ಪುಟ:Mrutyunjaya.pdf/೬೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮ್ರುತ್ತ್ಯುಂಜಯ ೬೫೯ ವರ್ಷಗಳಲ್ಲೇ ಅದಮ್ಯರಾಗ್ರಿದ್ದರು; ಇಡಿಯ ಐಗುಪ್ತವನ್ನೇ ವಾಪಿಸುವಷ್ಟು ಉಗ್ರವಾಗಿತ್ತು ಈ ವಿಷ: ಐಗುಪ್ತ ಸಮಾಜವನ್ನು, ದೇಶವನ್ನು ತಾನು ರಕ್ಷಿಸಿ ದಂತಾಯಿತು: ಮಹಾ ಅರ್ಚಕ ರಾಷ್ಟ್ರ ರಕ್ಷಕ...

ಎಲ್ಲರಿಗಿಂತ ಎತ್ತರದಲ್ಲಿ ಮೆರೆಯುತ್ತಿತ್ತು ಪ್ಟಾ ದೇವಮೂರ್ತಿಯ ಭವ್ಯಾಕರ. ಹೆಚ್ಚುಕಡಿಮೆ ಊರಿನ ದೇವಮಂದಿರದ ಮೂರ್ತಿಯದೆ ರೂಪ. ಆದರೆ ಅದಕ್ಕಿಂತ ದೊಡ್ಡದು. ಹೆಚ್ಚು ಸಮರ್ಥರಾದ ಬಡಗಿಗಳು ಕಡೆದದ್ದು.
  ಮಹಾ ಅರ್ಚಕ ಪೀಠದಿಂದ ಇಳಿದ. ದೇವತಾಮೂರ್ತಿಯನ್ನೂ ರಾಜಗೃಹದ ಎದುರು ಕೆಳಗಿಡಲು ಹೇಳಿದ. ಪಿಸುದನಿ ಹಾವಾಗಿ ಬಯಲಿನಲ್ಲಿ ಹರಿಯಿತು : 'ಹೇಪಾಟ್!' 'ಹೇಪಾಟ್!'

ಇಡಿಯ ಜನಸಮುದಾಯವೇ ಮಂಡಿಯೂರಿತು. ಹೇಪಾಟ್ಗೆ ಹರ್ಷ-ಸಿಟ್ಟು ಎರಡೂ, ತೊಡೆಗಿಷ್ಟು ಬಾಣ ತಗಲಿತೆಂದು ಕಳ್ಳ ಇನೇನಿ ದೋಣಿಯಲ್ಲೇ ಕುಳಿತ. ಅವನ ಮೂಲಕ ಹೇಳಿಸಬಹುದಾಗಿದ್ದ ಮಾತುಗಳನ್ನು ಈಗ ತಾನೇ ಆಡಬೇಕಲ್ಲ.....ಆ ಬಕಿಲನೋ ರಾಜಗೃಹವನ್ನು ಅಕ್ರಮಿಸಲು ಹೊರಟೇ ಬಿಟ್ಟ . ನುಟ್ಮೋಸ್ಗೆ ಸನ್ನೆ ಮಾಡಿ ಕರೆದು ಹೇಪಾಟ್ ಅಂದ; ಆ ಇನೇನಿ ಬೇಕು. ತಕ್ಷಣ ಕರೆತಾ.” “ಗೇಬು ಉಪಯೋಗಿಸ್ತಿದ್ದ ಒಂದು ಪಲ್ಲಕಿ ಇತ್ತು ನೋಡ್ರೇನೆ.” ಎನ್ನತೊಡಗಿದ ನುಟ್ಮೋಸ್. ಹೇಪಾಟ್ ಗದರಿದ : “ಪಲ್ಲಕಿ ಇಲ್ಲವಾದರೆ ತಲೆಯಮೇಲೆ ಹೊತ್ಕೊಂಡು ಬಾ....." ಇನೇನಿಯ ಭಾರ ಹೊತ್ತವನು ಕುಸಿದುಬಿದು ಸಾಯುವುದು ಖಂಡಿತ. ಕೋಸ್ ರಾಜಗೃಹದೊಳಕ್ಕೆ ಧಾವಿಸಿದ. ಅದೃಷ್ಟಶಾಲಿ, ಪಲ್ಲಕಿ ಅಲ್ಲಿತ್ತು.... ಕಿರಿಯ ದೇವಸೇವಕರೆಲ್ಲ ಒಟ್ಟಿಗೆ ಪ್ಟಾ ಸ್ತೋತ್ರವನ್ನು ಹಾಡುವಂತೆ ಮಹಾ ಅರ್ಚಕ ಸೂಚಿಸಿದ .