ಪುಟ:Mrutyunjaya.pdf/೬೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪೮

ಮೃತ್ಯುಂಜಯ

ಒಂದೆರಡು ಹನಿಗಳನ್ನು ತಲೆಯಾಡಿಸಿ ಕೊಡವಿದ. ಹೊರಬರಲು ಬೇಗಬೇಗನೆ
ಮೆಟ್ಟಿಲುಗಳನ್ನೇರಿದ.]
ಮೊದಲ ಮೆಟ್ಟಲಿನ ಬಳಿ ರಾಮರಿಸ್ಟಾ ನಿಂತಿದ್ದ. ಮೆನ್ನ ಅವನನ್ನು
ಹಿಡಿದುಕೊಂಡಿದ್ದ. [ಬಟಾ... ಬರಿಗೈಯಲ್ಲಿ ಮೇಲೆ ಬಂದುದನ್ನು ಗಮನಿಸಿ
ದವನು ಮೆನ್ನನೊಬ್ಬನೇ.]
ಹಪು ತನ್ನ ಸಹಾಯಕರಿಗೆ ಆಜ್ಞಾಪಿಸಿದ :
“ಹಲಗೆ ಹಾಸಿ, ಕಲ್ಲು-ಕಲ್ಲು....”
ಗೋರಿಯ ಪಕ್ಕದಲ್ಲಿ ನಿಂತು ಉಚ್ಚ ಕಂಠದಲ್ಲಿ ಮೆನ್ನನೆಂದ :
“ಕೇಳಿರಿ ! ಕೇಳಿರಿ! ನಾಯಕರೀಗ ಭೂಮಿಯ ಮೇಲಿಲ್ಲ. ಅವರು
ಆಕಾಶದಲ್ಲಿದ್ದಾರೆ ! ಕ್ರೌಂಚ ಪಕ್ಷಿಯ ಹಾಗೆ ಆಕಾಶದತ್ತ ಅವರು ಧಾವಿಸು
ತಿದ್ದಾರೆ! ಡೇಗೆಯ ಹಾಗೆ ಆಗಸವನ್ನು ಚುಂಬಿಸುತ್ತಿದ್ದಾರೆ! ಹುಲ್ಲು
ಮಿಡತೆಯಂತೆ ಬಾನಿನತ್ತ ಜಿಗಿದಿದ್ದಾರೆ !....”
“ಶಾಂತಿಯಲ್ಲಿ, ಶಾಂತಿಯಲ್ಲಿ ಮಹಾದೇವನೆಡೆಗೆ ಅವರು ಸಾಗಿದ್ದಾರೆ....”
ಮೆನ್ನ ಸುಮ್ಮನಾದೊಡನೆ, ಜನಸಮುದಾಯ ಹರ್ಷೋದ್ಧಾರ
ಮಾಡಿತು..
ಸೆಮನ ಸೂಚನೆಯಂತೆ ಖೈಮ್ ಹೊಟೆಪ್, ಜನಜಂಗುಳಿಗೆ ಕೇಳಿಸುವ
ಹಾಗೆ ಗಂಟಲಿನ ಶಕ್ತಿಯನ್ನೆಲ್ಲ ಬಳಸಿ, ನುಡಿದ :
"ಇಲ್ಲಿ ಕೇಳಿರಿ ! - ಅಡುಗೆಯಾದ ಕೂಡಲೇ ರಾಜಗೃಹದ ಬಯಲಿನಲ್ಲಿ
ಸಾವಿನೂಟ. ಎಲ್ಲರೂ ಅಲ್ಲಿಗೆ ಹೋಗಬೇಕು__ ಅಲ್ಲಿಗೆ ಹೋಗಬೇಕು.”

೧೬

ದಂಡೆಯಲ್ಲಿ ಕಾಯುತ್ತ ನಿಂತಿದ್ದ ಭಟರಲ್ಲಿ ತೀರಾ ಕೆಳಗಡೆ ಇದ್ದವನು
ಕಟ್ಟೆಯ ಮೇಲಿದ್ದ ಬೆಕ್‌ನೆಡೆಗೆ ಓಡಿ ಬಂದ. ಉದ್ವಿಗ್ನಗೊಂಡ ಧ್ವನಿಯಲ್ಲಿ
ಅವನೆಂದ :