ಪುಟ:Mrutyunjaya.pdf/೬೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೧೭

ನೀಳ ಹೆಜ್ಜೆಗಳನ್ನಿಡುತ್ತ ಶಿಲ್ಪಿ ನೆಖೆನ್ ಬಂದ. ಪ್ರತೀಕ ಪೀಠದ ಬಳಿ
ತಲೆಬಾಗಿಸಿ, ಮನೆಪ್ ಟಾನನ್ನು ಅಡಿಯಿಂದ ಮುಡಿಯ ತನಕ ನೆಟ್ಟ ನೋಟ
ದಿಂದ ನೋಡುತ್ತ ನಿಂತ.
ಕಪ್ಪಿಟ್ಟ ಮುಖಗಳ ಸೊಪ್ಪು, ಸೆಬೆಕ್ಕು, ಹಿರಿಯರ ಸಮಿತಿಯ ಸೆನು,
ಹೆಮೊನ್, ಥಾನಿಸ್, ಹೆಮ್ಟ ದೋಣಿಕಟ್ಟೆಯ ಬದಿಗೆ ಸರಿದರು. ತಮ್ಮ
ಬಳಿಗೆ ಬರಲು ಬಟಾನಿಗೆ ಸನ್ನೆ ಮಾಡಿದರು. (ಖೈ ಮು, ಬಾ,” ಎಂದ
ಸೈಫು..
ಸೆಮ ಕೇಳಿದ :
"ಆ ಅಯ್ಯ ಯಾರು ?
ಬಟಾನೆಂದ :
“ನಮ್ಮವರು. (ಶನದತ್ತ ಬೊಟ್ಟು ಮಾಡಿ) ಲೇಪನ ಅವರೇ
ಮಾಡಿದ್ದು.”
“ಇಲ್ಲಿಗೆ ಬನ್ನಿ ಅನ್ನು.”
ಬಟಾ ಮೆನ್ನನನ್ನು ಕರೆದುಕೊಂಡು ಬಂದ.
ಸೆಮ ಪ್ರಶ್ನಿಸಿದ :
“ಹ್ಯಾಗಾಯ್ತು, ಬಟಾ ?”
ಉತ್ತರವನ್ನು ಮನ್ನ ನೀಡಿದ :
“ಸೆಡ್ ಉತ್ಸವದ ಮುನ್ನಾ ರಾತ್ರೆಯೇ ನಾಯಕರನ್ನು ಕಾರಾಗೃಹಕ್ಕೆ
ಸಾಗಿಸಿದ್ರು. ತಪ್ಪಿಸಿಕೊಂಡು ಬರೋದಕ್ಕೆ ಅಣ್ಣ ಒಪ್ಪಲಿಲ್ಲ. ಉತ್ಸವದ
ಮಾರನೇ ದಿನ ವಿಚಾರಣೆ, ತೀರ್ಪು-ಮರಣದಂಡನೆ.”
ಹೆಮ್ಟ ಬಟಾನತ್ತ ನೋಡಿ ಕೇಳಿದ :
“ಶವವನ್ನು ಕಸಕೊಂಡು ಪಾರಾಗಿ ಬಂದಿರಾ ?”
ಬಟಾ ತಲೆ ಆಡಿಸಿದ,
ಹೆಮ್ ಟಿಯ ಕಣ್ಣುಗಳು ಮಿನುಗಿದುವು.
“ನಮ್ಮ ಜನ ಅಸಾಮಾನ್ಯರು, ಅಸಾಧಾರಣವಾದದ್ದನ್ನೇ ಮಾಡಿ
ದ್ದಾರೆ.”
ಅಷ್ಟು ಹೇಳಿದೊಡನೆ ಕಣ್ಣಿನ ಹೊಳಪು ಮಾಯವಾಗಿ ಧ್ವನಿ ಕುಗ್ಗಿತು.