ಪುಟ:Mrutyunjaya.pdf/೬೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೩೩

'ಶೋಕದ ದಿನ ಅನ್ನುವೀರನ ಸ್ಮಾರಕ ಸ್ತಂಭವನ್ನು ಹೂಗಳಿಂದ ಅಲಂ
ಕರಿಸಿರಲಿಲ್ಲ. ಬಯಲನ್ನು ದಾಟ, ಉದ್ಯಾನವನ್ನು ಹಾದು, ಮೆಟ್ಟಿಲುಗಳನ್ನೇರಿ,
ಸಭಾಭವನವನ್ನು ಸಮೀಪಿಸಿ, ಔಟ ಬೆಕ್ ತಾವು ಹೊತ್ತಿದ್ದ ನಾಯಕನ
ರಕ್ಷಿತ ಶವವನ್ನು ಇತರರ ನೆರವಿನಿಂದ ವೇದಿಕೆಯ ಮೇಲಿರಿಸಿದರು.
ಜನ ಬಯಲಿನಲ್ಲಿ ಅಲ್ಲಿ ಇಲ್ಲಿ ಗುಂಪುಗಳಾದರು. ಇನ್ನೂ ಅಂತ್ಯ ದರ್ಶ
ನವಾಗದೇ ಇದ್ದವರು ಸಾಲಾಗಿ ನಿಂತು ವೇದಿಕೆಯನ್ನು ಬಳಸಿ ಹೋದರು.
ಹಿರಿಯರು ಸಮಿತಿಯ ಸದಸ್ಯರು ಒಂದೆಡೆ ಕುಳಿತರು__ತುರ್ತು ನಿರ್ಧಾರ
ಗಳನ್ನು ಕೈಗೊಳಲು,
ಸೆಬೆಕ್ಕುಗೊಂದು ಆಸೆ ಇತ್ತು:
" ಇಡೀ ನೀರಾನೆ ಪ್ರಾಂತದ ಜನರನ್ನು ಕರೆಸಿ ಅಂತ್ಯಕ್ರಿಯೆ ನಡೆ
ಸೋದು ಸಾಧ್ಯ ಇದ್ದಿದ್ದರೆ........”
ಅಳಿಯ ಖ್ನೆಮ್ ಕೂಗಾಡಿದ :
“ ರಾ ಆಗಲೇ ಎರಡು ಮಾರು ಬಂದ. ಅವನು ನೆತ್ತಿಗೆ ಬರೋದ
ರೊಳಗೆ ಸಂಸ್ಕಾರ ಮುಗೀಬೇಕು. ಪೆರೋನ ದಂಡು ತಗೊಂಡು ಮಹಾ
ಅರ್ಚಕ ಬರಿರೋದನ್ನು ಮರೆತಿರಾ ? ”
ಗೋರಿಗೆ ನಿವೇಶನ ತೀರ್ಮಾನವಾಯಿತು. ಹಸುವಿನ ಮನೆಯಿಂದ
ನೂರು ಮಾರು ಹಿಂಬದಿಗೆ.
ಆಗಬೇಕಾದ ಕೆಲಸವನ್ನು ಪ್ರೈಮ್‌ಹೊಟೆಪ್ ಗಟ್ಟಿಯಾಗಿ ಸಾರಿದುದೇ
ತಡ, ಜನರ ಇರುವೆ ಸಾಲುಗಳು ಸಿದ್ಧವಾದುವು. ನದೀತಟದಿಂದ ಕಲ್ಲುಗಳು
ನಿವೇಶನಕ್ಕೆ ಬಂದುವು. ಐವತ್ತು ಅರುವತ್ತು ಕಲ್ಲುಕುಟಿಗರು ಕಲ್ಲಗಳ ಅರೆಕೊರೆ
ಗಳನ್ನು ತಿದ್ದಿದರು. ಕಲ್ಲಿನ ಕೆಲಸಗಾರರು ಹತ್ತಡಿ ಆರಡಿ ಆರಡಿ ಗುಣಿ ಅಗೆದರು.
ಛಾವಣಿಯ ಕಲ್ಲು ಹಾಸಿಗೆ ಆಧಾರವಾಗಲು ಮರದ ದಿಮ್ಮಿಗಳೂ ಹಲಗೆಗಳೂ
ಬಂದುವು. ಶವದ ಜತೆ ಗೋರಿಯೊಳಗಿಡಬೇಕಾದ ಸಾಮಗ್ರಿಗಳನ್ನು ಇಪ್ಯುವರ್
ಜೋಡಿಸತೊಡಗಿದ. ಗೋರಿವಾಸಕ್ಕೆ ಬೇಕಾದ ಬುತ್ತಿಯೂಟವನ್ನು ನೆಫರುರಾ
ಸಿದ್ಧಗೊಳಿಸಿದರೆ ಚೆನ್ನಾಗಿರುತ್ತದೆ ಎನಿಸಿತು ಇಪ್ಪುನರ್‌ಗೆ. ಆದರೆ ಆಕೆ
ನೆಫಿಸ್‌ ಳ ಮನೆಯಲ್ಲಿದ್ದಳು. ಸಾಧ್ಯವೆ? ಎಂದು ಕೇಳಲು ದೂತನನ್ನು ಅಟ್ಟಿದ.