ಪುಟ:Mrutyunjaya.pdf/೬೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೫೬

ಮೃತ್ಯುಂಜಯ

ದಲ್ಲೂ ನೆರೆದಿದ್ದರು, ಸಾವಿನ ಊಟಕ್ಕಾಗಿ. ಅವರಲ್ಲಿ ಒಂದೆರಡು ಸಾವಿರ ಜನ
ರಿಗೆ ಊಟವನ್ನು ಬಡಿಸಿ ಆಗಿತ್ತು, ಅಂಗೈಗಳಿಗೆ, ಎರಡೆರಡು ರೊಟ್ಟಿ, ಗೆಡ್ಡೆ
ಗಳ ಸಿಹಿ ಮತ್ತು ಖಾದ್ಯ ತುಣುಕುಗಳು ಭರದಿಂದ ಸಾಗಿತು ಅಡುಗೆ, ಒಲೆ
ಗಳ ಮುಂದೆ ರೊಟ್ಟಿ ತಟ್ಟುತ್ತ ಹಲವು ನೂರು ಜನ ಮಹಿಳೆಯರು ಕುಳಿತಿದ್ದರು;
ನೂರಾರು ಗಂಡಸರೂ ಇದ್ದರು. ನಾಯಕನಿಲ್ಲದ ರಾಜ್ಯ. ಶೋಕದ
ಬೆಂಗಾಡು. ಹೃದಯದ ನೆಲದಲ್ಲಿ ಭಯದ ಬೀಜಗಳು ಹುದುಗಿ ತೀವ್ರಗತಿ
ಯಿಂದ ಬೇಯುತ್ತಿದ್ದುವು.
ಅಷ್ಟರಲ್ಲಿ ಬಂದಿತು ವೈರಿ ದಂಡಿನ ಆಗಮನದ ಸುದ್ದಿ, ಹಾಯಿಗಳು
ಕಾಣಿಸುತ್ತಿವೆ ಎಂಬ ವಾರ್ತೆ ಮಾತ್ರ. ಮುಂದೆ ಸ್ವಲ್ಪ ಹೊತ್ತಿನಲ್ಲೇ
ಘರ್ಷಣೆಯ ವಿವರ ತಲಪಿತು. ದೇವರೇ ಬಂದಿದ್ದರು ದಂಡಿನೊಂದಿಗೆ !
ಹೆಮ್ಟ ಎಂದ :
“ಖ್ನೆಮು, ಉಳಿದರ್ಧ ದಂಡು ದಂಡೆಗೆ ಧಾವಿಸ್ಬೇಕು. ಅಲ್ಲಿಯೆ,
ನಿರ್ಣಾಯಕ ಹೋರಾಟ. ಬೇಗ, ಬೇಗ !”.
ಔಟನೂ ಅವನ ಐವತ್ತು ಯೋಧರೂ ಖ್ನೆಮ್ ಹೊಟೆಪನೂ ಕೈಗೆ
ದೊರೆತ ಕೋಲು ಕೊರಡುಗಳನ್ನೆತ್ತಿಕೊಂಡ ನೂರಾರು ಜನರೂ ಕಟ್ಟೆಯತ್ತ
ಓಡಿದರು.
ರಾಜಗೃಹದ ಬಯಲಿನಿಂದ ಸಾವಿನ ಊಟ ಬೇಡವೆಂದು ಹೊರಟು
ಹೋಗುವುದಕ್ಕೂ ಹಲವರು ಸಿದ್ಧರಾಗಿದ್ದರು. ಅವರಿಗೆ ಮನೆಯಲ್ಲಿ ಬಿಟ್ಟು
ಬಂದ ಮಕ್ಕಳ ಯೋಚನೆ.... ಮುಂದೇನಾಗುವುದೋ ಎಂಬ ಭೀತಿ....
ನಿರ್ಣಾಯಕ ಯುದ್ಧ ಎಂದಿದ್ದ ಹೆಮ್ಟ. ಅದರಲ್ಲಿ ಸೋಲಾಯಿ
ತೆಂಬ ವಾರ್ತೆ ಬಂತು.
ಹೆಮ್ಟ ಅಂದ :
“ನಿರಾಯುಧರಿಂದ, ಯುದ್ಧದ ತರಬೇತಿ ಇಲ್ಲದವರಿಂದ, ಪ್ರತಿಭಟನೆ
ಹೇಗೆ ಸಾಧ್ಯ ?”
ಸೆಮ ಕೇಳಿದ :
"ಈಗ ?”
ಹೆಮ್ಟ ಉತ್ತರಿಸಿದ :