ಪುಟ:Mrutyunjaya.pdf/೬೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೩೬

ಮೃತ್ಯುಂಜಯ

ಎಂದು ಅಸೆಟ್ ಯೋಚಿಸಿದ. ಮಗನಿಗೇನಾದರೂ ಅಪಾಯ ತಟ್ಟೀತು' ಎಂದು
ತೀರ್ಮಾನಿಸಿದ.
ಮತ್ತೂ ಸ್ವಲ್ಪ ಹೊತ್ತಾದ ಮೇಲೆ ಬಂದರು, ಖ್ನೆಮ್ ಹೊಟೆಸ್
ಮತ್ತು ಇಬ್ಬರು ಯೋಧರು,
“ಅರ್ಚಕರಿಗೆ ವಂದನೆ, ” ಎಂದ ಖ್ನೆ ಮ್ ಸ್ವರ ಕರ್ಕಶವಾಗಿತ್ತು.
ಆಶೀರ್ವದಿಸುವವನಂತೆ ಅಪೆಟ್ ತೋಳನ್ನೆತ್ತಿದ. ಚಿಂತೆ ಅಡರಿದ ನೋಟ
ಬೀರುತ್ತ ಅವನೆಂದ :
“ ಏನಾಯಿತಪ್ಪ ? ಶೋಕಾಲಾಪನೆ ಕೇಳಿ ಬರ್ತಿದೆ.”
" ಹಿರಿಯರ ಸಮಿತಿ ನಿಮಗೆ ಇಷ್ಟನ್ನು ತಿಳಿಸಲು ನನಗೆ ನಿರ್ದೇಶ ನೀಡಿ
ದ್ದಾರೆ : ನಾಯಕರು ರಾಜಧಾನಿಯಲ್ಲಿ ನಿಧನರಾದರು. ಇವತ್ತು ಇಲ್ಲಿ ಅವರ
ಶವಸಂಸ್ಕಾರ. ನಿಮ್ಮಲ್ಲಿರುವ 'ಬೆಳಕಿಗೆ ಆಗಮನ' ಗ್ರಂಥವನ್ನು ನೀವು ಕೊಡ
ಬೇಕು.”
“ ಓಹೋ. ಹಾಗೊ ? ನಾನು ಬರುವುದು ಬೇಡವೊ ? ವಾಚನಕ್ಕೆ
ತಾನೆ ಗ್ರಂಥ ?”
ರಾಜಧಾನಿಯಿಂದಲೇ ಒಬ್ಬ ಅಯ್ಯ ಬಂದಿದ್ದಾರೆ. ಧಾರ್ಮಿಕ ವಿಧಿ
ಗಳನ್ನು ಅವರೇ ಮಾಡ್ತಾರೆ.”
ಅಪೆಟ್‌ಗೆ ವಿಸ್ಮಯ. ಹೊಸ ಸಂಗತಿ. ಬೆಳಿಗ್ಗೆ ಕಟ್ಟೆಗೆ ಹೋದ ತನ್ನ
ಹುಡುಗನಿಗೆ ಅದು ಗೊತ್ತಾಗಿರಲಿಲ್ಲ...
“ ಸರಿ, ಆದರೆ ನಾನು ಬರುವುದು....ಹಿರಿಯರ ಸಮಿತಿಯ ಆಜ್ಞೆ
ಆಗಿಲ್ಲವೆ ?”.
“ ಇಲ್ಲ. ನೀವು ಮಂದಿರದಲ್ಲಿಯೇ ಇರಬೇಕಂತೆ. ಕಾವಲಿಗೆ ಇಬ್ಬರು
ಯೋಧರನ್ನು ಬಿಟ್ಟು ಹೋಗೇನೆ.”
“ ಯೋಧರು ? ಮಂದಿರದಲ್ಲಿ ?”
“ ಹ್ಞ. 'ಬೆಳಕಿಗೆ ಆಗಮನ' ಕೊಡಿ.”
"ನಾಯಕರೇ ಹಾಳೆ ಕೊಡಿಸಿದ್ದು, ಹೊಸ ಪ್ರತಿ ಸಿದ್ಧವಾಗಿದೆ.”
“ ಹೊಸದು ಹಳೇದು ಎರಡನ್ನೂ ಪೆಟಾರೀಲಿ ಇಟ್ಟು ಕೊಡಿ. ಅಯ್ಯ
ಬೇಕಾದ್ದನ್ನು ಆರಿಸ್ತಾರೆ.”