಟಿಯಾಗಿ ఆంದ: "ಹೀಗೆ ರೋದಿಸಿ ಫಲವಿಲ್ಲ.ನಾಯಕರು ಮತ್ತು ಜೀವಂತರಾಗೋದಕ್ಕೆ ಅವರ ನಾಮೋಚ್ಚಾರವೊಂದೇ ಮಾರ್ಗ" ತಾನು ಹೇಳಿದುದು ಅವರಿಗೆ ಕೇಳಿಸಿತೆಂದು ಖಚಿತವಾದಾಗ ಮೆನ್ನನೆಂದ: "ಓ ಒಸೈರಿಸ್..... ಓ ಒಸೈರಿಸ್...."