ಪುಟ:Mrutyunjaya.pdf/೬೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪೨

ಮೃತ್ಯುಂಜಯ

“ರಾಮೆರಿ, ನನ್ನ ಬುತ್ತಿಯನ್ನೂ ತಗೊಂಡು ಹೋಗಪ್ಪ,” ಎಂದಳು. ಅದರಲ್ಲಿ
ದ್ದುವು ಬಿಸಿ ರೊಟ್ಟಿ, ಬೇಯಿಸಿದ ಮಾಂಸದ ತುಣುಕುಗಳು.
ಆ ಬುತ್ತಿಯನ್ನೂ ಪಡೆದುಕೊಂಡು ರಾಮೆರಿ ನಿಧಾನವಾಗಿ ಮೆಟ್ಟಲ
ಗಳನ್ನಿಳಿದ.
[ಕತ್ತಲು ಬೆಳಕು ಒಳಗೆ, ಕಲ್ಲಿನ ಹಸಿವಾಸನೆ. ಅದನ್ನು ತನ್ನ ತಂದೆಯ-
ಅವನ ಚೇತನದ ಹಾಗೂ ಬಾಹ್ಯರೂಪದ_ವಾಸಸ್ಥಾನ; ಆ ಚೇತನ ಮರಳಿ
ಬರುವವರೆಗೆ,ಪುನಃ ನೀರಾನೆ ಪ್ರಾಂತದ ನಾಯಕನಾಗಿ ಜನತೆಯನ್ನು ಮುನ್ನಡೆ
ಸುವವರೆಗೆ....]
ಬುತ್ತಿಗಳನ್ನಿರಿಸಿ ಹಿಂದಿರುಗುವುದು ತಡವಾಯಿತೆಂದು ಮೇಲಿನಿಂದ
ಬಟಾನ ಧ್ವನಿ ಕೇಳಿಸಿತು :
"ರಾಮರಿ....”
ರಾಮೆರಿಪ್ ಟಾಗೆ ಒಂದು ರೀತಿಯ ಆಶ್ಚರ್ಯ. ಕರೆದುದು ಬಟಾ
ಮಾವನೇ. ಆದರೆ ಗಂಟಲು ಅವರ ಗಂಟಲಿನಂತಿಲ್ಲ. ಹಾಗೆ ನೋಡಿದರೆ
ಯಾರೊಬ್ಬರ ಸ್ವರವೂ ಅವರವರ ಸ್ವರದಂತಿಲ್ಲ. ಎಲ್ಲರದೂ ನೋವಿನ ಧ್ವನಿಯೇ
ಒಂದೇ ತೆರೆ, ಒಂದೇ ತೆರ.
“ ರಾಮರಿ.....”
ಕರೆದುದು ಸ್ಕೋಪು ಮಾವನಿರಬೇಕು. ಆದರೆ ಧ್ವನಿ ಮೊದಲು ಕರೇ
ದಧ್ವನಿಯಂತೆಯೇ, ಹಣ್ಣಿನ ಬುಟ್ಟಿಗಳ ಪಕ್ಕದಲ್ಲಿ ಬುತ್ತಿಗಳನ್ನಿಟ್ಟ. ಯಾಕೆ ರೆಕ
ಯುತ್ತಿದ್ದಾರೆ ? ಬಹಳ ಹೊತ್ತಿನಿಂದ ಇಲ್ಲಿಯೇ ನಿಂತಿರುವೆನೇನೊ. ಈ
ಬುಗರಿ.....
ರಾಮೆರಿ ತನ್ನ ನಡುಬಟ್ಟೆಯ ಮಡಿಕೆಯಿಂದ ತನ್ನ ಬುಗರಿಯನ್ನು
ಹೊರತೆಗೆದ. (“ನೀನು ಕೊಡಿಸಿದ್ದು ಅಪ್ಪ.”) ಅದನ್ನು ತನ್ನ ಮನೆಯ
ಬುತ್ತಿಯಬಳಿ ಇಟ್ಟ. (ರಾತ್ರೆ ಹೊತ್ತು ತಂದೆಯ ದೇಹದಿಂದ ಬಾ__ಬೆನ್ನು ಪಕ್ಷಿ_
ಅಲೆಯಲು ಹೊರಟಾಗ ಈ ಬುಗರಿಯನ್ನು ಅದು ಕಾಣಬೇಕು ; ಸಂತೋಷ
ಪಡಬೇಕು.)
ರಾಮೆರಿ ಮೆಟ್ಟಿಲುಗಳನ್ನೇರಿ ಮೇಲೆ ಬಂದ, ಮುಖ
ನಿರ್ವಿಕಾರವಾಗಿತ್ತು.
ಆದರೆ ಪ್ರಬುದ್ಧ ಕರೆಯಿತ್ತು ಅದರಲ್ಲಿ.