ಪುಟ:Mrutyunjaya.pdf/೬೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೫೦

ಮೃತ್ಯುಂಜಯ

ಬೆಕ್ ಕೂಗಿ ನುಡಿದ:
"ಇದು ಮೋಸ....ಏಳಿ ! ಏಳಿ !”
ಮಂಡಿಯೂರಿದ್ದವರು ಕಕ್ಕಾವಿಕ್ಕಿಯಾದರು. ಏಳಲು ಹಿಂಜರಿದರು.
ದೇವರ ಜಯಕಾರದೊಡನೆ ದೋಣಿಯಿಂದ ಬಾಣಗಳು ದಂಡೆಯ ಮೇಲೆ
ಇದ್ದವರತ್ತ ಬಂದುವು.
ಈ ದೇವರ ಎದುರಲ್ಲೇ ಮಹಾ ಅರ್ಚಕನನ್ನೋ ಇನೇನಿಯನ್ನೋ
ಬಕಿಲನನ್ನೋ ಬಲಿ ತೆಗೆದುಕೊಳ್ಳಬೇಕು, ತಾನು. ಕಾತರದಿಂದ ಬೆಕ್ ಬಾಣ
ಬಿಟ್ಟ.
ಅದು ಹಾಯಿ ಕಂಬಕ್ಕೆ ನೆಟ್ಟತು.
ಬಕಿಲ ಅರಚಿದ :
“ಅವನಿಗೆ !”
ಮೂರು ಬಾಣಗಳು ಬೆಕ್ನ ಎದೆಗೆ ನೆಟ್ಟುವು. ನೀರಾನೆ ಶಿಲ್ಪ ಮೂರ್ತಿ
ಯನ್ನಿರಿಸಿದ್ದ ಶಿಲಾಪೀಠಕ್ಕೆ ಮೊದಲು ಒರಗಿ, ಬೆಕ್‌ ಉರುಳಿದ.
ಆಗಲೇ ಉಳಿದೆರಡು ದೋಣಿಗಳೂ ಅಲ್ಲಲ್ಲಿ ದಡ ತಲಪಿದ್ದುವು.
ಎರಡನೆಯ ದೋಣಿಯಲ್ಲಿದ್ದ ಯೋಧರು ದಡಕ್ಕೆ ಧುಮುಕಿದರು. ಬಿಲ್ಲು,
ಈಟಿ, ಗದೆ, ಕಂಚಿನ ದುಂಡುಗ, ಭರ್ಚಿಗಳು. ಮೂರನೆಯ ದೋಣಿ
ದೇವರನ್ನು ಹೊತ್ತಿದ್ದ ಮೊದಲ ದೋಣಿಯ ಹತ್ತಿರಕ್ಕೆ ಬಂತು.
ನೀರಾನೆ ಪ್ರಾಂತದ ಯೋಧರಲ್ಲಿ ಕೆಲವರು ರಾಜಗೃಹಕ್ಕೆ ಧಾವಿಸಿದರು.
ಕೆಲವರು ಹತರಾದರು. ಗಾಯಗೊಂಡವರ ಕೈಕಾಲುಗಳನ್ನು ಕಟ್ಟಿದರು.
ಉಳಿದವರನ್ನು ಮುಖಾಮುಖಿ ಯುದ್ದದಲ್ಲಿ ನಿರಾಯುಧರನ್ನಾಗಿ ಮಾಡಿದರು.
ಎರಡೂ ಕೈಗಳನ್ನು ಮುಂದಕ್ಕೆ ತಂದು ಮೊಣಗಂಟುಗಳ ಬಳಿ ಕಟ್ಟಿದರು.
ಇನೇನಿ ಬೆಕ್‌ನನ್ನು ನೋಡಿ ಅಂದ :
"ಇವನು ಆ ಮೆನೆಪ್ಟಾನ ಅಂಗರಕ್ಷಕನಾಗಿ ಮೆಂಫಿಸಿನಲ್ಲಿದ್ದ. ಔಷಧಿ
ಗೇಂತ ಒಂದು ಸಲ ಮಂದಿರಕ್ಕೆ ಬಂದಿದ್ದ. ಕಾರಾಗೃಹದಿಂದ ತಪ್ಪಿಸಿ
ಕೊಂಡವನು.”
ಬಕಿಲ ದಡಕ್ಕೆ ಹಾರಿ, ಬಿದ್ದಿದ್ದ ಬೆಕ್ನ ಎದೆಯಿಂದ ಬಾಣಗಳನ್ನು