ಪುಟ:Mrutyunjaya.pdf/೬೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ಹಿರಿಯರು. ಅಳುತ್ತಿದ್ದ ಸ್ತ್ರೀಯರು ಹಿಂದಿನಿಂದ. ಬಳಿಕ ಸಾಲಾಗಿ ಬರುತ್ತಿದ್ದ ಪುರುಷ ಸಮುದಾಯ.. (ಊರಿನ ಅರ್ಧಕ್ಕೂ ಹೆಚ್ಚು ಜನ ಅಲ್ಲಿದ್ದರು.) ಅವ ರೆಲ್ಲರ ಹಿಂದೆ, ತಲೆ ಬಗ್ಗಿಸಿಕೊಂಡು ನಿಧಾನವಾಗಿ ನಡೆದು ಬರುತ್ತಲಿದ್ದ, ನೆಖೆನ್

  ತಡೆತಡೆದು ಬಟಾ ಯೋಚಿಸಿದ :

'ಅಬ್ಟು ಯಾತ್ರೆಯಿಂದ ವಾಪಸಾದಾಗ ನಾಲ್ವತ್ತು ಜನ ಇದ್ದೆವು. ಈ ದಾರಿಯಲ್ಲೇ ನಡೆದು ಮನೆ ಸೇರಿದೆವು....... ಆ ಜನ ಇವತ್ತೂ ಇದ್ದರೆ.ಸಮುದಾಯದ ನಡುವೆ ಚೆದರಿ ಹೋಗಿದ್ದಾರೆ..... ಮೆನೆಪ್ಟಾ ನಾಯಕನಾದ ದಿವಸ---- ರಾತ್ರೆ--- ಬಂಧನದಿಂದ ಅವನನ್ನು ಬಿಡಿಸಿಕೊಂಡು, ಪೀಠಪಲ್ಲಕಿಯಲ್ಲಿ ಕುಳ್ಳಿರಿಸಿ, ಅವನ ಮನೆಗೆ ಮೆರವಣಿಗೆಯಲ್ಲಿ ಕರೆದೊಯ್ದೆವಲ್ಲ.......ಆಗ ಪಲ್ಲಕಿಯ ಮುಂದೆ ನಾನು ಕುಣಿಯುತ್ತ ಹೋದೆ..ಈಗ ಅಣ್ಣ ಅಂಗಾತ ಮಲಗಿದಾನೆ; ನಾನೋ-ಸತ್ತಿದ್ದೇನೆ, ಕುಣಿಯಲಾರೆ.'

  • * * *

[ರಾಮೇರಿಯ ಓರಗೆಯವರು ಮುಂದಾಗಿ ಓಡಿ ಬಂದು ತಿಳಿಸಿದರು : “ಮೆರವಣಿಗೆ ಹೊರಟಿದೆ. ನಿಮ್ಮ ತಂದೇನ ಇಲ್ಲಿಗೆ ಕರಕೊಂಡು ಬರ್ತಿದ್ದಾರೆ.")

  • * * *

...... ತುಂಬಿದ ಬಸುರಿ ನೆಫಿಸ್ ಜತೆ ಆ ನಮನೆಯಲ್ಲಿ ಮಲಗುತ್ತಿದ್ದವಳು ಅದೇ ಕೇರಿಯ ಒಬ್ಬಳು ವಯೋವೃದ್ಧೆ, ರಾತ್ರೆ ಅವಳಿಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಆ ಬೆಳಗಿನ ಜಾವ ಬೀದಿಯಲ್ಲಿ ಜನ ಓಡಾಡಿದ ಸದ್ದು ಅವಳಿಗೆ ಕೇಳಿಸಿತು, ಬಳಿಕ ಬಾಗಿಲು ತಟ್ಟಿದ ಸಪ್ಪಳ, “ಸ್ನೋಫು ಮಾವ, ಸ್ನೋಫ್ರು ಮಾವ" ಎಂಬ ಕರೆ. ಎಚ್ಚರಗೊಂಡ ಸ್ನೋಪ್ಪುವಿನ “ಯಾರು ಅದು ?” ಎಂಬ ಪ್ರಶ್ನೆ, “ಯಾಕೆ ಇದೆಲ್ಲ ? ಬಟಾನ ದೋಣಿ ಬಂತೆ? ನಾಯಕರು ಬಂದರೆ?' ಎಂದು ಮುದುಕಿ ಮನಸ್ಸಿನಲ್ಲೆ ಗೊಣಗಿದಳು. ತಾನೂ ಎದ್ದಳು.