ಪುಟ:Mrutyunjaya.pdf/೬೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಮೃತ್ಯುಂಜಯ

ನೀನು ಮಹಾ ನಾಯಕನಾದೆ. ನಾನು ಬಡವಿಯಾಗಿಯೇ ಉಳಿದೆ....ನನ್ನನ್ನು
ಬಿಟ್ಟು ಹೋಗ್ತೀಯಾ ಪ್ ಟಾ....ರಾಮೆರಿಯ ಓ ತಂದೆ ! ಈ ಇನ್ನೊಂದು
ಕುಡಿಯನ್ನು ಹಿರಿಯರಿಗೊಪ್ಪಿಸಿ ನಾನೂ ಬಂದ್ದಿದ್ರೇನೆ ಪ್ಟಾ....”
ಮೆರವಣಿಗೆಯ ಕೊನೆಯಲ್ಲಿ ಒಂಟಿಯಾಗಿ ಸಾಗಿದ, ಶಿಲ್ಪಿ ನೆಖೆನ್.
ಅವನನ್ನೂ ನೋಡಿಯಾದ ಮೇಲೆ ನೆಜ್ಮುಮ್ ಅಂದಳು :
“ ಇನ್ನು ಒಳಗೆ ನಡಿ ನೆಫಿಸ್, ವಿಶ್ರಾಂತಿ ತಗೋ, ”

****

ಎರಡು ಬೀದಿಗಳಲ್ಲಿ ಮೆರವಣಿಗೆ ಸಾಗಿತು. ನಿರ್ಮಾಣವಾಗಿದ್ದ
ಗೋರಿಯ ಬಳಿ ಸಹಸ್ರ ಕೆಲಸಗಾರರು ಮತ್ತು ಹಸು ಮೆರವಣಿಗೆಯನ್ನು ಇದಿರು
ಗೊಂಡರು.
ಶವಪೆಟ್ಟಿಗೆಯನ್ನು ಗೋರಿಯ ಬಳಿ ನೆಲದ ಮೇಲಿಟ್ಟರು.
('ನೀವೆಲ್ಲ ಬಿರನೆ ಬಂದು ನೋಡ್ಕೊಂಡು ಹೋಗೋಕಂತೆ '-ನದೀ
ತಟದಲ್ಲಿದ್ದ ಬೆಕ್‌ಗೆ ಬೈ ಮು ಕಳುಹಿಸಿದ ಸಂದೇಶ. )
ಮೆನ್ನ ಶವಪೆಟ್ಟಿಗೆಯ ಹಾಗೂ ಗೋರಿಯ ಸುತ್ತ- [ತಲೆಯಮೇಲೆ
ಕೆಂಡಪಾತ್ರೆ, ಕೈಯಲ್ಲಿ ಇಕ್ಕುಳ ಕೋಲು | ಶೋಕನರ್ತನ ಆರಂಭಿಸಿದ.
ಬಾಯಿಯಲ್ಲಿ ಮಂತ್ರಪಠನ, ನಡುನಡುವೆ ರಾಗಾಲಾಪನೆ, ಶೋಕಸ್ತ್ರೀಯರ
ರೋದನವಂತೂ ಗಗನಮುಟ್ಟಿತು.
ಗೋರಿಯ ಒಂದು ಮೂಲೆಯಲ್ಲಿ ಮೆಟ್ಟಿಲುಗಳಿದ್ದುವು. ಮೆನ್ನ ಮಂತ್ರ
ಪಠಿಸುತ್ತ ಕೆಳಕ್ಕಿಳಿದು ಬೆಂಕಿ ಪಾತ್ರೆಯನ್ನೂ ಇಕ್ಕುಳ ಕೋಲನ್ನೂ ನೆಲ
ಮನೆಯ ಒಂದು ಮೂಲೆಯಲ್ಲಿ ಇರಿಸಿ ಬಂದ. ಇಪ್ಪು ವರನ ಕೈಯಿಂದ ನೀರಿನ
ಪಾತ್ರೆಯನ್ನು ಇಸಕೊಂಡು ಮತ್ತೆ ಒಳಹೋಗಿ ಗೋರಿಯೊಳಗೆ ಜಲಪೇಕ್ಷಾ
ಳನ ಮಾಡಿ, ಆ ಪಾತ್ರೆಯನ್ನೂ ಅಲ್ಲಿಯೇ ಇಟ್ಟು ಹೊರ ಬಂದು, ಹಿರಿಯರು
ನೋಡಿ ಹೇಳಿದ :
“ನಾಯಕರ ಒಡನಾಡಿಗಳಾಗಿದ್ದವರು ಬಂದು ಬೀಳೊಡಲಿ,”
[ಕೆಳಗಿನಿಂದ ನಾವೆಗಳ ಯಾವ ಸುಳಿವೂ ಇಲ್ಲವೆಂಬುದನ್ನು ಖಚಿತಪಡಿ
ಸಿಕೊಂಡು ಬೆಕ್ ಓಡಿ ಬಂದಿದ್ದ, ತನ್ನ ಐವತ್ತು ಜನ ಭಟರೊಡನೆ, ನಾಯಕ
ರಿಗೆ ನಮಿಸಿ ನದೀತಟಕ್ಕೆ ಮರಳಿ ಧಾವಿಸಲು ಅವನು ಆತುರ ತೋರಿದ. ದಳ
ಪತಿಯು ಮಗ್ಗಲಲ್ಲಿ ನಿಂತ.]