ಪುಟ:Mrutyunjaya.pdf/೬೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೧೯

"ಇದು ಪಾಪಕಾರ್ಯ !”
ಸೆಮ ಕೇಳಿದ :
"ಅವರ ದಂಡು ಬರ್ತಿದೆಯೋ ಹಾಗಾದರೆ ? ”
ಬಟಾ ತುಟ ತೆರೆದ :
“ನಮಗೂ ಅವರಿಗೂ ಅರ್ಧ ರಾತ್ರಿ ಅರ್ಧ ಹಗಲಿನ ಅಂತರ. ನಾವು
ವೇಗವಾಗಿ ಬಂದ್ವಿ. ಅವರೂ ವೇಗವಾಗಿಯೇ ಬೆನ್ನು ಹತ್ತಿರ್ತಾರೆ.”
ಬಿಸಿಯುಸಿರು ಬಿಡುತ್ತ ಖ್ನೆಮ್ಹೊಟೆಪ್ ಗಟ್ಟಿಯಾದ ಸ್ವರದಲ್ಲಿ
ಕೇಳಿದ :
[ಜನರ ಶೋಕ ವಾತಾವರಣವನ್ನು ತುಂಬಿತ್ತು. ಹಲವು ಕಂಠಗಳಿಂದ
ಹೊರಟು ಒಂದಾಗಿ ರೂಪುಗೊಳ್ಳುತ್ತಿದ್ದ ರೋದನ ಪ್ರಮುಖರ ಸಂಭಾಷಣೆಗೆ
ಹಿನ್ನೆಲೆ ಧ್ವನಿಯಾಯಿತು.]
“ಹೇಳಿ ! ಈಗೇನು ಮಾಡ್ಬೇಕು ?”
ಹೆಮ್ಟ : “ಇವತ್ತು ಕತ್ತಲಾಗೋ ಹೊತ್ತಿಗೆ ಅವರ ದಂಡು ಸೇರ
ಬಹುದು.”
ಮೆನ್ನ : "ಅದಕ್ಕೂ ಮುಂಚೆ ಬಂದರೂ ಬಂತೇ. ಮುಂದಿನ ಕೆಲಸ
ವಿಲಂಬವಿಲ್ಲದೆ ಆಗಬೇಕು.”
ಸೆಮ : “ನಾಯಕರಿಗೆ ಅಂತ್ಯವಿಧಿ....”
ಬಟಾ : “ಮೆನ್ನಯ್ಯ ನೆರವೇರಿಸ್ತಾರೆ. ಅವರ ಸೂಚನೆ ಪ್ರಕಾರ
ಏರ್ಪಾಟು.”
ಹೆಮೊನ್ : “ಹಾಗೆ ಆಗಲಿ.”
ಹೆಮ್ಟ : "ಮಧ್ಯಾಹ್ನದ ಹೊತ್ತಿಗೆ ಸ್ವರಕ್ಷಣೆಯ ಯುದ್ಧಕ್ಕೆ ನಾವು
ಸಿದ್ದರಾಗ್ಬೇಕು.”
ಥಾನಿಸ್ : "ನಾಯಕರು ಮೆಂಫಿಸಿಗೆ ಹೊರಟದ್ದು ರಾಜಗೃಹದಿಂದ.
ಈಗ___"
ಸ್ನೊಫ್ರು  : "ದಾರಿಯಲ್ಲಿ ನೆಫಿಸಿಗೆ ತೋರಿಸಿ ರಾಜಗೃಹಕ್ಕೆ
ಹೋಗೋಣ.”