ಪುಟ:Mrutyunjaya.pdf/೬೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೪೧

ಯಾರು ಮೊದಲು?: ಅನಿಶ್ಚಯತೆ ಅನರ್ಥಕಾರಿ, ವಿಲಂಬವಾಗ ಬಾರದು.
ಅಸಹನೆಯಿಂದ ಖ್ನೆಮ್ ನುಡಿದ :
“ ಬೇಗ ! ಅಮ್ಮ ಹೇಳಿದಂತೆ ಮಾಡಿ, ಹಿರಿಯರು ಮುಂದಾಗಬೇಕು.”
ಆ ನಾಲ್ವರು ಶವದ ಪಾದದ ಬಳಿ ನಿಂತು, ಮುಖವನ್ನು ನೋಡಿ ತಲೆ
ಬಾಗಿ ನಮಿಸಿದರು. ಸ್ನೊಪ್ರು_ಸೆಬೆಕ್ಖು ಹಾಗೆಯೇ ಮಾಡಿದರು.
ಗಟ್ಟಿಯಾಗಿ ಅಳುತ್ತ ಬಟಾ ಬಂದ. ಶೈವಮ್ ಹೊಟೆಸ್, ಔಟ, ಬೆಕ್
ಒಟ್ಟಾಗಿ ನಿಂತು ನಮಿಸಿದರು. [ಅದಾದೊಡನೆಯೇ ಬೆಕ್, ಗುಂಪಾಗಿ ನಿಂತಿದ್ದ
ತನ್ನ ಯೋಧರೊಡನೆ, ದಂಡೆಗೆ ಧಾವಿಸಿದ.] ಇಬ್ರುವರಿ ಬಂದು ಕಳೇಬರದ
ಪಾದಗಳ ಮೇಲೆ ತಲೆ ಇರಿಸಿ ಅತ್ಯ, ಗಂಡಸರು, ಹೆಂಗಸರು ಅಂತಿಮ
ವಿದಾಯಕ್ಕೆ ಎಲ್ಲರೂ ಮುಂದಾದರು. ಖೈಮ್ ತೋಳುಗಳನ್ನಷ್ಟೇ ಚಾಚಿ
ಜನರ ನೂಕು ನುಗ್ಗಲನ್ನು ಹತೋಟಿಯಲ್ಲಿಟ್ಟುಕೊಂಡ.
ಮೆನ್ನ ಸೆಮನೊಡನೆ ಅಂದ :ವಿ ಶಿಣಪತಿ
“ ನಾಯಕರಿಗೆ ಎಲ್ಲರೂ ಒಡನಾಡಿಗಳೇ. ಇವರು ಸಾಲುಗಟ್ಟಿ ನಮಿಸ್ತಾ
ಇರಿ, ಈ ಕಡೆಯಿಂದ ಗೋರಿ ವಾಸಕ್ಕೆ ಬೇಕಾದ ಸಾಮಗ್ರಿಗಳನ್ನಿಡುವ ಕೆಲಸ
ಮಾಡಿ ಮುಗಿಸೋಣ.”
ಆ ಸಾಮಗ್ರಿಗಳು ಮೊದಲೇ ಬಂದಿದ್ದುವು.
ಕಾ, ಹೊಲ ಉಳಲು ಮರದ ಪುಟ್ಟ ಹೋರಿಗಳು, ನೇಗಿಲು, ಬಾತು
ಕೋಳಿಯ ಬೇಟೆಗೆ ಹೊಡೆಗೋಲು, ಪೆಪೈರಸ್ ದೋಣಿಯ ಆಕೃತಿ, ಬಣ್ಣದ
ಪುಕ್ಕಗಳ ಬೀಸಣಿಗೆ, ಜೊಂಡಿನ ಪಾದರಕ್ಷೆ, ನೀಲಿಕವಡೆ ಸರ, ಬೆಳ್ಳಿಯುಂಗುರ ?
ಖಿನವ ಚೀಲ, ಧೂಪದ್ರವ್ಯಗಳು, ಶುಭ್ರ ನಡುವಸ್ತ್ರ, ಹಣ್ಣಿನ ಬುಟ್ಟಿಗಳು,
ಹೂವಿನ ರಾಶಿ...
ಚೂಪುಗಲ್ಲೊಂದು ಉಳಿಯಿತು.
ರಾಮೆರಿಪ್ಟಾನ ಕೈಯಲ್ಲಿ ಬುತ್ತಿ ಇದ್ದುದನ್ನು ಗಮನಿಸಿದ ನನ್ನ
ಮೆರಿ, ಒಳಗೆ ಹೋಗಿ ಬುತ್ತಿ ಇಟ್ಟು ಬಾ.” |
'ಯಲ್ಲಿ ನೆಫರುರಾ ಮುಖ ತೋರಿಸಿ, ಅಂಗಲಾಚುವ ಸ್ವರದಲ್ಲಿ,