ಪುಟ:Mrutyunjaya.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೬ ಮ್ರತಂಯಂಜಯ " ಇತರ ಮಿತ್ರರ ಆಕ್ಷೇಪಣೆಗಳು ?” " ಇಲ್ಲ, ಇಲ್ಲ,” ಎಂದರು ಒಬ್ಬಿಬ್ಬರು. “ಯಾರದೂ ఇల్ల," ಎಂದರ ಯಾರೋ ಸಂತೋಷದಿಂದ ಬೀಗಿ ಟೆಹುಟಿ ಅಂದ: "ವಿಸ್ಮಯದ ಸಂಗತಿ ಇವತ್ತು ಇಲ್ಲಿಗೆ ಜನಸಾಮಾನ್ಯರನ್ನೂ ಗೇಬು ಕರೆಸಿದ್ದಾರೆ!” -

ಗೇಬು ತಲೆಯಲ್ಲಾಡಿಸಿ, ತುಸು ಕಹೆಯಾಗಿ ನುಡಿದ:

" ನೀವು ತಪ್ಪ ತಿಳಕೊಂಡಿದ್ದೀರಿ.ನಾನು ಕರೆಸಿಲ್ಲ; ಅವರೇ ಬಂದಿದ್ದಾರೆ.” ಟೆಹುಟಿ ನಕ್ಕ. " ರಾಜಧಾನಿಯಿಂದ ಬಂದಿರೋ ನನ್ನನ್ನು ನೋಡೋಕೆ ಇವರೆಲ್ಲ ತಾವಾಗಿಯೇ ಆಗಮಿಸಿದ್ದಾರೆ ಅಂತ ಇಟ್ಕ್ಕಳ್ಳೋಣ. ವಸೂಲಿ ಯಶಸ್ವಿ ಯಾಗೋದು ನನಗೆ ಮುಖ್ಯ. ಸ್ವತಃ ಸೆತ್ ನ ಜೊತೆ ಬೇಕಾದರೊ ನಾನು ಮಾತಾಡೆತೇನೆ. ಗೇಬು, ಅವರಿಗೆ ಏನು ಬೇಕಂತೆ ?” ಸಮಾಲೋಚನೆಗೆಂದು ಗುಂಪಿನ ನಡುವಿನ ಎರಡು ತಲೆಗಳು ಪರಸ್ಪರ ಸಮೂಪಿಸಿದ್ದನ್ನು ಟೆಹುಟಿಯ ಸುಕ್ಷ್ಮ್ಮದ್ರುಸಿಟಿ ಗಮನಿಸಿತ್ತು. ಗೇಬುಗೆ ಅದು ಕಾಣಿಸಲಿಲ್ಲ, ಆದರೆ, ಬಂದಿದ್ದವರಲ್ಲಿ ಕೆಲವರ ಪರಿಚಯ ಅವನಿಗಿತ್ತು ತೂಕದ ಮಾತಿನ ರೈತ ಸೆಬೆಕು, ಮರದ ಗೊಂಬೆಗಳನ್ನು ಕೊರೆಯುವ ಕುಶಲಕರ್ಮಿ ಸ್ನೋಪ್ಪು, ಅಂಬಿಗ ಬಟಾ.... ಗಂಭೀರವಾಗಿ ಗೇಬು ಕೇಳಿದ: ಹೇಳೋದು ಏನಾದರು ಇದೆಯಾ ಸೆಬೆಕ್ಖ್ಹು?" ತಕ್ಷಣ ಉತ್ತರ ಬರಲಿಲ್ಲವೆಂದು ಗೇಬುಗೆ ಆಶ್ಚರ್ಯ. ಅವನು ನೋಡುತ್ತಿದ್ದಂತೆಯೇ ಸೆಬೆಕ್ಕು ಸ್ನ್ನೊಫ್ಹುನಿನ ಬಳಿ ಸಾರಿದ. ಕೆಲವು ತಲೆಗಳು ಒಂದನೊಂದು ಸಮೂಪಿಸಿದುವು. ಸ್ನೋಫುನೆನಧ್ವನಿ ಕೇಳಿನೆತು: " ನಮ್ಮೆಲ್ಲರ ಪರವಾಗಿ ಮೆನೆಪ್ಟಾ ಮಾತಾಡ್ತಾನೆ.” ಮೆನೆಪ್ಟಾ, ಅದು ಹೊಸ ಹೆಸರು, ಗೇಬುಗೆ. ಅವನೆಂದ : ಯಾರು ಮೆನೆಪ್ ಟಾ? ಮುಂದೆ ಬರಲಿ."