ಪುಟ:Mrutyunjaya.pdf/೬೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೫೪

ಮೃತ್ಯುಂಜಯ

"ನೂರೇ ಸೈನಿಕರು. ಬಂಡಾಯಗಾರರ ಪಡೆನುಚ್ಚು ನೂರಾಯಿತು.
ತಾವಿನ್ನು ಜನತೆಗೆ ದರ್ಶನವೀಯಬಹುದು. ಕೋಲು ಕೊರಡುಗಳನ್ನು ಕೆಳ
ಗಿರಿಸಿ ಮಂಡಿಯೂರಿದ ಆ ಬಡಪಾಯಿಗಳು ನಿಮ್ಮ ಅಭಯವಿಲ್ಲದೆ ಏಳೋದಿಲ್ಲ.”
ನುಟ್ಮೋಸ್ ತನ್ನ ವಯಸ್ಸಿಗೆ ಮಾರಿದ ಲವಲವಿಕೆಯಿಂದ ಛಾವ
ಣಿಯ ಕೆಳಗಿಂದ ಹೊರಬಂದು ದೋಣಿಯಿಂದಿಳಿದು, ಮಹಾ
ಅರ್ಚಕ ಬೆಳ್ಳಿ
ಹಿಡಿಯ ತನ್ನ ಅಧಿಕಾರ ಕೋಲನ್ನೂರಿ ಕೆಳಗಿಳಿಯಲು ನೆರವಾದ.
ಎದ್ದು, ದಿಗ್ಭ್ರಮೆಗೊಳಗಾಗಿ ಗುಂಪುಗೂಡಿ ನಿಂತಿದ್ದವರೆಡೆಗೆ ನೋಡ್ನಿ
ತೋಳನ್ನೆತ್ತಿ ಮಹಾ ಅರ್ಚಕನೆಂದ:
“ಪ್ ಟಾ ನಿಮ್ಮನ್ನು ಅನುಗ್ರಹಿಸಲಿ !”
ಅನುಗ್ರಹದ ಮಾತನ್ನು ಹೇಪಾಟ್ ಆಡುತ್ತಿದ್ದಂತೆಯೇ ಬಕಿಲನ
ಸೂಚನೆಯಂತೆ ಹಲವು ಯೋಧರು ಆ ಜನರನ್ನು ಸುತ್ತುಗಟ್ಟಿದರು.
ದೇವತಾಮೂರ್ತಿಯನ್ನು ದೋಣಿಯಲ್ಲಿದ್ದ ಕಿರಿಯ ದೇವಸೇವಕರು
ಹೊತ್ತುಕೊಂಡು ಕಟ್ಟೆಯನ್ನೇರಿದರು. ಹೇರು ದೋಣಿಯಿಂದ ಹೊರ
ತೆಗೆದ ಪೀಠಪಲ್ಲಕಿಯಲ್ಲಿ ಹೇಪಾಟ್ ಕುಳಿತ. ಬೋಯಿಗಳು
ಅದನ್ನೆತ್ತಿ
ಅಣಿಯಾದರು.
ಇನೇನಿಯ ಗಾಯಗೊಂಡ ತೊಡೆಗೆ ಒಬ್ಬ ಕಿರಿಯ ದೇವಸೇವಕ ಸೆಣಬಿನ
ಅರಿವೆ ಸುತ್ತಿದ.
ಇನೇನಿ ಗೋಳಿಟ್ಟ :
“ ನಾನು ನಡೀಲಾರೆ. ಸತ್ತು ಹೋದೇನು, ಈ ಸುಡುಗಾಡು
ಊರಲ್ಲಿ ಪಲ್ಲಕಿ ಏನಾದರೂ ಇದ್ದರೆ ತಗೊಂಡು ಬನ್ನಿ. ಅಷ್ಟರವರೆಗೆ
ದೋಣಿಯಲ್ಲೇ ಇದ್ದೇನೆ.”
ನುಟ್ಮೋಸ್ ಅವನನ್ನು ಸವಿಾಪಿಸಿ ಅಂದ :
“ರಾಜಗೃಹದಲ್ಲಿ ಪಲ್ಲಕಿ ಇದೆ. ಕಳಿಸ್ತೇವೆ ಅಯ್ಯ.”
ನೀರಾನೆ ಪ್ರಾಂತದ ಗಾಯಗೊಂಡ ಯೋಧರನ್ನು ಎಳೆದು ಒಂದೇ
ಜಾಗದಲ್ಲಿ ಇರಿಸಿದರು. ಬಂಧಿತ ಯೋಧರನ್ನೂ ಸೆರೆಸಿಕ್ಕಿದ
ಜನರನ್ನೂ
ವಿಸ್ತಾರ ಬಲೆಯಲ್ಲಿ ಬೀಸಿ ಬಿಗಿದರು.