ಪುಟ:Mrutyunjaya.pdf/೬೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೩೭

“ಓದಿ ಆದ್ಮೇಲೆ ಎರಡನ್ನೂ ತಂದ್ಕೊಡೀಪ್ಪಾ.”
ಮಂದಿರದೊಳಗಿಂದ__ ಗರ್ಭಗುಡಿಯ ಮಗ್ಗುಲು ಕೊಠಡಿಯಿಂದ__
ಪೆಟಾರಿ ಬಂತು. ಅದನ್ನು ತೆಗೆದು, "ಇದು ಹಳೇದು, ಇದು ಹೊಸದು. ಪ್ರತಿ
ಮಾಡಿರೋ ನನ್ನ ಮಗ ಆ ಒಂದು ಕೆಲಸಕ್ಕಾಗಿಯೇ ಈ ಮಂದಿರದ ಅರ್ಚಕ
ನಾಗೋ ಅರ್ಹತೆ ಪಡೆದಿದ್ದಾನೆ,” ಎಂದ ಅಪೆಟ್.
ಖ್ನೆಮ್ ಉತ್ತರವೀಯಲಿಲ್ಲ. ಪೆಟಾರಿಯನ್ನೆತ್ತಿ ತಲೆಯ ಮೇಲಿಟ್ಟು,
ಕೊಂಡು, “ಇಲ್ಲೇ ಕಾವಲಿರಿ” ಎಂದು ಯೋಧರಿಗೆ ಹೇಳಿ ಹೊರಟ.
“ನನ್ನ ಸಹಾಯ ಬೇಕಾದರೆ__”
ಅಪೆಟ್ನ ಮಾತನ್ನು ಅರ್ಧಕ್ಕೇ ತಡೆದು ದಳಪತಿ ಹೇಳಿದ :
“ನಾಯಕರ ನೆನಪಿಗಾಗಿ ರಾತ್ರಿ ವಿಶೇಷ ಪೂಜೆಗೆ ಏರ್ಪಾಟು ಮಾಡಿ.”
ಮುಂದೇನಾಗುತ್ತದೆ ಎಂಬ ಬಗೆಗೆ ದೇವತಾಮೂರ್ತಿಯಿಂದೇನಾದರೂ
ಸೂಚನೆ ಬರುವುದೇನೋ ಎಂದು ತಿಳಿಯಲು ಅರ್ಚಕ ಮತ್ತೆ ಗರ್ಭಗುಡಿಯನ್ನು
ಪ್ರವೇಶಿಸಿದ. ಬಹಳ ಹೊತ್ತಾದ ಮೇಲೆ ದೇವತಾಮೂರ್ತಿಯ ತಲೆಯ ಮೇಲಣ
ಹೂ ಹಣೆಯ ಮೇಲಿಂದ ಇಳಿದು ಕೆಳಕ್ಕೆ ಬಿತ್ತು.
"ಶುಭ ಸೂಚನೆ” ಎಂದುಕೊಂಡ.
ಹೊರಹೋಗಿ ಯೋಧರೆದುರು, "ಮುಖ್ಯವಾಗಿ ದೇವರಲ್ಲಿ ಭಕ್ತಿ ಬೇಕು.
ಭಕ್ತಿ ಕಮ್ಮಿಯಾದರೆ ಗೊತ್ತಾಯ್ತಲ್ಲ__ಏನಾಗದೇಂತ....” ಎಂದ.
ಭಟರು ಆ ಕಡೆ ನೋಡಲಿಲ್ಲ. ಯಾವ ಉತ್ತರವನ್ನೂ ನೀಡಲಿಲ್ಲ,

****

ಭೂಮಾಲಿಕ ಸಿನ್ನುಹೆಯ ಮನೆಯಲ್ಲಿ ಒಂದು ಬಗೆಯ ಸಂತಸ, ಅಪೆಟ್
ನನ್ನು ಕಾಣಬೇಕು ಎನಿಸಿತು ಅವನಿಗೆ. ಧೈರ ಸಾಲಲಿಲ್ಲ. 'ನಾಯಕ ಸತ್ಯನಲ್ಲ
ಇನ್ನು ಮೊದಲಿನಂತೆಯೇ ಆಗ್ತವೆ ; ಗಂಡ ನುಟ್ಮೋಸ್ ಹಿಂದಿನಂತೆ
ಆಗೊಮ್ಮೆ ಈಗೊಮ್ಮೆಯಾದರೂ ಮನೆಗೆ ಬತ್ತಾನೆ.' ಎಂದುಕೊಂಡಳು ನುಟ್
ಮೋಸನ ಮಡದಿ.
ಜೀತ ಮುಕ್ತ ದಾಸದಾಸಿಯರು ದುಃಖಿಗಳು, ಆದ ದುರಂತದ ಪೂರ್ಣ