ಪುಟ:Mrutyunjaya.pdf/೬೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯಂಜಯ

೬೨೫

ಈಗ ತೊಂದರೆಯಾಯಿತು. ಎಲ್ಲಿ? ಯಾರಿಗೆ?
“ನೆಜಕ್ಕ ನಡಿ, ನಾವು ದೋಣಿಕಟ್ಟೆಗೆ ಹೋಗೋಣ," ಎಂದಳು
ನಿಜ-ಸುಳ್ಳುಗಳ ಪರಿವೆ ಇಲ್ಲದ ನೆಜಮುಟ್ ಮಾತುಗಳನ್ನು ರೂಪಿ
ಸಿದಳು :
“ನಿನಗೆ ಶ್ರಮವಾಗ್ತದೆ. ಅಲ್ಲಿಗೆ ನಡೆದು ಹೋಗೋದು ಸರಿಯಲ್ಲ.
ಅಲ್ಲೆ, ಇನ್ನೇನು ಅವರು ಬಂದೇ ಬತ್ತಾರೆ. ಅಕ್ಕಾ. ದೂರದಲ್ಲಿ ನಾಮೋ
ಚ್ಚಾರ ಕೇಳಿಸ್ತಿದೆಯಾ?”
ಅಸ್ಪಷ್ಟವಾಗಿ ಕೇಳಿಸಿದ್ದು ಉತ್ಸಾಹವಿಲ್ಲದ ನಾಮೋಚ್ಛಾರ.
ದುಗುಡ ತುಂಬಿದ ಧ್ವನಿಯಲ್ಲಿ ನೆಫಿಸ್ ಹೇಳಿದಳು :
“ಇದು ಜಯಕಾರ ಅಲ್ಲವಲ್ಲ ನೆಜಮುಮ್....”
ನೆಜಮುಟ್ ಸಿಟ್ಟಾಗಿ ಅಂದಳು :
“ಅಲ್ಲದೆ ಮತ್ತೇನು ? ನೀನು ಮುಖಕ್ಕೆ ನೀರು ಹಾಕಿಕೊಂಡು
ಬಾ ”
ಹಿಂಬದಿಯ ಹಿತ್ತಿಲಿಗೆ ಇಳಿದಾಗ, ಹೊರಗಿನ ಧ್ವನಿಗಳು ದೂರದಿಂದ
ಅಲೆಯುತ್ತ ಬಂದು ಸ್ಪುಟವಾದುವು.... ನೆಫಿಸಳ ಮೆದುಳು ಧಿಮಿಗುಟ್ಟಿತು,
ಗುಂಡಿಗೆಯ ಬಡಿತ ತೀವ್ರಗೊಂಡಿತು,
ಒದ್ದೆಗೊಳಿಸಿದ ಮುಖವನ್ನು ಅಂಗೈಯಿಂದ ಒರೆಸುತ್ತ ನೆಫಿಸ್ ಒಳಕ್ಕೆ
ಓಡಿಬಂದಳು :
“ಅಕ್ಕ ! ನಾವು ಹೋಗೋಣ ! ಕಟ್ಟೆಗೆ ಹೋಗೋಣ !”
“ಬೇಡ ನೆಫಿ ಮೂರು ತಿಂಗಳೇ ಕಾದಿದೀಯಂತೆ, ಕಟ್ಟೆಯಿಂದ
ಇಲ್ಲಿಗೆ ಅವರು ಬರೋತನಕ ತಡಕೊಳ್ಳೋದಕ್ಕೆ ಆಗೋದಿಲ್ಲವಾ ?”
“ಬೀದಿ ಮೂಲೆಗೆ ಹೋಗಿ ಅವರು ಬರಿದ್ದಾರೋ ನೋಡೇನೆ,” ಎಂದು
ಹೇಳಿ ವೃದ್ದೆ, ನೆಫಿಸಳ ಮೌನವೇ ಸಮ್ಮತಿ ಎಂದು ಬಗೆದು, ಹೊರಕ್ಕೆ
ಇಳಿದಳು.
ದಾರಿಯಲ್ಲಿ ವೃದ್ದೆ, ಜನ ಓಡುತ್ತ ಹೋಗುತ್ತಿದ್ದುದನ್ನು ನೋಡಿ,
ತಾನೂ ನಡಿಗೆಯ ವೇಗ ಹೆಚ್ಚಿಸಿದಳು. ಎದುರು ದಿಕ್ಕಿನಿಂದ ರಾಮೇರಿ

೪೦