ಪುಟ:Mrutyunjaya.pdf/೬೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೨೬

ಮೃತ್ಯುಂಜಯ

ಬರುತ್ತಿದ್ದುದನ್ನು ಕಂಡಂತಾಯಿತು. ಅವನು ಮತ್ತು ಒಬ್ಬಳು ಹೆಂಗಸು. ಬೇಗಬೇಗನೆ ನಡೆಯುತ್ತಿದ್ದರು. ಹುಡುಗನನ್ನು ಹೆಸರು ಹಿಡಿದು ಕರೆಯೋಣ
ಎನಿಸಿತು. ಆದರೂ ಆತ ನಾಯಕರ ಮಗ ಹಡೋ ಅಲ್ಲವೋ ಎಂಬ ಶಂಕೆ
ಮೂಡಿ ಸುಮ್ಮನಾದಳು. ಹಾಗೆಯೇ ಕಟ್ಟೆಯವರೆಗೂ ನಡೆದು, ವಿಷಯ
ತಿಳಿದು, ಕೈಗಳಿಂದ ಹಣೆ ಚಚ್ಚಿ ಗಟ್ಟಿಯಾಗಿ ಅಳತೊಡಗಿದಳು.
....ಒಳಗೆ ಬಂದ ಮಗನನ್ನು ನೆಫಿಸ್ ಬರಸೆಳೆದು ತಬ್ಬಿಕೊಂಡಳು.
“ಅಪ್ಪ ಎಲ್ಲಿ ರಾಮರಿ ? ಏನಾಯ್ತು ರಾಮರಿ ?”
ವಯಸ್ಸಿಗೆ ಮಾರಿದ ಗಟ್ಟಿ ಗಂಟಲಲ್ಲಿ ಬಡಬಡನೆ ರಾಮೆರಿಪ್ಟಾ ಹೇಳ
ತೊಡಗಿದ :
ಅಪ್ಪನ್ನು ವಿಚಾರಣೆ ಆಯ್ತು ಅಮ್ಮ. ನಮ್ಮ ಜೊತೆ ಒಬ್ಬರು ಅಯ
ಬಂದಿದ್ದಾರೆ ಅವರು ಎಲ್ಲಾ ಹೇಳಿದ್ರು. ಬೆಳಗ್ಗಿನಿಂದ ರಾತ್ರಿವರೆಗೆ ವಿಚಾರಣೆ
ಅಯ್ಯ ಹೇಳ್ತಾರೆ: 'ವಿಚಾರಣೆ ಆದದ್ದು ನಾಯಕರದಲ್ಲ; ಪೆರೋ__ಮಹಾ
ಅರ್ಚಕ__ಅಮಾತ್ಯರದು; ತೀರ್ಪುಕೊಟ್ಟದ್ದು ಮೆನೆಪ್ ಟಾಅವರಲ್ಲ.”
“ಅಯ್ಯೋ ! ಅಯ್ಯೋ ! ಅಪ್ಪನಿಗೆ ಹೊಡೆದ್ರಾ?”
ಮತ್ತಷ್ಟು ಗಟ್ಟಿಯಾಗಿ ರಾಮರಿಪ್ಟಾ ನುಡಿದ:
“ಇಲ್ಲ. ಹೊಡೀಲಿಲ್ಲ. ಅದು ಬೇರೆ ಶಿಕ್ಷೆ. ಅಪ್ಪ ಯಾರಿಗೂ ತಲೆ
ಬಗ್ಗಿಸಿಲ್ಲ. ತುಟಿ ಪಿಟಕ್ ಮಾಡ್ಲಿಲ್ಲ. ನೂರಾರು ಯೋಧರು, ಬಕಿಲ,
ಟೆಹುಟ,__ಕಿರೀಟ ಇಟ್ಕಂಡ, ಕೋಲು ಹಿಡಕೊಂಡ, ಕೂರಿಗಳು
ಪಾಪಿಗಳು! ಅಪ್ಪ ಯಾರಿಗೂ ಹೆದರಲಿಲ್ಲ, ಸಾವಿರಾರು ಜನ ಬಡವರು
ಇದ್ದರು, ಎಲ್ಲಾ ನಮ್ಮವರೇ....”
"ಅಯ್ಯೋ ! ಆ ಮೇಲೆ ಏನಾಯ್ತು ರಾಮರಿ ? ನೀವೆಲ್ಲ ಅಲ್ಲಿಂದ
ಅಪ್ಪನನ್ನು ಕರಕೊಂಡು ಬಂದ್ರಾ ?”
ಮುಖ ಕಿವುಚಿಕೊಂಡಂತಾಯಿತು ರಾಮೆರಿಪ್ಟಾಗೆ, ಕಣ್ಣುಗಳಲ್ಲಿ
ನೀರು.
“ಹ್ಞ ಅಮ್ಮ. ಕರಕೊಂಡು ಬಂದಿದ್ದೇವೆ. ಇನ್ನು ಅಪ್ಪ ಇಲ್ಲ
ಅನ್ನು”
“ಹಾ ? ಅಹೂರಾ? ರಾಮೇರಿ ಏನು ಹೇಳಿದ್ದಾನೆ ?”