ಪುಟ:Mrutyunjaya.pdf/೬೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೧೮

ಮೃತ್ಯುಂಜಯ

“ನಾಯಕರು ಜೀವಂತವಾಗಿ ಪಾರಾಗಿ ಬಂದಿದ್ದರೆ ಎಷ್ಟೋ ಚೆನ್ನಾ
ಗಿರ್ತಿತ್ತು....”
ಮುಂದುವರಿದ ಹೆಮ ಟಯ ಧ್ವನಿಯಲ್ಲಿ ಕುತೂಹಲ ಬೆರೆಯಿತು :
“ಹ್ಞ. ಅವರು ಅಟ್ಟಿಸಿಕೊಂಡು ಬರಲಿಲ್ಲವಾ ?”
[ಹೆಮ್ ಟಯ ಮಾತು ಕೇಳುತ್ತ ಬಟಾನಿಗೆ ಸೈರಣೆ ತಪ್ಪಿತು. ಸಿಟ್ಟಾಗಿ
ತಾನು ಏನನ್ನೂ ಹೇಳಬಾರದೆಂದು, ಕಂಪಿಸುತ್ತಿದ್ದ ತುಟಿಗಳನ್ನು ಅವನು
ಪರಸ್ಪರ ಬಿಗಿಯಾಗಿ ಒತ್ತಿದ. ಮೆಂಫಿಸಿನಲ್ಲಿ ನಾಯಕನಿಗೆ ಬಿದ್ದಿದ್ದ ಕನಸಿನ
ನೆನಪಾಯಿತು. “ಪಾಪಿಗಳಾ ! ಹೋಯ್ತು ! ಕಸದ ಜತೆ ರಸವೂ
ಹೋಯ್ತು” ಕಾಪೀರು ಕೋಲಿನಿಂದ ಹೊಡೆಯುತ್ತಿದ್ದ ಆ ವೃದ್ದ ಹೆಮ್ಟ
ಯಂತಿದ್ದ.]
ಮೆನ್ನನಿಗೆ ಹೆಮ್‌ ಟಿ ವಿಚಿತ್ರ ವ್ಯಕ್ತಿಯಂತೆ. ಆದರೆ ಸಮರ್ಥನಂತೆ
ಕಂಡ, 'ಅಟ್ಟಿಸಿಕೊಂಡು ಬರಲಿಲ್ಲವಾ ?' ಎಂದ ಪ್ರಶ್ನೆಗೆ ಉತ್ತರವಾಗಿ
ಮೆನ್ನನೆಂದ :
ವಿಚಾರಣೆ ಮುಗಿದ್ರೂಷ್ಟೇ ದಂಡು ಮಹಾ ಅರ್ಚಕರ ನೇತೃತ್ವದಲ್ಲಿ
ನೀರಾನೆ ಪ್ರಾಂತದ ಮೇಲೆ ಏರಿಹೋಗಬೇಕೂಂತ ಸೆಡ್ ಉತ್ಸವಕ್ಕೆ
ಮುಂಚೆಯೇ ತೀರಾನವಾಗಿತ್ತು....”
"ದಂಡು ಸೈನೈ ಗಡಿಯಲ್ಲಿ....”
"ಉತ್ಸವಕ್ಕಿಂತ ಇನ್ನೂರು ಜನರನ್ನು ಕರೆಸಿಕೊಂಡಿದ್ರು.”
“ಮಹಾ ಅರ್ಚಕ ಅಂದಿರಾ ?"
“ಹೌದು. ವಿಸ್ಮಯಕರ ಅಲ್ಲವೆ ? ಇದು ಧರ್ಮದಿಗ್ವಿಜಯದ
ಸೋಗು.
ಇಡೀ ಐಗುಪ್ತಕ್ಕೆ ನೀರಾನೆ ಪ್ರಾಂತ ಪಾಠವಾಗಲಿ ಅಂತ.”
ಸೆಮನೆಂದ :
“ರಾಜಕೀಯದ ಚಕಮಣೆ ಆಟದಲ್ಲಿ ಮಹಾ ಅರ್ಚಕರ ಕೈ ಮೇಲಾ
ಗಿದೆ.”
ಜನರನ್ನು ಸುಲಿಯೋದಕ್ಕೆ ಪೆರೋ, ಮಹಾ ಅರ್ಚಕ, ಭೂಮಾಲಿ
ಕರು ಒಂದಾಗಿದ್ದಾರೆ ಅನ್ನಬಹುದು.”
ಇದ್ದಕ್ಕಿದ್ದಂತೆ ಸೆಬೆಕ್ಕು ಕೂಗಿ ನುಡಿದ :