ಪುಟ:Mrutyunjaya.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಮೃತ್ಯುಂಜಯ



ಬಿಂದುವಿನಲ್ಲಿ ರಾ ದಕ್ಷಿಣಕ್ಕೆ ಹೊರಳುವ ದಿನ, ಮುಂಜಾನೆಗೆ ತುಸು ಮುನ್ನ,
ಸೊಥಿಸ್ ನಕ್ಷತ್ರ ಉದಿಸ್ತದೆ. ನೀಲ ನದಿಯಲ್ಲಿ ಪ್ರವಾಹ ಬರ್ತಿದೆ___ಅಂತ
ಅದು ಸಾರ್ತದೆ.ಆ ದಿನದಿಂದ ಐಗುಪ್ತದಲ್ಲಿ ಹೊಸ ವರ್ಷ ಆರಂಭ. ನೀವೆಲ್ಲ
ತಿಳಿದಿರೋ ಹಾಗೆ ಇದು ನದಿಯ ಎರಡೂ ದಂಡೆಗಳನ್ನು ನೂರು ದಿನ ನೀರಲ್ಲಿ
ಅದ್ದೋ ಭಾರೀ ಪ್ರವಾಹ. ಹೊಲಗಳಲ್ಲಿ ಫಲವತ್ತಾದ ಮಣ್ಣನ್ನು ಬಿಟ್ಟು
ಪ್ರವಾಹ ಇಳೀತದೆ. ಪ್ರವಾಹ ಎಷ್ಟು ಎತ್ತರ ಇತ್ತು ಅನ್ನೋದರ ಆಧಾರದ
ಮೇಲೆ ಮುಂದಿನ ವರ್ಷದ ಫಸಲನ್ನೂ ರಾಜಬೊಕ್ಕಸಕ್ಕೆ ಮತ್ತು ದೇವ
ಮಂದಿರಕ್ಕೆ ಸಲ್ಲಬೇಕಾದ ಕಂದಾಯವನ್ನು ಗೊತ್ತುಮಾಡ್ತೇವೆ. ಯಾವಾ
ಗಲೂ ಪ್ರವಾಹದ ಸೌಲಭ್ಯ ಇರೋ ಭೂಮಿ. ಒಮ್ಮೊಮ್ಮೆ ಮಾತ್ರ ಪ್ರವಾಹದ
ಸೌಲಭ್ಯ ದೊರೆಯೋ ಭೂಮಿ, ಪ್ರವಾಹದ ಸೌಲಭ್ಯ ಯಾವತ್ತೂ ಇರದ
ಭೂಮಿ___ಅಂತ ಮೂರು ರೀತಿ ವಿಂಗಡಿಸ್ತೇವೆ. ಕಂದಾಯ ನಿಗದಿ
ಮಾಡೋದು ಈ ಆಧಾರದ ಮೇಲೆ. ಧರ್ಮಾತ್ಮ ಒಸೈರಿಸ್ ಕೂಡ ಹೆಮ್ಮೆ
ಪಡಬಹುದಾದ ವ್ಯವಸ್ಥೆ ಇದು. ಚಳಿಗಾಲದಲ್ಲಿ ಅಯನ ಬಿಂದು ತಲುಪಿದ
ಮೇಲೆ ರಾ ಉತ್ತರಕ್ಕೆ ಹೊರಳ್ತಾನೆ. ಹಗಲು ದೀರ್ಘವಾಗುತ್ತದೆ. ಕುಯಿಲು
ಆದ್ಮೇಲೆ ನಾವು ಬರ್ತೇವೆ."
ಅಷ್ಟು ಹೇಳಿ, " ಹ ಹಃ ಹಃ " ___ ಎಂದು ಟೆಹುಟಿ ನಕ್ಕ, ತಲೆ
ಗೂದಲನ್ನು ಝಾಡಿಸಿ.
ಇಪ್ಯುವರ್ ಸಮಾಧಾನದ ನಿಟ್ಟುಸಿರು ಬಿಟ್ಟು, ಕೊನೆಯ ಪದಗಳನ್ನೂ
ಬರೆದುಕೊಂಡು, ಸುಪ್ರಸನ್ನನಾಗಿ ತಲೆ ಎತ್ತಿದ. ಅವನ ಮುದ್ದಾದ ಚಿತ್ರಾ
ಕ್ಷರಗಳಿಂದ ಪೆಪೈರಸ್ ನ ಮೂರು ಹಾಳೆಗಳು ಆಗಲೇ ತುಂಬಿದ್ದುವು. ಎರಡು
ವರ್ಷಗಳ ಹಿಂದೊಮ್ಮೆ ಟೆಹುಟಿ ಭೂಮಾಲಿಕರನ್ನು ಉದ್ದೇಶಿಸಿ ಮಾತನಾಡಿದ್ದ.
ಅದು ಚುಟುಕಾಗಿತ್ತು. ಆದರೂ "ಕುಯಿಲು ಆದ್ಮೇಲೆ ನಾವು ಬರ್ತೇವೆ"
ಎಂಬ ವಾಕ್ಯದಿಂದಲೇ ಅದು ಮುಕ್ತಾಯವಾಗಿತ್ತು. ಇಪ್ಯುವರ್ ಯೋಚಿ
ಸಿದ:ಈ ಸನ್ನಿವೇಶ ಹೊಸದು; ಜನಸಾಮಾನ್ಯರು ರಾಜಗೃಹಕ್ಕೆ ಬಂದುದು
ಇದೇ ಮೊದಲು; ಆ ಕಾರಣದಿಂದಲೆ ಟೆಹುಟಿ ದೀರ್ಘವಾಗಿ ಮಾತ
ನಾಡಿರಬೇಕು.
ತನ್ನ ಮಾತು ಏನು ಪರಿಣಾಮ ಮಾಡಿತೆಂದು ತಿಳಿಯಲು ಟೆಹುಟಿ