ಪುಟ:Mrutyunjaya.pdf/೬೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೨೨ ಮೃತ್ಯುಂಜಯ ಅದುರುವ ಗಂಟಲಲ್ಲಿ ಆತನೆಂದ: “ಅದೆಷ್ಟರ ಕೆಲಸ? ಎಲ್ಲ ವ್ಯವಸ್ಥೆ ಮಾಡುತ್ತೇನೆ. ಮೊದಲು ನಾಯಕರ ಮನೆಗೆ ಹೋಗೊಣ." ಸೆಮ ಹೇಳಿದ : “ಹಾ೦. ಹೊo.” ಪುನಃ ಕಾಡಿದ ಕಂಬನಿಯನ್ನು ಅದರ ಪಾಡಿಗೆ ಹರಿಯಲು ಬಿಟ್ಟು ಖ್ನೆಮ್ ಜನಜಂಗುಳಿಗೆ ಮುಖ ಮಾಡಿ ನಿಂತ. ತಲೆಯನ್ನು ತುಸು ತಗ್ಗಿಸಿ, ಒಡೆದ ಧ್ವನಿಯಲ್ಲಿ ಅವನೆಂದ : “ನಾಯಕರನ್ನು ಅವರ ಮನೆಗೆ ಕರಕೊಂಡು ಹೋಗಿ, ನೆಫಿಸ್ ಅಕ್ಕನಿಗೆ ತೋರಿಸಿ, ಅಲ್ಲಿಂದ ರಾಜಗೃಹಕ್ಕೆ ಒಯ್ಯಬೇಕು.” ಮುಂದುಗಡೆ ಇದ್ದವರಿಗೆ ಕೇಳಿಸೀತು. ಅದನ್ನು ಅವರು ತಮ್ಮ ಹಿಂದೆ ಇದ್ದವರಿಗೆ ತಿಳಿಸಿದರು. ಜನ ಸಾಲುಗಟ್ಟುತ್ತಿದ್ದಂತೆ ಜೋಡಿಸಿ ಮಾಡಿದ್ದ ಎರಡು ಮೊಳ ಅಗಲದ ಆಳುದ್ದದ ಹಲಗೆಯನ್ನು ಹೊತ್ತುಕೊಂಡು ಸೆತ್ನಾ ಒಡಿ ಬಂದ. ಲೇಪಿತ ಶವದ ಬಳಿ ಇರಿಸಿ ಅಳತೊಡಗಿದ. ಮೆನ್ನನ ಸೂಚನೆಯಂತೆ ಬಟಾ ನಾಮೋಚ್ಚಾರ ಆರೊಂಭಿಸಿದ. ಎಲ್ಲ ಕಂಠಗಳೂ ಹೇಳಿದುವು : “ಓ ಒಸೈರಿಸ್ ಓ ಒಸೈರಿಸ್ : ಓ ಮೆನೆಪ್ಟಾ ಓ ಮೆನೆಪ್ ಟಾ........ » ದಳಪತಿಯ ದೃಷ್ಟಿಯನ್ನು ಇದಿರಿಸಲು ಅಳುಕಿ ದೂರ ನಿಂತಿದ್ದ ಬೆಕ್ಔಟರ ಬಳಿಗೆ ಖೈಮ್ ನಡೆದು, “ಬನ್ನಿ , ಎತ್ಕೊಳ್ಳಿ" ಎಂದ. ಧ್ವನಿಯ ಮೃದುತನ ಕೇಳಿ ಬೆಕ್ ಔಟರ ದೇಹಗಳಲ್ಲಿ ಜೀವಸಂಚಾರವಾದಂತಾಯಿತು. ಹಿರಿಯರು ಮೆನೆಪ್ಟಾನ ಕಳೇಬರವನ್ನೆತ್ತಿ ಹಲಗೆಯ ವೇಲೆ ಮಲಗಿಸಿದರು. ಹಲಗೆಯನ್ನೆತ್ತಿ 'ಐವತ್ತರ ಶ್ರೇಷ್ಟರ ತಲೆಯ ಮೇಲಿರಿಸಿದರು. (ಎದುರು ಔಟ, ಹಿಂಬದಿಯಲ್ಲಿ ಬೆಕ್.) ಅಶುಧಾರೆಗಳನ್ನು ತಡೆಯುವ ಗೊಡವೆಗೆ ಹೋಗದೆ ಖೈಮ್ ಹೊಟೆಪ್ ಮುಂದೆ ಸಾಗಿದ (ಕಟಿಯಲ್ಲಿ ಕಠಾರಿಯಿಲ್ಲ ಅಧಿಕಾರದ ಕೋಲಿಲ್ಲ, ಕೈಯಲ್ಲಿ.) ಅವನ ಹಿಂದೆ ಮೆನ್ನ. ಅವರ ಹಿಂದೆ ಶವ. ಅದನ್ನು ಹಿಂಬಾಲಿಸಿ