ಪುಟ:Mrutyunjaya.pdf/೬೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೩೧

ಕುರಳು ಕತ್ತರಿಸುವ ಆಕ್ರಂದನವಲ್ಲ. ನೆಫಿಸ್ ಇಷ್ಟು ಸಂಯಮದಿಂದ
ಮಾತನಾಡುತ್ತಿರುವಳಲ್ಲ ಎಂದು ಸ್ನೊಫ್ರುಗೆ ವಿಸ್ಮಯ_ಒಂದಿಷ್ಟು ಸಮಾ
ಧಾನ ಕೂಡಾ.
ಸೆಮನೆಂದ :
“ನಮ್ಮ ನಾಯಕರಿಗೆ ರಾಜಯೋಗ್ಯವಾದ ಅಂತ್ಯಕ್ರಿಯೆ ಏರ್ಪಡದೆ.
ಮೆನೆಪೇಟಾ ನಮ್ಮ ಬುಡಕಟ್ಟಿನ__ ನೀರಾನೆ ಪ್ರಾಂತದ ಸುಪುತ್ರ. ನಮ್ಮ
ವರನ್ನು ವಿಮುಕ್ತರನ್ನಾಗಿ ಮಾಡಿದ ಮಹಾಪುರುಷ, ಆತ ಶಾಶ್ವತ ಮನೆ
ಯಿಂದ ಮತ್ತೆ ಬತ್ತಾನೆ, ನಮ್ಮ ಸಮುದಾಯದ ನಾಯಕನಾಗ್ತಾನೆ.
ಆವರೆಗೆ ಒಸೈರಿಸ್ ದೇವನ ಹಾಗೆ ಅವನು ವಿಶ್ರಾಂತಿ ಪಡೀತಾನೆ.... "
ತಲೆಬಾಗಿಸಿ ನೆಫಿಸ್ ಯಾಚಕಿಯಾದಳು :
“ ನನ್ನ ಒಂದು ಮಾತು ನಡೆಸಿಕೊಡಿ. ಶಾಶ್ವತ ಮನೆಯಲ್ಲಿ ನಾಯಕರ
ಸೇವೆ ಮಾಡೋದಕ್ಕೆ ನನಗೆ ಸಮ್ಮತಿ ಕೊಡಿ, ಗೋರಿ ಪ್ರವೇಶಕ್ಕೆ ನನಗೆ
ಅನುಮತಿ ಕೊಡಿ__”
“ ಛೇ! ಛೇ!” ಎಂಬ ಉದ್ಘಾರ ಎಲ್ಲರಿಂದಲೂ.
ರಾಮೆರಿ ಕುಸಿಕುಳಿತು, ತಾಯಿಗೆ ಅಂಟಿಕೊಂಡ.
ಸೆಮ :
"ಇದು ಧರ್ಮಕ್ಕೆ ಸಂಬಂಧಿಸಿದ್ದು, ಅಯ್ಯನವರು ಹೇಳಬೇಕು. ”
ಮೆನ್ನ ಖಚಿತ ವಾಕ್ಕುಗಳನ್ನಾಡಿದ :
“ ಬಹಳ ಹಿಂದೆ ಪೆರೋ ಸತ್ತಾಗ ಗೋರಿಯೊಳಕ್ಕೆ ಜೀವಂತ ವ್ಯಕ್ತಿ
ಗಳನ್ನೂ ತಳ್ಳುವುದಿತ್ತು. ಮಹಾರಾಣಿಯರನ್ನಲ್ಲ.ದಾಸದಾಸಿಯರನ್ನು.
ಮುಂದೆ ವ್ಯರ್ಥವಾಗಿ ಸೇವಕ ಜನ ಸಾಯ್ತಾರಲ್ಲ ಅಂತ, ಆ ನಷ್ಟ ತಪ್ಪಿಸೋ
ದಕ್ಕೆ, ಅವರ ಗೊಂಬೆಗಳನ್ನಷ್ಟೇ ಇಡೋದು ಶುರು ಮಾಡಿದ್ರು. ಮೆನೆಸ್ಟಾ
ಪ್ರಜಾಪೀಡಕ ಪೆರೋ ಅಲ್ಲ. ಕ್ರೂರಿಯಾದ ಮಹಾಅರ್ಚಕನಲ್ಲ. ಇವರು.
ವಾತ್ಸಲ್ಯಮಯಿಯಾದ ಜನನಾಯಕ .ತಮ್ಮ ಕುಡಿಯನ್ನು ಬಸಿರಲ್ಲಿ ಹೊತ್ತಿರುವ
ನಮ್ಮೆಲ್ಲರ ತಾಯಿಗೆ ಗೋರಿಪ್ರವೇಶಕ್ಕೆ ಮೆನೆಪ ಟಾ ಅಣ್ಣ ಅನುಮತಿ
ಕೊಡ್ತಿದ್ದರೆ ? ಧರ್ಮ ಸಮ್ಮತವಂತೂ ಇದು ಖಂಡಿತ ಅಲ್ಲ. ತಾಯಿಯವರು
ಕ್ಷಮಿಸ್ಟೇಕು. ”