ಪುಟ:Mrutyunjaya.pdf/೬೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೪೭

ನನ್ನ ನಲ್ಲೆಯ ಒಲವು ನಲಿದಿದೆ
ನದಿಯ ತಟದಲ್ಲಿ
ಕೂರ್ರ ಮೊಸಳೆಯು ಅವಿತು ಕುಳಿತಿದೆ
ನೆರಳ ಮರೆಯಲ್ಲಿ......
ನನ್ನ ನಲ್ಲೆಯ ಒಲವು ನಲಿದಿದೆ
ನದಿಯ ತಟದಲ್ಲಿ........”
ತನ್ಮಯರಾಗಿ, ಲೆಯಾಡಿಸುತ್ತ, ಜನ ಆಲಿಸಿದರು ; ನಾಯಕನ
ಪ್ರೀತಿಯ ಹಾಡನ್ನು , ತಮ್ಮೆಲ್ಲರ ಒಲವಿನ ಪ್ರೇಮಗೀತವನ್ನು,
ಬಟಾ ಬದಿಗೆ ಸರಿದೊಡನೆ ಮೆನ್ನ ಇಪ್ಪುನರ್‌ನತ್ತ ತಿರುಗಿ "ಚೂಪುಗಲ್ಲು”
ಎಂದ. ಇಪ್ಯುನರ್ ಅದನ್ನು ಎತ್ತಿಕೊಟ್ಟ, ಲೇಪಿತ ಶವಬಾಯಿಗೆ ಕಲ್ಲಿ
ನಿಂದ ಗೀರು ಹಾಕಿ, ಅದು ತುಸು ತೆರೆದುಕೊಳ್ಳುವಂತೆ ಮಾಡಿದ.
ಕಳೇಬರವನ್ನು ಮನ್ನನೂ ಹಿರಿಯರೂ ಗೋರಿಯೊಳಕ್ಕೆ ಇಳಿಸತೊಡಗಿ
ದಂತೆ ಜನ ಅತ್ತ ನುಗ್ಗಲು ಯತ್ನಿಸಿದರು. ಪ್ರೈಮ್ ಹೊಟೆಪ್ ತೋಳುಗಳನು
ಅಡ್ಡ ಹಿಡಿದ. ಜನ ಹಿಂದಕ್ಕೆ ಸರಿದರು.
ಗೋರಿಯೊಳಗೆ ಮೆನೆಪ್‌ಟಾನನ್ನು ಮಲಗಿಸಿದರು. ಇಪ್ಪುವರ್
ತಂದುಕೊಟ್ಟ ' ಬೆಳಕಿಗೆ ಆಗಮನ' ಗ್ರಂಥವನ್ನು ಆತನ ಎದೆಯ
ಮೇಲಿಟ್ಟರು, ಹಲಗೆಗಳಿಂದ ಶವದ ಪೆಟ್ಟಿಗೆಯನ್ನು ಮುಚ್ಚಿದರು. ಕಣ್ಣು
ಒರೆಸಿಕೊಳ್ಳುತ್ತ ಹಿರಿಯರೂ ಮೆನ್ನನೂ ಹೊರಬಂದರು. ಮೆಟ್ಟಲುಗಳಿದ್ದ
ಸ್ಥಳದ ಮೇಲೆ ಹಲಗೆ ಹಾಸಿ ಕಲ್ಲುಗಳನ್ನಿಡಲು ಹಪು ಮತ್ತು ಅವನ ಸಹಾಯ
ಕರು ಮುಂದಾದರು.
ಒಸೈರಿಸ್-ಮೆನೆಪ್‌ಟಾರ ನಾಮೋಚ್ಚಾರ ಕಿವಿಗಡಚಿಕ್ಕುತ್ತಿರಲು,
ಬಟಾ ಇದ್ದಕ್ಕಿದಿದ್ದಂತೆ ಗೋರಿಯತ್ತ ಓಡಿದ, ನೋಡುತ್ತಿದ್ದವರು “ಹೋ
ಹೋ” ಎಂದು ಕಿರಿಚುತ್ತಿದ್ದಂತೆ ದಡದಡನೆ ಮೆಟ್ಟಲುಗಳನ್ನಿಳಿದ. “ಬಟಾ !
ಬಟಾ ! ಹೊರಗೆ ಬಾ ” ಎಂದು ಕರೆದರು ಹಲವರು.
[ಒಳಗೆ ಬಟಾ ಇದ್ದುದು ಒಂದು ಕ್ಷಣ. ತನ್ನ ಕೊಳಲನ್ನು ಆತ ಶವ
ಪೆಟ್ಟಿಗೆಯ ಬಳಿ ಇರಿಸಿದ, “ಅಣ್ಣಾ!” ಎಂದು ಕರೆದ. ಕಣ್ಣಿನಲ್ಲಿದ್ದ ಕೊನೆಯ