ಪುಟ:Mrutyunjaya.pdf/೬೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೪೫

"ಗೋರಿಗೆ ಹೋದವರು ಆ ಕತ್ತಲೆಯಿಂದ ಬೆಳಕಿಗೆ ಆಗಮಿಸ್ತಾರೆ
ಅನ್ನೋದು ನಮ್ಮ ಸಮಾಜದ ತಿಳಿವಳಿಕೆ. ಈ ಭೂಮಿಯ ಮೇಲಿನ ವಿಚಾರಣೆ
ಚಿಲ್ಲರೆ ವಿಷಯ, ಕಟುಕನೂ ವಿಚಾರಣೆ ನಡೆಸಿ ಕುರಿಯ ಕತ್ತು ಕುಯ್ಯಬಹುದು.
ಆದರೆ ಪರಲೋಕದ ವಿಚಾರಣೆ ಮಹತ್ತರವಾದದ್ದು. ಧರ್ಮದೇವತೆ ಒಸೈರಿಸನ
ನ್ಯಾಯಸ್ಥಾನದಲ್ಲಿ ಅದು ನಡೀತದೆ. ನಮ್ಮ ನಾಯಕ ಮೆನೆಪ್ ಟಾ ಅಣ್ಣನನ್ನು
ದೇವರು ವಿಚಾರಣೆಗೆ ಗುರಿಮಾಡುವ ಪ್ರಶ್ನೆಯೇ ಇಲ್ಲ. ಇವರನ್ನು ಕಂಡ ಕ್ಷಣ
ಒಸೈರಿಸ್ ಎದ್ದು ಬಂದು, ಕೈ ಹಿಡಿದು ಕರೆದೊಯ್ದು, ತಮ್ಮ ಸಿಂಹಾಸನದಲ್ಲೇ
ಸ್ಥಳ ನೀಡಿ ಒಟ್ಟಿಗೆ ಕೂಡಿಸಿಕೊಳ್ತಾರೆ. ಆದರೆ ನಮ್ಮ ಪ್ರಾಚೀನ ಅರ್ಚಕರ
ಒಸೈರಿಸನ ನ್ಯಾಯಸ್ಥಾನದಲ್ಲಿ ನಡೆಯುವ ವಿಚಾರಣೆಗೆ ಸಹಾಯಕವಾಗ
ಬೇಕೂಂತ 'ಬೆಳಕಿಗೆ ಆಗಮನ' ಅನ್ನೋ ಗ್ರಂಥ ರಚಿಸಿದ್ದಾರೆ. ಆ ಗ್ರಂಥವನ್ನು
ಗೋರಿಯೊಳಗೆ ಶವದ ಮೇಲೆ ಇಡಬೇಕು. ಅದಕ್ಕೆ ಭಾರೀ ಮೌಲ್ಯ, ಶ್ರೀಮಂತ
ಭೂಮಾಲಿಕರು ಅಂಥ ಮೌಲ್ಯ ಕೊಟ್ಟು ಆ ಗ್ರಂಥವನ್ನು ಕೊಳ್ತಾರೆ. ಅಂಥ
ಗ್ರಂಥವನ್ನು ಎದೆಯ ಮೇಲಿಟ್ಟ ಕ್ಷಣ ಸತ್ತವನು ಮಾಡಿದ ಪಾಪಗಳೆಲ್ಲ ಮಾಯ
ವಾಗ್ತವೆ ಎನ್ನುವುದು ಒಂದು ಭ್ರಮೆ. ಮೋಸ, ನನ್ನ ಅಭಿಪ್ರಾಯದಲ್ಲಿ
ನಾಯಕರಿಗೆ ಅಂಥ ಗ್ರಂಥ ಬೇಕಾಗಿಲ್ಲ. ಆದರೆ ಊರಿನ ಮಂದಿರದಲ್ಲಿ ಹಿಂದೆ
ಒಂದು ಪ್ರತಿ ಇತ್ತು. ಈಗ ಇನ್ನೂ ಒಂದಿದೆ. ಸರಿ. ಮೂಲಪ್ರತಿ ಇಲ್ಲಿ
ಪೆಟಾರಿಯಲ್ಲಿದೆ. ಹೊರಕ್ಕೆ ತೆಗೆದು ಗೋರಿಗೆ ಕಳಿಸೋಣ. ಹೀಗೆ ಮಾಡಿದರೆ
ನಿಮಗೆ ಸಂತೋಷವಾಗ್ತದೆ. ಎಲ್ಲಿ, ಮೃತ ಪರಿಶುದ್ಧ ಅಂತ ಮೂರು ಸಲ
ಅನ್ಪುವೀರನ ಅಂತ್ಯಕ್ರಿಯೆ ನನಪಾಯಿತು, ಬಹ್ವಂಶ ಜನರಿಗೆ,
ಅವರೆಂದರು :
"ಮೃತ ಪರಿಶುದ್ಧ ! ಮೃತ ಪರಿಶುದ್ದ ! ಮೃತ ಪರಿಶುದ್ದ! ”
ಗುಂಪಿನಿಂದ ಮುಂದೆ ಬಂದವನು ನೆಖೆನ್, ಮೆನ್ನನಿಗೆ ಆತ ಹೇಳಿದ :
“ಅಯ್ಯ ! ನಾನು ಪರದೇಶಿ ಶಿಲ್ಪಿ. ನಾಯಕರ ರೂಪವನ್ನು ಹೃದಯ
ದಲ್ಲಿ ಅಷ್ಟೊತ್ತಿಕೊಳ್ಳಲಾ ?”
ಉತ್ತರವನ್ನು ಪ್ರೈಮ್ ನೀಡಿದ :
" ಹೂಂ. ಬೇಗ, ಬೇಗ..”