ಪುಟ:Mrutyunjaya.pdf/೬೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

ಮೆನ್ನ : “ಒಂದು ಹಲಗೆ ತರಿಸಿಕೊಂಡು ಹೋಗೋದು
ಸುಲಭವಾಗ್ತದೆ.
ಸೆಬೆಖು : (ಜನರೆಡೆಗೆ ನೋಡಿ) “ಸೆತ' ನಾ ಓ. ಆದರೆ, ಶನ
ಪೆಟ್ಟಿಗೆಯೂ ಬೇಕು ಅಲ್ಲವಾ ?”
ಮೆನ್ನ : “ಹಲಗೆ ತಕ್ಷಣದ ಉಪಯೋಗಕ್ಕೆ, ಮುಚ್ಚಳ ಇಲ್ಲದ ಶವ
ಪೆಟ್ಟಿಗೆ ಗೋರಿಗೆ ಹೋಗುವಾಗ, ಗೋರಿಗೆ ಇಳಿಸಿದ ಮೇಲೆ ಮುಚ್ಚಳದ
ಹಲಗೆ.”
ಸೆಬೆಕ್ಕು : “ ದೋಣಿಕಟ್ಟೆಯ ಬದಿಗೊಡೆಯ ನಿರ್ಮಾಣಕ್ಕೇಂತ
ಹಪು ಕಡಿಸಿರೋ ಎಂಟುನೂರು ಕಲ್ಲುಗಳಿವೆ."
ಹೆಮ್ಟ : “ಗೋರಿ ಕಟ್ಟೋದಕ್ಕೆ ಉಪಯೋಗಿಸೋಣ. ಆದರೆ
ಕಲ್ಲುಗಳನ್ನು ಮಂದಿರದಾಚೆಗೆ ಗೋರಿ ಪ್ರದೇಶಕ್ಕೆ ಸಾಗಿಸೋದು ತಡ
ವಾಗ್ತದೆ.”
ಸೈಫು : “ವಸತಿ ಪ್ರದೇಶದ ಹತ್ತಿರದಲ್ಲೇ ಗುಂಡಿ ತೋಡಿ ಗೋರಿ
ಕಟ್ಟೇಕು. ಮೇಲ್ಗಡೆಯ ನಿರ್ಮಾಣ ಆ ಮೇಲೆ ಮಾಡಿದರಾಯ್ತು.”
ಬಟಾ ಸನ್ನೆ ಮಾಡಿದನೆಂದು ಸೆತ್‌ನಾ ಮತ್ತು ಇಪ್ಪುವರ್ ಪ್ರಮುಖರು
ನಿಂತಿದ್ದಲ್ಲಿಗೆ ಬಂದರು. ವಿಷಯ ತಿಳಿದು ಸತ್ನಾ ಮನೆಯತ್ತ ಓಡಿದ.
ಸೊಪ್ಪು ಮೆನ್ನನೊಡನೆ ಅಂದ :
"ಅಯ್ಯ. ನಮ್ಮ ಬುಡಕಟ್ಟಿನಲ್ಲಿ ಇಂಥ ಗೋರಿ ಇದು ಮೊದಲ್ನೋದು.
ಸಾಮಾನುಗಳು ಏನೇನು ಬೇಕೋ ಹೇಳಿ, ರಾಜಗೃಹದ ಲೆಕ್ಕಿಗ ಇಪ್ಪುನರ್‌
ಒದಗಿಸ್ತಾರೆ.”
ಕಿರಿಯ ವಯಸ್ಸಿನ ಮೆನ್ನನನ್ನು ಇಪ್ಪುವರ್ ಭಕ್ತಿಯಿಂದ ನೋಡಿದ.
ಅವನತ್ತ ತಿರುಗಿ ನಿನ್ನನೆಂದ :
“ಗೋರಿ ವಾಸಕ್ಕೆ ಬುತ್ತಿ. ಹೂ ಹಣ್ಣು ಗಳು. ಮೃತನ ಪುಟ್ಟ
ಪ್ರತಿರೂಪಕಾವ.೦ದ ಮಾಡಿದು , ಆಟದ ಸಾಮಗಿ.. ಬೇಟೆಯ
ಸಾಮಗ್ರಿ, ಪಾದರಕ್ಷೆ, ನಡುವಸ್ಯ, ಪುಕ್ಕಗಳ ಚಾಮರ, ಗೋರಿ ಪ್ರವೇಶಕ್ಕೆ
ಮುನ್ನ ಬಾಯಿ ತೆರೆಯೋದಕ್ಕೆ ಚೂಪು ಕಲ್ಲ.”
ಸ್ನೊಫ್ರು ನಡುವೆ ನುಡಿದೆ :