ಪುಟ:Mrutyunjaya.pdf/೬೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೩೯

ಸ್ಮಶಾನಯಾತ್ರೆ ಬೀದಿಗಳಲ್ಲಿ ತುಂಬಿ ಹರಿಯುವ ನದಿಯಾಯಿತು.
ಮಂದಿರದ ಬಾಗಿಲಲ್ಲಿ ನಿಂತು ನೋಡಿದ ಅಪೆಟ್ಗೆ ಅದು ಮೆಲ್ಲನೆ ತೆವಳುವ
ಹೆಬ್ಬಾವಿನಂತೆ ಕಂಡಿತು. [ಅವನಿಗೆ ಕುತೂಹಲ : ಎಲ್ಲಿಗೆ ಒಯ್ಯುತ್ತಾರೆ ?
ಮಣ್ಣು ಮಾಡುತ್ತಾರೋ ? ಗೋರಿಯಲ್ಲಿಡುತ್ತಾರೆ ? ಯಾವ ಗೋರಿಯ
ನಿರ್ಮಾಣವೂ ಆಗಲಿಲ್ಲವಲ್ಲ ?]
ದಾರಿಯುದ್ದಕ್ಕೂ ಒಸೈರಿಸ್ ಮೆನೆಪ್‌ಟಾರ ನಾಮೋಚ್ಚಾರ.
ಮೆನೆಪ್‌ಟಾನ ಮನೆಬಾಗಿಲಲ್ಲಿ ನೆಫಿಸ್ ಮಗನೊಡನೆ ನಿಂತಿದ್ದಳು.
ಅವಳು ಹೊರ ಬರದಂತೆ ಬಾಗಿಲಿನ ಎಡ ಬಲಗಳಲ್ಲಿ ಕಾವಲಿದ್ದರು ಅಹೂರಾ
ಮತ್ತು ಅನ್ಪುವಿನ ವಿಧವೆ. ಇದು ಸಾಲದೆಂದು, ಮೂರ್ಛಿತಳಾಗಿ ಬೀಳ
ಬಾರದೆಂದು, ತೋಳುಗಳನ್ನು ಆ ಕಡೆ ಈ ಕಡೆ ಹಿಡಿದಿದ್ದರು_ನೆಜಮುಟ್
ಮತ್ತು ತಬಬುವಾ. ಅವರ ಹಿಂದಿದ್ದರು ಬವಾನ ಪತ್ನಿ ಮತ್ತು
ಮಕ್ಕಳು, ಕೆದರಿದ ಕೇಶರಾಶಿಯ ನೆಫಿಸ್ ಮೆರವಣಿಗೆ ಹತ್ತಿರ ಬಂದಂತೆ
ಬಿರು ನೋಟ ಬೀರುತ್ತ ನೋಡಿದಳು. ನಡುಗುವ ಕಂಠದಲ್ಲಿ ತಾನೂ ಧ್ವನಿ
ಗೂಡಿಸಿದಳು ; “ ಓ ಒಸೈರಿಸ್, ಓ ಒಸೈರಿಸ್....ಓ ಮನೆಪ್‌ಟಾ,' ಓ
ಮೆನೆಪ್‌ಟಾ....”
ಮೌನವಾಗಿ ಅಳುತ್ತ, ಬಲಗಡೆಗೆ ಹೊರಳಿ, “ನೆಜಕ್ಕ, ಬುತ್ತಿ
ತಗೊಂಡು ಈಗ ರಾಮೆರಿ ಹೋಗಬೇಕು, ಅಲ್ಲವಾ ?” ಎಂದು ಕೇಳಿದಳು.
ನೆಜಮುಟ್ “ನೀನು ಹೊರಡು ರಾಮೆರಿ,” ಎಂದಳು ಹುಡುಗನಿಗೆ,
" ಹೂಂ ” ಎಂದ ಆತ, "ಜತೆಗೆ ನಿನ್ನ ಮಕ್ಕಳೂ ಹೋಗಲಿ.ನೀನೂ
ಹೋಗು ಬೇಕಾದರೆ,” ನೆಜಮುಟ್ ಎಂದಳು ಬಟಾನ ಹೆಂಡತಿಗೆ,
ರಾಮೆರಿಪ್ಟಾನನ್ನು ಹಿಂಬಾಲಿಸಿ ಅವರೆಲ್ಲ ಬೀದಿಗಿಳಿದರು. ರಾಮೆರಿಯ
ಕೈಯಲ್ಲಿತ್ತು ಬುತ್ತಿಯ ಕಟ್ಟು, ಬಟಾ ಅವನನ್ನು ಹತ್ತಿರಕ್ಕೆ ಕರೆದು ಇನ್ನೊಂದು
ಕೈಯನ್ನು ಹಿಡಿದುಕೊಂಡ. ಬಟಾನ ಮಕ್ಕಳು ತಾಯಿಯೊಂದಿಗೆ, ತಮ್ಮ
“ತಂದೆಯವರ ಹಿಂದೆ, ಬೀದಿಗಡ್ಡವಾಗಿ ಸಾಲಾಗಿ ನೆರೆದರು.
ನೆಫಿಸ್ಗೆ ಪ್ರಜ್ಞೆ ತಪ್ಪಲಿಲ್ಲ. ಪದಗಳನ್ನು ಅರ್ಧಕ್ಕರ್ಧ ನುಂಗುತ್ತ
ಅವಳೆಂದಳು :
"ಮುಗಿಯಿತು....ಎಂಟೊಂಭತ್ತು ವರ್ಷಗಳ ಬಾಳ್ವೆ ಮುಗಿಯಿತು....