ಪುಟ:Mrutyunjaya.pdf/೬೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೫೩

ಮಹಾ ಅರ್ಚಕ ದೋಣಿಯ ಛಾವಣಿಯೊಳಗೆ ಅವಿತಿರಬೇಕು ಎನಿಸಿತು.
ಖ್ನೆಮ್ ಹೊಟೆಪನಿಗೆ. ಹೊರಗೆ ದೋಣಿಯಲ್ಲಿ ಕಾಣಿಸಿದವರು ನುಟ್
ಮೋಸ್ ಮತ್ತು ಇನೇನಿ. ಬಕಿಲನನ್ನಂತೂ ದಂಡೆಯ ಮೇಲೆಯೇ ಕಂಡ.
ಅವನು ಬಿಲ್ಲನ್ನೆತ್ತಿಕೊಂಡ, ಬತ್ತಳಿಕೆಗೆ ಕೈಹಾಕಿದ. ಗುರಿಹಿಡಿಯಬೇಕು ಎನ್ನು
ವಷ್ಟರಲ್ಲೆ-ಆ ಗದ್ದಲದಲ್ಲಿ ಹೇಗೆ ನುಗ್ಗಿ ಬಂದರೊ-ಬೀಸಿ ಬಂದ ಒಂದು ಬಲೆ
ಖ್ನೆಮ್ ಹೊಟೆಪ್ ನನ್ನು ಮುಚ್ಚಿತು. ಹಿಂದಿದ್ದವರು ಜಗ್ಗಿದರು. ಆತ ಮುಗ್ಗರಿಸಿ
ಬಿದ್ದ, ಏಳಲೆಂದು ಚಡಪಡಿಸಿದ ಬಲೆಯನ್ನು ಸುರುಳಿಸುತ್ತಿ, ಕೈಗಳಿಗೆ ಕುಣಿಕೆ
ಹಾಕಿದರು.
"ದಳಪತಿ ಸೆರೆಸಿಕ್ಕಿದ್ರು!”
ಅದು ಬರಸಿಡಿಲು.
ಔಟ, " ಹಿಮ್ಮೆಟ್ಟಬೇಡಿ! ಹಿಮ್ಮೆಟ್ಟಬೇಡಿ! " ಎಂದು ಗಂಟಲು
ಬಿರಿಯುವಂತೆ ಕೂಗಿದ. ಜನರ ಹಾಹಾಕಾರದಲ್ಲಿ ಆ ಧ್ವನಿ ಮುಳುಗಿ
ಹೋಯಿತು.
ದೇವತಾಮೂರ್ತಿಯ ಅವಿತು ನಿಂತಿದ್ದ ಇನೇನಿ ಕಟ್ಟೆಯ
ಮೇಲಿದ್ದ ಬಕಿಲನಿಗೆ ಕೂಗಿ ನುಡಿದ. ಔಟನನ್ನು ಬೊಟ್ಟುಮಾಡಿ ತೋರಿ
ಸುತ್ತ ಅಂದ :
“ ಅವನೇ ಔಟ, ಮೆನೆಪಟಾನ ಇನ್ನೊಬ್ಬ ಅಂಗರಕ್ಷಕ, ಕಾರಾಗೃಹ
ದಿಂದ ತಪ್ಪಿಸಿಕೊಂಡವನು.”
ಬಕಿಲನ ಒಕ್ಕಣ್ಣು ಔಟನನ್ನು ನೋಡಿತು. ತೋರು ಬೆರಳು ಅತ್ತ
ಚಾಚಿತು. ಔಟ ಇನೇನಿಯತ್ತ ಬಾಣ ಬಿಡುತ್ತಿದ್ದಂತೆ ಮೂರು ಬಾಣಗಳು
ಔಟನ ಎದೆಗೆ ನೆಟ್ಟುವು. ತನ್ನ ಬಾಣ ಇನೇನಿಯ ತೊಡೆಗಷ್ಟೇ ತಗಲಿದುದು
ಔಟನಿಗೆ ಕಾಣಿಸಿತು. ಬತ್ತಳಿಕೆಯಿಂದ ಹಿರಿದಿದ್ದ ಮತ್ತೊಂದು ಬಾಣವನ್ನು
ಕೈಯಲ್ಲಿ ಹಿಡಿದುಕೊಂಡೇ ಔಟ ನೆಲಕ್ಕುರುಳಿದ.
ಅಳಿದುಳಿದಿದ್ದ ಯೋಧರನ್ನು ಸುತ್ತುವರಿದು, ನಿಶ್ಯಸ್ತ್ರರನಾಗಿ ಮಾಡಿ
ಕೈಗಳನ್ನು ಹಿಂದಕ್ಕೆ ಕಟ್ವಿ ವಿಸ್ತಾರ ಬಲೆಯೊಳಕ್ಕೆ ತುರುಕುವುದು ಆಕ್ರಮಿಸಲು
ಬಂದವರಿಗೆ ಕಷ್ಟವಾಗಲಿಲ್ಲ.
ನುಟ್ ಮೋಸ್ ಮಹಾ ಅರ್ಚಕನಿಗೆ ಅರಿಕೆಮಾಡಿದ :