ಪುಟ:Mrutyunjaya.pdf/೬೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೨೭

ಅಹೂರಾ ಉತ್ತರವೀಯಲ್ಲಿಲ್ಲ. ರೋದಿಸತೊಡಗಿದಳು.
ಕೀರಲು ಧ್ವನಿಯಲ್ಲಿ ರಾಮೊರಿಪ್ಟಾನೆ ಮತ್ತೂ ಅಂದ :
“ಅಪ್ಪ ದೂರ ಹೋಗಿದ್ದಾನೆ. ಒಸೈರಿಸ್‌ನ ರಾಜ್ಯಕ್ಕೆ, ಮತ್ತೆ ಬಾನೆ
ಅಮ್ಮ, ಮತ್ತೆ ಬತ್ತಾನೆ.”
ತಾಯಿಯ ಕಣ್ಣಾಲಿಗಳು ಅಡ್ಡಾದಿಡ್ಡಿಯಾಗಿ ತಿರುಗುತ್ತಿದ್ದುದನ್ನು,
ಅವಳು ಬಾಯಿ ತೆರೆದುದನ್ನು, ದೇಹ ಅತ್ತಿತ್ತ ಓಲಾಡಿದುದನ್ನು ನೆಜಮುಟ್
ಭದ್ರವಾಗಿ ಅವಳನ್ನು ಹಿಡಿದುಕೊಂಡುದನ್ನು ರಾಮರಿಪ್ಟಾ ಕಂಡ.
ತಾಯಿ ರೋದಿಸುವಳೆಂದು ಭಾವಿಸಿ ಅವನೆಂದ :
"ಅಮ್ಮ ಮರೀಬೇಡ, ನೀನು ಮಹಾನ್ ನಾಯಕನ ಹೆಂಡತಿ, ನೀನು
ಐಸಿಸ್ ದೇವತೆಗೆ ಸಮಾನ ಅಮ್ಮ”
ಕೊನೆಯ ಪದಗಳು ನೆಫಿಸ್ಗೆ ಕೇಳಿಸಲಿಲ್ಲ. ಅವಳಿಗೆ ಪ್ರಜ್ಞೆ
ತಪ್ಪಿತ್ತು. ಅಹೂರಾಳು ಧಾವಿಸಿ ಬಂದು ಅವಳನ್ನು ಹಿಡಿದುಕೊಂಡಳು.
ನೆಲದ ಮೇಲೆ ಮಲಗಿಸಿದರು. ಮುಖಕ್ಕೆ ನೀರೆರಚಿದರು. ಬಟ್ಟೆಯ ಚೂರಿ
ನಿಂದ ಗಾಳಿ ಬೀಸಿದರು.
ರಾಮೆರಿಪ್ಟಾ ಕ್ಷೀಣಿಸುತ್ತ ಹೋದ ಧ್ವನಿಯಲ್ಲಿ “ ಅಮ್ಮ,
ಅಮ್ಮ ” ಎನ್ನು ತ್ಯ ಗೋಡೆಗೊರಗಿ ನಿಂತ. ತಬಬನಾ ಬಂದಳು, ಸಂಗತಿ
ಗೊತ್ತಾದೊಡನೆ ಮನೆಯಿಂದ ನೇರವಾಗಿ ಹೊರಟು ಬಂದಿದ್ದಳು ಆಕೆ. ನದೀ
ತಟದಿಂದ ನೆಫರುರಾ ಮತ್ತು ಅನ್ನು ವೀರನ ವಿಧವೆ ಬಂದು ತಲುಪಿದರು.
ಅಳು ಒತ್ತರಿಸಿ ಬರುತ್ತಿದ್ದ ಗಂಟಲುಗಳೇ ಎಲ್ಲಾ. ಆದರೆ ನೆಫಿಸ್ಗೆ ಪ್ರಜ್ಞೆ
ತಪ್ಪಿದುದನ್ನು ಗಮನಿಸಿ, ತಮ್ಮ ಸಂಕಟವನ್ನು ಅವರು ಅದುಮಿ ಹಿಡಿದು,
ನೆಫಿಸಳ ಬಳಿ ಕುಳಿತರು.
“ಇನ್ನೇನು ಕಟ್ಟೆಯಿಂದ ಹೊರಡ್ತಾರೆ. ಮೊದಲು ಇಲ್ಲಿಗೇ ಬಝಾರಂತೆ,”
ಎಂದಳು ಅನ್ನುವಿನ ವಿಧವೆ, ಕಡಿಕಡಿದ ಸ್ವರದಲ್ಲಿ.
ನೆಜಮುಟ್ ಅಗ್ಗಿಷ್ಟಿಕೆಯ ಮೂಲೆಯಲ್ಲಿದ್ದ ಮರಿಗೆಗಳಲ್ಲಿ ತಡಕಾಡಿ
ಈರುಳ್ಳಿ ಹುಡುಕಿ ತೆಗೆದು, ಅದನ್ನು ಜಜ್ಜಿ ನೆಫಿಗಳ ಮೂಗಿನ ಬಳಿ ಹಿಡಿದಳು.
ಕ್ರಮೇಣ ನೆಫಿಸ್‌ಗೆ ಪ್ರಜ್ಞೆ ಮರಳಿತು. ಕಣ್ಣುಗಳ ಜಡತೆ ಕರಗಿತು.