ಪುಟ:Mrutyunjaya.pdf/೬೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೨೯

“ನೆಫಿಸ್, ನಿನ್ನನ್ನು ತಂಗಿ ಅಂತ ಕರೆಯೋದಿಲ್ಲ. ನಮ್ಮ ಬುಡಕಟ್ಟಿನ
ಮಹಾನ್ ನಾಯಕನ ಮಡದಿಯಾದ ನೀನು ಇನ್ನು ನಮ್ಮೆಲ್ಲರ ತಾಯಿ.
ನಾವು ಅದೃಷ್ಟಹೀನರು. ನಿನ್ನ ವೈಯಕ್ತಿಕ ದುಃಖ ಇಡೀ ಸಮುದಾಯದ
ಶೋಕ, ಏನೋ ಮಾಡಲು ಹೋಗಿ ಇನ್ನೇನೋ ಆಯಿತು. ನೀನು
ವಿಧವೆಯಾದೆ, ನಾವೆಲ್ಲ ತಬ್ಬಲಿಗಳಾದೆವು. ಅಮ್ಮ, ಈ ಲೋಕದ ಮೇಲಿನ
ಪುಟ್ಟ ಬದುಕಿನಲ್ಲಿ ನಿನ್ನ ಸಂಗಾತಿಯಾಗಿದ್ದವನನ್ನು ಕರೆದುಕೊಂಡು ಬಂದಿ
ದ್ದೇವೆ. ಕಡೆಯ ಸಲ ನೋಡಿ ಬೀಳ್ಕೊಡು. ರಾಜಗೃಹಕ್ಕೆ ಒಯ್ದು,
ಅಲ್ಲಿಂದ ಶಾಶ್ವತ ಮನೆಗೆ ಸಾಗಿಸ್ತೇವೆ.”
ಮಾತುಗಳು. ಬಿಸಿಬಿಸಿಯಾಗಿ ನೆಫಿಸಳ ಕಿವಿಗಳನ್ನು ಹೊಕ್ಕು ಹೃದಯ
ವನ್ನು ಹೆಪ್ಪು ಗಟ್ಟಿಸುತ್ತಿದ್ದ ಪದಗಳು.
ಖ್ನೆಮ್ ಬಾಗಿಲಲ್ಲಿ ನಿಂತಿದ್ದ. ಪ್ರೊಫು ಸನ್ನೆ ಮಾಡಿದೊಡನೆ ಬದಿಗೆ
ಸರಿದ. ಆಗಲೇ ತಲೆಗಳ ಮೇಲಿಂದ ಕೆಳಕ್ಕಿಳಿಸಿದ್ದ ನಾಯಕನ ಕಳೇಬರವನ್ನು
ಹಿರಿಯ ಸಮಿತಿ ಸದಸ್ಯರು ಎತ್ತಿಕೊಂಡು ಒಳಬಂದರು. ಜತೆಗಿದ್ದರು ಬಟಾ,
ಮೆನ್ನ.
ಒಳ ತಂದುದನ್ನು ನಡುಮನೆಯಲ್ಲಿ ನೆಫಿಸಳ ಎದುರು ನೆಲದ ಮೇಲೆ
ಇರಿಸಿದರು.
ಸ್ನೊಫ್ರು ಅಂದ:
“ಅಮ್ಮ, ನಾಯಕನನ್ನು ನಿಮ್ಮೆದುರು ಮಲಗಿಸಿದ್ದೇವೆ. (ಸ್ವಲ್ಪ
ತಡೆದು) ಇಲ್ಲಿ ನೋಡು. ಇವರು ನಾಯಕನಿಗೆ ರಕ್ಷಿತ ಲೇಪ ಮಾಡಿದ
ಅಯ್ಯ. ಮೆಂಫಿಸಿನಿಂದ ನಮ್ಮವರ ಜೊತೆ ಬಂದರು.”
ನೆಫಿಸ್ ಕತ್ತನ್ನು ಮೇಲಕ್ಕೆ ಎತ್ತಿದಳು. ಕಣ್ಣು ಗಳು ಮುಚ್ಚಿಯೇ
ಇದ್ದುವು. ಅರೆತೆರೆದಳು. ದೃಷ್ಟಿ ಅಲ್ಲಿದ್ದವರನ್ನು ಗುರುತಿಸಲು ಯತ್ನಿಸಿತು.
ಮೆನ್ನನ ಮೇಲೆ ತಂಗಿತು..
ಸಂತವಿಡುವ ಮಾತುಗಳನ್ನು ಆಡಲು ಮೆನ್ನ ಸಿದ್ಧನಿದ್ದ. ಆದರೆ ಈ
ಐಸಿಸ್ ರೋದಿಸುತ್ತಲೇ ಇಲ್ಲವಲ್ಲ....
“ಹದಿನಾಲ್ಕು ಹೋಳು”.... ಎಂದಳು ನೆಫಿಸ್, ಮೆಲ್ಲನೆ.
"ಒಸೈರಿಸ್ ದೇವನನ್ನು ನೆನಸಿಕೊಟ್ಟಿದ್ದಾಳೆ, ” ಎಂದ ಮೆನ್ನ,
ಹಿರಿಯರತ್ತ ತಿರುಗಿ,