ಪುಟ:Mrutyunjaya.pdf/೬೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೧೪ ಮೃತ್ಯುಂಜಯ ಅವರು ಅಳುತ್ತಳುತ್ತ ಉಚ್ಚರಿಸಿದರು. "ಓ ಒಸೈರಿಸ್.... ಓ ಒಸೈರಿಸ್....." "ಓ ಮೆನೆಪ್ ಟಾ.... ಓ ಮೆನೆಪ್ ಟಾ...." "ಓ ಮೆನೆಪ್ ಟಾ.... ಓ ಮೆನೆಪ್ ಟಾ...." ರಾಮೆರಿಪ್ ಟಾ ಹಿಂಗೈಯಿಂದ ಕಣ್ಣುಗಳನ್ನೊರೆಸಿಕೊಂಡ. ತುಂಬಿದ್ದ ಕಂಬನಿಯನ್ನು ತಲೆಯಲುಗಿಸಿ ಬಟಾ ಝಾಡಿಸಿದ. ಮರದ ಕೆಳಗೆ ಮಲಗಿದ್ದ ಕಟ್ಟೆ ಕಾವಲಿನ ಹುಡುಗನಿಗೆ ಎಚ್ಚರವಾಯಿತು. ಗಡಬಡಿಸಿ ಎದ್ದು ಅವನು ಓಡಿ ಬಂದ. ಅವನಿಗೆ ಅರ್ಥವಾದುದೊಂದೇ: “ನಮ್ಮವರು ಬಂದಿದ್ದಾರೆ. ಬಂದ ದೋಣಿಗಾಗಿ ಲಿಪಿಹಾಳೆಯಲ್ಲಿ ಒಂದು ಗೆರೆ ಹಾಕಬೇಕು.' ಆತನ ಮುಖ ಕಾಣುತ್ತಲೇ ಬಟಾನೆಂದ: "ಓಡಪ್ಪ, ಓಡು. ದಳಪತಿಯವರನ್ನು ಕರಕೊಂಡ್ಬಾ.” ಇವರೆಲ್ಲ ಅಳುತ್ತಿದ್ದಾರೆ; ಅಯ್ಯೋ ಏನಾಗಿದೆಯೋ ? ಹುಡುಗನಿಗೆ ಗಾಬರಿ. ಅವನು ತಕ್ಷಣವೆ ಹೊರಟ. ನಾಲ್ಕು ಹೆಜ್ಜೆಗಳನ್ನು ಬಿರಬಿರನೆ ಇಟ್ಟು ಬಳಿಕ ಓಡಿದ. ವಾಸ್ತವವಾಗಿ ಖ್ನೆಮ್ ಹೊಟೆಪ್ ಹಿಂದಿನ ಎರಡು ಮೂರು ರಾತ್ರೆಗಳಂತೆ ಆ ರಾತ್ರೆಯೂ ನಡುವಿರುಳಿನವರೆಗೆ ಕಟ್ಟೆಯಲ್ಲೇ ಇದ್ದ. ಯಾವನಾದರೂ ದೋಣಿಕಾರ ಮೆಂಫಿಸಿನಿಂದ ಏನಾದರೂ ಸುದ್ದಿ ತಂದಾನು ಎಂಬ ಬಯಕೆ. ಪಹರೆಯವರು ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ದಂಡೆಯವರೆಗೆ ಬಂದು ಮರಳಿದರು. ಮೆನ್ನ ಹುಡುಗನತ್ತ ನೋಡಿ. "ನಾವಿನ್ನು ಇಳೀಬೇಕು ರಾಮೆರಿ,” ఎంದ. ಬಟಾನ ಕಡೆ ತಿರುಗಿ, "ದಳಪತಿಯವರು ಬರೋದರೊಳಗಾಗಿ ನಾಯಕರನ್ನು ಎತ್ತ ಕಟ್ಟಯ ಮೇಲಿಡೋಣ",ಎಂದು ನುಡಿದ. ಔಟ,ಬೆಕ್ ರನು "ಬನ್ನಿ" ಎಂದು ಕರೆದ: ಬಟಾನ ಬಟ್ಟಯನ್ನು ಕಟ್ಟಿಯ ಮೇಲೆ ನೀರಾನೆಯ ಶಿಲಮೂರ್ತಿ ಯನ್ನು ಹೊತ್ತ ಪೀಠದ ಬುಡದಲ್ಲಿ ಹಾಸಿ, ಅದರ ಮೇಲೆ ಮೆನೆಪ್ ಟಾನ ಶವ್ನವನ್ನು ಇರಿಸಿದರು. ಹರಿಯುತ್ತಿದ್ದ ಬೆಳಕಿನೆದುರು ಕ್ಷೀಣವಾಗುತ್ತಿದ್ದ ನಕ್ಷತ್ರಗಳನ್ನು