ಪುಟ:Mrutyunjaya.pdf/೬೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೫೮ ಮ್ರುತ್ತ್ಯುಂಜಯ ನುಟ್ಮೋಸ್ ಸಂತೃಪ್ತ, ಅಬುಯಾತ್ರೆಯಲ್ಲಿ ಪೆರೋನ ಪಲ್ಲಕಿ ಹೊತ್ತು ಅದೃಷ್ಟಶಾಲಿಯಾದ ಮೇಲೆ ಒಂದು ವರ್ಷ ಕಾಯಬೇಕಾಯಿತು ಈ ಸುದಿನಕ್ಕಾಗಿ. ಮಹಾ ಅರ್ಚಕರನ್ನೇ ಈಗ ತಾನು ಆಶ್ರಯಿಸಬೇಕು. ಗೇಬು ಮತ್ತೆ ಇಲ್ಲಿಗೆ ಬರುವುದು ಸುಳ್ಳು. ತಾನೇ ಯಾಕೆ ಪ್ರಾಂತಪಾಲ

ನಾಗಬಾರದು ?

ಎರಡು ಕಡೆಗಳ ಜಯಕಾರಗಳು ನಿಂತವು. ದೇವಮೂರ್ತಿಯ ಮುಂದೆಯೂ ಹಿಂದೆಯೂ ಸದ್ದಿಲ್ಲದೆ ನಡೆಯುತ್ತಿದ್ದ ರಾಜಭಟರನ್ನು ಕಂಡು, ಬಯಲಿನಲ್ಲಿದ್ದ ಜನಜಂಗುಳಿ ತೆಪ್ಪಗೆ ನಿಂತಿತು........ - ಸೆಮ, ಮತ್ತು ಸ್ನೊಫ಼್ರು ಬಟಾನನ್ನು ಹತ್ತಿರಕ್ಕೆ ಕರೆದರು. ಸೆವು ಅಂದ : "ಹಿಂದಿನ ಬಾಗಿಲಿನಿಂದ ಓಡು. ನೆಫ಼ಿಸ್,ರಾಮೆರಿ ಇವರಿಗೆ ಸಿಗದಂತೆ ನೋಡಿಕೊ.” ಅಲ್ಲಿಯೇ ಇದ್ದ ಮೆನ್ನನನ್ನು ನೋಡಿ ಸ್ನೋಫು ನುಡಿದ : "ಆಯ್ಯ, ಬಟಾನ ಜತೆ ನೀವೂ ಹೋಗಿ." ಬಟಾ ಮತ್ತು ಮೆನ್ನ ಅವಸರ ಅವಸರವಾಗಿ ರಾಜಗೃಹವನ್ನು ಬಳಸಿ ಹಿತ್ತಿಲಬಾಗಿಲ ಕಡೆಗೆ ಹೋದುದನ್ನು ಬಟಾನ ಅಂಬಿಗರು ನೋಡಿದರು.ಅವರೂ ದೂರದಿಂದ ಈ ಇಬ್ಬರನ್ನು ಹಿಂಬಾಲಿಸಿದರು. ರಾಜಗೃಹದ ಕೊಳದ ಬಳಿ ನಿಂತು ಎಲ್ಲವನ್ನೂ ನೋಡುತ್ತಿದ್ದ ಶಿಲ್ಪಿ ನೆಖೆನ್ನ ಗಮನಕ್ಕೆ ಇದು ಬಿತ್ತು. ಅಂಬಿಗರು ಹೋದ ದಿಕ್ಕಿನಲ್ಲಿ ಅವನನೂ ಹೆಜ್ಜೆ ఇಟ್ಟ. ಎರಡು ಕ್ಷಣ ತಡವಾಗಿದ್ದರೆ ಆ ಆವರಣದಿಂದ ಅವರು ಹೊರಬೀಳು ವುದು ಸಾಧ್ಯವಾಗುತ್ತಿ ರಲಿಲ್ಲ, ಬಕಿಲನ ಸೂಚನೆಯಂತೆ ಪೆರೋನ ಸೈನಿಕರು ರಾಜಗೃಹವನ್ನು ಸುತ್ತು ಗಟ್ಟಿದರು. ರಾಜಗೃಹದ ಎದುರಿಗಿದ್ದ ಉದ್ಯಾನ ನೋಡಿ ಹೇಪಾಟ್ಗೆ 'ಎಲಾ!' ಎನಿಸಿತು. ಶಿಸ್ತು ಸಾಧನೆ ಕಂಡು, “ಇವರು ಪ್ರಚಂಡರು” ಎಂದು ತೋರಿತು. ಆತನೆಂದುಕೊಂಡ: ಈಗಲೇ ಬಗು, ಬಡಿಯದೆ ಇದ್ದಿದ್ದರೆ ಇವರು ಒಂದೆರಡು