ಪುಟ:Mrutyunjaya.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮ್ರತ್ಯುಂಜಯ ಭೂಮಾಲಿಕರತ್ತ ನೋಡಿದ. ಅವರು ಬೆಕ್ಕಸ ಬೆರಗಾಗಿ ಮೆಚ್ಚುಗೆಯ ನೋಟ ಬೀರುತ್ತ ಕುಳಿತಿದ್ದರು. ಬಿಸಿಲಲ್ಲಿ ನಿಂತು ಬೆಸುತ್ತಿದ್ದ ಜನಸಾನೂನ್ಯರು, ಅಧಿಕಾರಿಯ ಮಾತು ಮುಗಿಯಿತು . ಮುಂದೇನು? ಎಂದು ಮೆನೆಸ್ ಟಾ ಸ್ನೋಫುರತ್ತ ನೋಡಿದರು. ಸ್ನೊಫ್ರ ನೆನಪ್ ಟಾನ ಮೆಸೆಪ್ಟಾನ ಕಿವಿಯಲ್ಲಿ ಏನನ್ನೋ ಉಸುರಿದ. ಮೆನೆಪ್ ಟಾ ಸಮ್ಮತಿ ಸೂಚಕವಾಗಿ ತಲೆಯಾಡಿದ.’ ಟೆಹುಟಿಯ ವರ್ತನೆ ತುಸು ವಿಚಿತ್ರವಾಗಿ ಕಂಡಿತ್ತು ಗೇಬುಗೆ. ರಾಜ ಧಾನಿಯಿಂದ ಪ್ರಾಂತಪಾಲನೆಂದು ನೇಮಕಗೊಂಡು ಆತ ನೀರಾನೆ ಪ್ರಾಂತಕ್ಕೆ ಬಂದು ಆಗಲೇ ಏಳು ರ್ಷಗಳಾಗಿದುವು. ಮೊದಲನೆಯ ಮೂರು ವರ್ಷ ಕಂದಾಯ ವಸೂಲಿಗೆ ಬಂದವನು ಒಬ್ಬ ನೃದ್ದ ಅಧಿಕಾರಿ. ಕಡಿಮೆ ಮಾತಿ ನವನು. ಅನಂತರ ಬರತೊಡಗಿದ ಟೆಹುಟ ಆ ನ್ರದ್ಧನಿಗಿಂತ ತೀರಾ ಭಿನ್ನ ーತೀರಾ.

ಗೇಬು ಅಂದಕೊಂಡ:ಇನನು ಒಂದು ದಿನ ಅಮಾತ್ಯನಾಗೋದ ರಲ್ಲಿ ಸಂದೇಹವೂ ಇಲ್ಲ.

ಗೇಬು" ಬೆಚ್ಚಿಬಿದ್ದಹಗೆ ಗೇಬು ತನ್ನನು ಹೆಸರು ಹಿಡಿದು ಕರೆದ ಟೆಹುಟಿಯತ್ತ ನೋಡಿದ. "ಹೇಳೋಣನಾಗಲಿ." ನಮ್ಮ ಭೂಮಾಲಿಕ ಮಿತ್ರರಿಂದ ಸಂದಾಯವಾಗಬೇಕಾದ ಕಂದಾಯ ಎಷ್ಟು ಅನ್ನೋದು ದಾಖಲೆಗಳಲ್ಲಿದೆ. ಲಿಪಿಕಾರ ಬರೆದಿಟ್ಟಿದಾನೆ. (ಸೆತೆಕ್ ನಖ್ತ್ ಮತ್ತಿತರರ ಕಡೆ ತಿರುಗಿ) ನೆಮ್ಮ ಆಕ್ಷೇಪಣೆಗಳು ಏನಾದರು ಇನೆಯೋ? " ಸೆತೆಕ್ ನಖ್ ಎದು ನಿಂತು ಹೇಳಿದ : ಪೆ ಆಯುರಾರೋಗ್ಯ ವರ್ಧಿಸಲಿ ! ನನ್ನ ಆಕ್ಷೇಪಣೆಯೇನೂ ಇಲ್ಲ ಮಹಾಶಯ. ಇನ್ನು ಸ್ವಲ್ಪ ಹೊತ್ತಿನಲ್ಲೇ ರಾಜಗೃಹದ ಕಣಜಕ್ಕೆ ಕಂದಾಯ ತಲುಸಿಸ್ತೆನೆ" ಸೆತೆಕ್ ನಖ್ತ್ ಗೆ ಕುಳಿತುಕೊಳ್ಳುವಂತೆ ಸನ್ನೆ ಮಾಡಿ ಟೆಹುಟೆ ಕೇಳಿದ: